ಸೆಮಿಕಾನ್ 2.0 ಯೋಜನೆ
ಸೆಮಿಕಾನ್ 2.0 ಯೋಜನೆ
ಭಾರತದ ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಉತ್ಪಾದನಾ ವ್ಯವಸ್ಥೆಯನ್ನು ಬಲಪಡಿಸಲು ಕೇಂದ್ರ ಸಚಿವ ಸಂಪುಟವು ₹1,27,500 ಕೋಟಿ ವೆಚ್ಚದ ‘ಸೆಮಿಕಾನ್ 2.0’ ಯೋಜನೆಗೆ ಅನುಮೋದನೆ ನೀಡಿದೆ. ಚಿಪ್ ವಿನ್ಯಾಸ, ಯಂತ್ರೋಪಕರಣ ಮತ್ತು ಅಗತ್ಯ ವಸ್ತುಗಳ ದೇಶೀಯ ಉತ್ಪಾದನೆ, ಹೊಸ ಫ್ಯಾಬ್ಗಳ ಸ್ಥಾಪನೆ, ಸೆಮಿಕಂಡಕ್ಟರ್ ಜೋಡಣೆ ಮತ್ತು ಪರೀಕ್ಷೆ, ಸಂಶೋಧನೆ ಹಾಗೂ ಕೌಶಲಾಭಿವೃದ್ಧಿ ಇದರ ಆರು ಪ್ರಮುಖ ಆಧಾರಸ್ತಂಭಗಳಾಗಿವೆ.
![]()
ದೇಶದ 315 ವಿಶ್ವವಿದ್ಯಾಲಯಗಳಲ್ಲಿ ಚಿಪ್ ವಿನ್ಯಾಸ ತರಬೇತಿಯನ್ನು ವಿಸ್ತರಿಸಲಾಗುತ್ತದೆ. ಈ ಯೋಜನೆಯು ಆಮದು ಅವಲಂಬನೆಯನ್ನು ಕಡಿಮೆ ಮಾಡಿ, ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಪೂರೈಕೆ ಸರಪಳಿ ಸ್ಥಿರತೆ, ರಾಷ್ಟ್ರೀಯ ಭದ್ರತೆ ಮತ್ತು ತಾಂತ್ರಿಕ ಸ್ವಾವಲಂಬನೆಯನ್ನು ಬಲಪಡಿಸಲಿದೆ.