Enter your keyword

post

ಗರ್ಭಿಣಿ ಮಿತ್ರ ಕೋರ್ಸ್: ಆಯುರ್ವೇದ ಆಧಾರಿತ ತಾಯಿ–ಮಗು ಆರೋಗ್ಯಕ್ಕೆ ಹೊಸ ಹೆಜ್ಜೆ

ಗರ್ಭಿಣಿ ಮಿತ್ರ ಕೋರ್ಸ್: ಆಯುರ್ವೇದ ಆಧಾರಿತ ತಾಯಿ–ಮಗು ಆರೋಗ್ಯಕ್ಕೆ ಹೊಸ ಹೆಜ್ಜೆ

ಗರ್ಭಿಣಿ ಮಿತ್ರ ಕೋರ್ಸ್: ಆಯುರ್ವೇದ ಆಧಾರಿತ ತಾಯಿ–ಮಗು ಆರೋಗ್ಯಕ್ಕೆ ಹೊಸ ಹೆಜ್ಜೆ

ಸುದ್ದಿಯಲ್ಲೇಕೆ?

ಕೇಂದ್ರ ಆಯುಷ್ ಸಚಿವಾಲಯದ (Ministry of Ayush) ಅಧೀನದ ಸ್ವಾಯತ್ತ ಸಂಸ್ಥೆಯಾದ ನವದೆಹಲಿಯ All India Institute of Ayurveda (AIIA) 2026–27ನೇ ಶೈಕ್ಷಣಿಕ ಸಾಲಿಗೆ ‘ಗರ್ಭಿಣಿ ಮಿತ್ರ (Garbhini Mitra)’ ಕೋರ್ಸ್ ಅನ್ನು ಪರಿಚಯಿಸಿದೆ. ಗರ್ಭಿಣಿಯರು ಮತ್ತು ಹೆರಿಗೆಯ ನಂತರದ ಮಹಿಳೆಯರಿಗೆ ಆರೋಗ್ಯ ಶಿಕ್ಷಣ, ಜೀವನಶೈಲಿ ಮಾರ್ಗದರ್ಶನ ಹಾಗೂ ಸಮುದಾಯ ಮಟ್ಟದಲ್ಲಿ ಸೂಕ್ತ ಬೆಂಬಲ ನೀಡಬಲ್ಲ ತರಬೇತಿ ಪಡೆದ ಸಿಬ್ಬಂದಿಯನ್ನು ರೂಪಿಸುವುದು ಇದರ ಉದ್ದೇಶವಾಗಿದೆ.

ಕೋರ್ಸ್‌ನ ಪ್ರಮುಖ ಅಂಶಗಳು

ಇದು ಆರು ತಿಂಗಳ Offline Skill-Development Programme ಆಗಿದ್ದು, ಆಯುರ್ವೇದದ ಗರ್ಭಧಾನ ವಿಧಿ (Pre-conceptional Care), ಗರ್ಭಿಣಿ ಪರಿಚರ್ಯೆ (Antenatal Care) ಮತ್ತು ಸೂತಿಕಾ ಪರಿಚರ್ಯೆ (Postnatal Care) ತತ್ವಗಳನ್ನು ಆಧರಿಸಿದೆ. ಗರ್ಭಾವಸ್ಥೆಯ ವಿವಿಧ ಹಂತಗಳಿಗೆ ಅನುಗುಣವಾದ ಆಹಾರ ಪದ್ಧತಿ, ಜೀವನಶೈಲಿ ಬದಲಾವಣೆ, ಸುರಕ್ಷಿತ ಯೋಗ, ಹೆರಿಗೆ ಸಂದರ್ಭದಲ್ಲಿ ಭಾವನಾತ್ಮಕ ಬೆಂಬಲ, ನವಜಾತ ಶಿಶುವಿನ ಮಸಾಜ್ ಹಾಗೂ Basic Life Support (BLS) ಕುರಿತು ತರಬೇತಿ ನೀಡಲಾಗುತ್ತದೆ. Infection Control, Sanitisation ಮತ್ತು Biomedical Waste Management ಕೂಡ ಪಠ್ಯಕ್ರಮದ ಭಾಗವಾಗಿವೆ.

ಕಿಲ್ಕಾರಿ ಸಂಖ್ಯೆ1600403600 ಅನ್ನು ಸೇವ್ ಮಾಡಿ, ಪ್ರತಿ ತಿಂಗಳು ಒಂದು ಕರೆಯನ್ನು  ಸ್ವೀಕರಿಸಿ. ಗರ್ಭಿಣಿ, ತಾಯಿ ಮತ್ತು ಮಗುವಿನ ಸುರಕ್ಷತೆಗೆ ಕೈ ಜೋಡಿಸಿ.

ಕೋರ್ಸ್‌ಗೆ 10+2 ಉತ್ತೀರ್ಣರಾಗಿರುವ ಮತ್ತು ಕನಿಷ್ಠ 18 ವರ್ಷ ವಯಸ್ಸಿನವರು ಅರ್ಹರು. ಪ್ರತಿ ಬ್ಯಾಚ್‌ಗೆ 20 ಅಭ್ಯರ್ಥಿಗಳಿಗೆ ಅವಕಾಶವಿದೆ. ತರಬೇತಿಯ ನಂತರ Garbhini Mitra Assistant, Prenatal/Postnatal Care Assistant ಹಾಗೂ Maternal Health Support Worker ಆಗಿ ಕಾರ್ಯನಿರ್ವಹಿಸಬಹುದು.

ಪರೀಕ್ಷಾ ದೃಷ್ಟಿಯಿಂದ ಮಹತ್ವ

ಈ ಯೋಜನೆ ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಲ್ಲ; ಬದಲಾಗಿ Clinical Antenatal Careಗೆ ಪೂರಕ ವ್ಯವಸ್ಥೆಯಾಗಿದೆ. ಅಪಾಯದ ಲಕ್ಷಣಗಳನ್ನು ಗುರುತಿಸಿ ವೈದ್ಯಕೀಯ ಸಂಸ್ಥೆಗೆ ಸಮಯೋಚಿತವಾಗಿ ರವಾನಿಸುವುದಕ್ಕೂ ತರಬೇತಿ ನೀಡಲಾಗುತ್ತದೆ. UPSC/KPSCಗೆ AYUSH, Maternal Healthcare, Skill Development, Ayurveda ಹಾಗೂ Community Healthcare ವಿಷಯಗಳ ದೃಷ್ಟಿಯಿಂದ ಇದು ಮಹತ್ವದ್ದಾಗಿದೆ.