New KAS prelims batch starts from 6th August 2018 - For registration Contact: 9686664983/9845512052. Admission Open for Universal School of Admission (B.A & B.com with IAS/KAS Integrated Coaching) Contact - 9686664985/080-46568844
ದೆಹಲಿಯಲ್ಲಿ 22ನೇ ಸಣ್ಣ ರೈತರ ಕೃಷಿ ವಹಿವಾಟು ಒಕ್ಕೂಟದ ಸಭೆ

ಸಣ್ಣ ರೈತರ ಕೃಷಿ ವಹಿವಾಟು ಒಕ್ಕೂಟದ 22ನೇ ಆಡಳಿತ ಮಂಡಳಿ ಸಭೆ ನವದೆಹಲಿಯಲ್ಲಿ ಇತ್ತೀಚೆಗೆ ನಡೆಯಿತು. ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಖಾತೆ ಸಚಿವ ರಾಧಾಮೋಹನ್ ಸಿಂಗ್ ಇದನ್ನು ಉದ್ಘಾಟಿಸಿದರು. ಇದೇ ವೇಳೆ ಸಣ್ಣ ರೈತರ ಕೃಷಿ ವಹಿವಾಟು ಒಕ್ಕೂಟದ ಪ್ರಗತಿಯನ್ನು ಪರಿಶೀಲಿಸಲಾಯಿತು.

ಸಣ್ಣ ರೈತರ ಕೃಷಿ ವಹಿವಾಟು ಒಕ್ಕೂಟ
ಸಣ್ಣ ರೈತರ ಕೃಷಿ ವಹಿವಾಟು ಒಕ್ಕೂಟವು ಕೇಂದ್ರ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಸಚಿವಾಲಯ ಪ್ರವರ್ತಿತ ಸೊಸೈಟಿಯಾಗಿದೆ. ಇದು 1994ರಲ್ಲಿ ಆರಂಭವಾಗಿದ್ದು, ಸೊಸೈಟಿಗಳ ನೋಂದಣಿ ಕಾಯ್ದೆ- 1860ರಡಿ ಇದು ನೋಂದಣಿಯಾಗಿದೆ. ಇದು ಬ್ಯಾಂಕೇತರ ಹಣಕಸು ಸಂಸ್ಥೆಯಾಗಿ ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ನೋಂದಣಿಯಾಗಿದೆ.

ಈ ಸಂಸ್ಥೆಯ ಮೂಲಭೂತ ಉದ್ದೇಶವೆಂದರೆ, ಕೃಷಿ ಮೌಲ್ಯ ಸರಣಿಗೆ ರೈತರನ್ನು ಸಂಪರ್ಕಿಸುವುದು. ಇದರಲ್ಲಿ ಮುಖ್ಯವಾಗಿ ಹೂಡಿಕೆ, ತಂತ್ರಜ್ಞಾನ ಮತ್ತು ಮಾರುಕಟ್ಟೆ ಸೌಲಭ್ಯಗಳು ಸೇರಿದ್ದು, ಖಾಸಗಿ ಹಾಗೂ ಸಹಕಾರಿ ವಲಯದ ಸಹಯೋಗದಲ್ಲಿ ಇದನ್ನು ಸಾಧಿಸಲಾಗುತ್ತದೆ. ವೆಂಚರ್ ಕ್ಯಾಪಿಟಲ್ ಅಸಿಸ್ಟೆನ್ಸ್ ಹೆಸರಿನಲ್ಲಿ ಬಂಡವಾಳ ಬೆಂಬಲವನ್ನೂ ಇದು ಒದಗಿಸಲಿದ್ದು, ಸಣ್ಣ ಹಾಗೂ ಅತಿಸಣ್ಣ ರೈತರು ಕೃಷಿ ವಹಿವಾಟು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅಗತ್ಯವಾದ ಮತ್ತು ವಿತ್ತೀಯ ಸೇರ್ಪಡೆಗೆ ಪೂರಕ ವಾತಾವರಣವನ್ನೂ ಇದು ಸೃಷ್ಟಿಸಿಕೊಡುವ ಗುರಿ ಹೊಂದಿದೆ.

ಇದು ರೈತರ ಉತ್ಪಾದಕ ಸಂಘಗಳನ್ನು ಉತ್ಥೇಜಿಸುವ ಹಾಗೂ ಇವನ್ನು ಕೃಷಿ ಮೌಲ್ಯ ಸರಣಿಯಲ್ಲಿ ಸಮನ್ವಯಗೊಳಿಸುವ ಕಾರ್ಯವನ್ನೂ ಮಾಡುತ್ತದೆ. ಇತ್ತೀಚೆಗೆ ಸಣ್ಣ ರೈತರ ಕೃಷಿ ವಹಿವಾಟು ಒಕ್ಕೂಟಕ್ಕೆ ತೀರಾ ಪ್‍ರಮುಖವಾದ ದೆಹಲಿ ಕಿಸಾನ್ ಮಂಡಿ ಹಾಗೂ ನ್ಯಾಷನಲ್ ಅಗ್ರಿಕಲ್ಚರ್ ಮಾರ್ಕೆಟ್ ಸ್ಕೀಂ ಯೋಜನೆಯನ್ನು ಅನುಷ್ಠಾನಗೊಳಿಸುವ ಹೊಣೆಯನ್ನೂ ವಹಿಸಲಾಗಿದೆ. ಇ- ಮಾರುಕಟ್ಟೆ ಸೌಲಭ್ಯದ ಮೂಲಕ ಉಚಿತ ಕೃಷಿ ವ್ಯಾಪಾರ ಹಾಗೂ ಬೆಲೆ ಸಂಶೋಧನೆ ವ್ಯವಸ್ಥೆಯನ್ನೂ ಇದು ಒದಗಿಸುತ್ತದೆ.