ಭಾರತದ ರಕ್ಷಣಾ ಉತ್ಪಾದನೆ ಮತ್ತು Defence Industrial Corridors
ಭಾರತದ ರಕ್ಷಣಾ ಉತ್ಪಾದನೆ ಮತ್ತು Defence Industrial Corridors
ಭಾರತದ ರಕ್ಷಣಾ ಉತ್ಪಾದನೆ 2025–26ನೇ ಹಣಕಾಸು ವರ್ಷದಲ್ಲಿ ದಾಖಲೆಯ ₹1.78 ಲಕ್ಷ ಕೋಟಿ ತಲುಪಿದ್ದು, ರಕ್ಷಣಾ ರಫ್ತು ₹38,424 ಕೋಟಿಗೆ ಏರಿಕೆಯಾಗಿದೆ. ಆತ್ಮನಿರ್ಭರ ಭಾರತ ನೀತಿ, ಖಾಸಗಿ ವಲಯದ ಭಾಗವಹಿಸುವಿಕೆ, ಸ್ವದೇಶೀಕರಣ ಮತ್ತು ರಕ್ಷಣಾ ಆಮದು ಅವಲಂಬನೆ ಕಡಿಮೆ ಮಾಡುವ ಕ್ರಮಗಳು ಈ ಬೆಳವಣಿಗೆಗೆ ನೆರವಾಗಿವೆ.
ಕೇಂದ್ರ ಸರ್ಕಾರವು 2029ರ ವೇಳೆಗೆ ರಕ್ಷಣಾ ಉತ್ಪಾದನೆಯನ್ನು ₹3 ಲಕ್ಷ ಕೋಟಿ ಮತ್ತು ರಫ್ತನ್ನು ₹50,000 ಕೋಟಿಗೆ ಹೆಚ್ಚಿಸುವ ಗುರಿ ಹೊಂದಿದೆ. ಇದಕ್ಕಾಗಿ Positive Indigenisation Lists, iDEX, FDI ನೀತಿ ಮತ್ತು Defence Industrial Corridorsಗಳಿಗೆ ಒತ್ತು ನೀಡಲಾಗಿದೆ.

Defence Industrial Corridor ಎಂದರೇನು?
ರಕ್ಷಣಾ ಉಪಕರಣಗಳು, ಶಸ್ತ್ರಾಸ್ತ್ರಗಳು, ವಿಮಾನ ಮತ್ತು ಕ್ಷಿಪಣಿ ಭಾಗಗಳು, ಎಲೆಕ್ಟ್ರಾನಿಕ್ಸ್ ಹಾಗೂ ಸಂಬಂಧಿತ ತಂತ್ರಜ್ಞಾನ ಕೈಗಾರಿಕೆಗಳನ್ನು ನಿರ್ದಿಷ್ಟ ಪ್ರದೇಶಗಳಲ್ಲಿ ಸಮೂಹೀಕರಿಸಿ ಅಭಿವೃದ್ಧಿಪಡಿಸುವ ಕೈಗಾರಿಕಾ ವಲಯವನ್ನು Defence Industrial Corridor ಎಂದು ಕರೆಯಲಾಗುತ್ತದೆ. ಇದರಿಂದ ಹೂಡಿಕೆ, ಉತ್ಪಾದನೆ, ಸರಬರಾಜು ಸರಪಳಿ, ಸಂಶೋಧನೆ ಮತ್ತು ಉದ್ಯೋಗಾವಕಾಶಗಳು ಹೆಚ್ಚುತ್ತವೆ.
ಭಾರತದಲ್ಲಿ ಎರಡು ಪ್ರಮುಖ Defence Industrial Corridors ಇವೆ:
1. Uttar Pradesh Defence Industrial Corridor:
ಪ್ರಮುಖ nodes — ಲಖನೌ, ಕಾನ್ಪುರ, ಝಾನ್ಸಿ, ಆಗ್ರಾ, ಅಲಿಗಢ ಮತ್ತು ಚಿತ್ರಕೂಟ.
2. Tamil Nadu Defence Industrial Corridor:
ಪ್ರಮುಖ nodes — ಚೆನ್ನೈ, ಹೊಸೂರು, ಕೊಯಮತ್ತೂರು, ಸೇಲಂ ಮತ್ತು ತಿರುಚಿರಾಪಳ್ಳಿ.
ಈ corridors ದೇಶೀಯ ರಕ್ಷಣಾ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಿ, MSMEಗಳು, start-ups ಮತ್ತು ದೊಡ್ಡ defence manufacturersಗಳನ್ನು ಒಂದೇ ಉತ್ಪಾದನಾ ಜಾಲದಲ್ಲಿ ಸಂಪರ್ಕಿಸುವ ಉದ್ದೇಶ ಹೊಂದಿವೆ.