Universal School Of Administration Integrated Degree college Admission Open for more details contact: 9686664985
ಬೇಟಿ ಬಚಾವೋ ಬೇಟಿ ಪಡಾವೊ ಯೋಜನೆ ವಿಸ್ತರಣೆಗೆ ಸಿಸಿಇಎ ಒಪ್ಪಿಗೆ

ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಕೇಂದ್ರದ ಮಹತ್ವಾಕಾಂಕ್ಷಿ ಬೇಟಿ ಬಚಾವೋ ಬೇಟಿ ಪಡಾವೊ ಯೋಜನೆ ವಿಸ್ತರಣೆಗೆ ಒಪ್ಪಿಗೆ ನೀಡಿದೆ. ಈ ಯೋಜನೆಯನ್ನು ಇಡೀ ದೇಶದಲ್ಲಿ 2017-18ನೇ ಸಾಲಿನಿಂದ 2019-2020ನೇ ಸಾಲಿಗೆ ವಿಸ್ತರಿಸಲಾಗಿದೆ.

ಈ ವಿಸ್ತರಣೆಗಾಗಿ ಸುಮಾರು 1132.5 ಕೊಟಿ ರೂಪಾಯಿ ಅಂದಾಜು ವೆಚ್ಚ ಮಾಡಲಾಗಿದೆ. ಇದು 2011ರ ಜನಗಣತಿ ಪ್ರಕಾರ ದೇಶದ ಎಲ್ಲ 640 ಜಿಲ್ಲೆಗಳನ್ನು ಒಳಗೊಳ್ಳಲಿದ್ದು, ಇದು ಮಕ್ಕಳ ಲಿಂಗಾನುಪಾತ ಸುಧಾರಣೆಯ ನಿಟ್ಟಿನಲ್ಲಿ ಧನಾತ್ಮಕ ಪರಿಣಾಮವನ್ನು ಬೀರುವಲ್ಲಿ ಸಹಕಾರಿಯಾಗಲಿದೆ. ಇದನ್ನು ಪ್ರಸ್ತುತ ಕಡಿಮೆ ಮಕ್ಕಳ ಲಿಂಗಾನುಪಾತ ಇರುವ 161 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ.

ಬಿಬಿಬಿಪಿ ವಿಸ್ತರಣೆ

ಬೇಟಿ ಬಚಾವೋ ಬೇಟಿ ಪಡಾವೊ ಯೋಜನೆ ವಿಸ್ತರಣೆಗೆ ಒಪ್ಪಿಗೆ ನೀಡಲು ಪ್ರಮುಖ ಕಾರಣವೆಂದರೆ, ಇದು 161 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿರುವುದು. ಈ ವಿಸ್ತರಣೆಯಲ್ಲಿ ಬಹು ವಲಯಮಟ್ಟದ ಹಸ್ತಕ್ಷೇಪವನ್ನು ಹಾಲಿ ಇರುವ 161 ಜಿಲ್ಲೆಗಳ ಜತೆಗೆ ಹೆಚ್ಚುವರಿಯಾಗಿ 244 ಜಿಲ್ಲೆಗಳಲ್ಲಿ ಕೈಗೊಳ್ಳಲಾಗುತ್ತದೆ. 235 ಜಿಲ್ಲೆಗಳನ್ನು ಜಿಲ್ಲಾ ಮಾಧ್ಯಮ ಜಾಗೃತಿಗೊಳಿಸುವ ಮೂಲಕ, ಅಭಿಯಾನ, ವಿಸ್ತರಣೆ ಕಾರ್ಯಕ್ರಮಗಳ ಮೂಲಕ ಉತ್ತೇಜಿಸಲಾಗುತ್ತದೆ. ಎಲ್ಲವೂ ಸೇರಿ ಒಟ್ಟು 640 ಜಿಲ್ಲೆಗಳು ಈ ಕಾರ್ಯಕ್ರಮ ವ್ಯಾಪ್ತಿಗೆ ಬರಲಿವೆ.

ಬೇಟಿ ಬಚಾವೊ ಬೇಟಿ ಪಡಾವೊ

ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು 2015ರ ಜನವರಿಯಲ್ಲಿ ಹರ್ಯಾಣಾ ರಾಜ್ಯದ ಪಾಣಿಪತ್‍ನಲ್ಲಿ ಉದ್ಘಾಟಿಸಿದ್ದರು. ಇಳಿಯುತ್ತಿರುವ ಮಕ್ಕಳ ಲಿಂಗಾನುಪಾತವನ್ನು ಹೆಚ್ಚಿಸುವುದು ಮತ್ತು ಜೀವನಚಕ್ರ ನಿರಂತರತೆ ಮೂಲಕ ಮಹಿಳೆಯರ ಸಬಲೀಕರಣದ ವಿಷಯಗಳ ಬಗ್ಗೆ ಗಮನ ಹರಿಸುವುದು ಇದರ ಉದ್ದೇಶ.

ಈ ಯೋಜನೆಯನ್ನು ಮೂರು ಸಚಿವಾಲಯ ಮಟ್ಟದಲ್ಲಿ ಜಾರಿಗೊಳಿಸಲಾಗುತ್ತಿದೆ. ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸಂಘಟಿತ ಕಾರ್ಯಕ್ರಮ ಇದಾಗಿದೆ. ಕೇಂದ್ರ ಮಟ್ಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಇದಕ್ಕೆ ನೋಡಲ್ ಸಚಿವಾಲಯವಾಗಿದೆ.

ಬಿಬಿಬಿಪಿ ಯೋಜನೆಯ ಮುಖ್ಯ ಉದ್ದೇಶವೆಂದರೆ ಜಾಗೃತಿ ಮತ್ತು ಪ್ರತಿಪಾದನೆ ಆಂದೋಲನವನ್ನು ಆಯೋಜಿಸುವುದು, ಬಹು ವಲಯ ಕಾರ್ಯಕ್ರಮಗಳಾದ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವುದು, ಪ್ರಸವಪೂರ್ವ ಹಾಗೂ ಪ್ರಸವೋತ್ತರ ವೈದ್ಯಕೀಯ ತಂತ್ರಗಳ (ಪಿಸಿ & ಪಿಎನ್‍ಡಿಟಿ) ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ.

ಈ ಯೋಜನೆಯ ನಿರ್ದಿಷ್ಟ ಉದ್ದೇಶಗಳೆಂದರೆ, ಲಿಂಗ ಆಧರಿತ ತಾರತಮವ್ಯವನ್ನು ಕೊನೆಗೊಳಿಸುವುದು ಹಾಗೂ ಆಯ್ಕೆ ಮಾಡಿ ಹೆಣ್ಣುಭ್ರೂಣ ಹತ್ಯೆಯಂಥ ಅಕ್ರಮಗಳನ್ನು ತಡೆಯುವುದು, ಹೆಣ್ಣುಮಕ್ಕಳ ಸಂರಕ್ಷಣೆ ಮತ್ತು ಅಸ್ತಿತ್ವ ಉಳಿಸುವಿಕೆ ಹಾಗೂ ಹೆಣ್ಣುಮಕ್ಕಳು ಶಿಕ್ಷಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು.

ಬಿಬಿಬಿಪಿ ಸಾಧನೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಇತ್ತೀಚಿನ ವರದಿಗಳಪ್ರಕಾರ, ಬಿಬಿಬಿಪಿ ಯೋಜನೆ ಅನುಷ್ಠಾನದಲ್ಲಿರುವ 161 ಜಿಲ್ಲೆಗಳ ಪೈಕಿ 104 ಜಿಲ್ಲೆಗಳಲ್ಲಿ ಜನ್ಮದ ವೇಳೆ ಲಿಂಗಾನುಪಾತ ಸುಧಾರಿಸುತ್ತಿದೆ. 2015-16 ಹಾಗೂ 2016-17ನೇ ಸಾಲಿನಲ್ಲಿ ಈ ಏರಿಕೆ ಪ್ರವೃತ್ತಿ ಕಂಡುಬಂದಿದೆ. 119 ಜಿಲ್ಲೆಗಳಲ್ಲಿ ಮೊದಲ ತ್ರೈಮಾಸಿಕ ನೋಂದಣಿಯು ಉತ್ತಮ ಫಲಿತಾಂಶವನ್ನು ತೋರಿಸಿದೆ. 146 ಜಿಲ್ಲೆಗಳಲ್ಲಿ ಸಾಂಸ್ಥಿಕ ಹೆರಿಗೆಯಲ್ಲಿ ಸುಧಾರಣೆ ಕಂಡುಬಂದಿದೆ.