IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಶಬರಿಮಲೆ ದೇಗುಲಗೊಳಗೆ ಮಹಿಳೆಯರ ಪ್ರವೇಶಕ್ಕೆ ಐತಿಹಾಸಿಕ ತೀರ್ಪು

ಶಬರಿಮಲೆ ದೇಗುಲಗೊಳಗೆ ಮಹಿಳೆಯರ ಪ್ರವೇಶಕ್ಕೆ ಇದ್ದ ಅಡ್ಡಿ ಆತಂಕಗಳು ದೂರಾಗಿವೆ. ಮುಖ್ಯ ನ್ಯಾಯಮುರ್ತಿ ದೀಪಕ್ ಮಿಶ್ರಾ ಅವರಿದ್ದ ಸಾಂವಿಧಾನಿಕ ನ್ಯಾಯಪೀಠವು ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶಕ್ಕೆ ಅನುಮತಿ ನೀಡುವಂತೆ ಸೂಚಿಸಿ, ಐತಿಹಾಸಿಕ ತೀರ್ಪು ನೀಡಿದೆ. ಶಬರಿಮಲೆ ಪ್ರಕರಣದ ವಿಚಾರಣೆ ನಡೆಸಿದ ಪಂಚ ಸದಸ್ಯರ ಸಾಂವಿಧಾನಿಕ ಪೀಠದಲ್ಲಿ ಸಿಜೆಐ ದೀಪಕ್ ಮಿಶ್ರಾ, ನ್ಯಾ. ಆರ್ ಎಫ್ ನಾರಿಮನ್, ಎಎಂ ಖಾನ್ವಿಲ್ಕರ್, ಡಿವೈ ಚಂದ್ರಚೂಡ ಮತ್ತು ನ್ಯಾ. ಇಂದು ಮಲ್ಹೋತ್ರಾ ಅವರಿದ್ದರು. ಇವರಲ್ಲಿ ಇಂದು ಮಲ್ಹೋತ್ರಾ ಅವರನ್ನು ಬಿಟ್ಟು ಉಳಿದ ನಾಲ್ವರು ನ್ಯಾಯಮೂರ್ತಿಗಳೂ 'ಮಹಿಳೆಯರಿಗೆ ಶಬರಿಮಲೆ ದೇವಾಲಯಕ್ಕೆ ಪ್ರವೇಶ' ನೀಡುವುದೇ ಸರಿ ಎಂಬ ತೀರ್ಪು ನೀಡಿದ್ದರು.

ಅಕ್ಟೋಬರ್ 2 ರಂದು ನಿವೃತ್ತರಾಗುತ್ತಿರುವ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ನೀಡಿದ ಮಹತ್ವದ ತೀರ್ಪುಗಳಲ್ಲಿ ಇದೂ ಒಂದಾಗಲಿದೆ. 800 ವರ್ಷಗಳ ಕಾಲದಿಂದ ಕಾಯ್ದುಕೊಂಡು ಬಂದಿದ್ದ ದೇವಾಲಯದ ಆಡಳಿತ ಮಂಡಳಿಯ ನಿಯಮಕ್ಕೆ ತಡೆ ಒಡ್ಡಿದಂತಾಗಿದೆ. ಸುಪ್ರೀಂಕೋರ್ಟಿನ ಪಂಚ ಸದಸ್ಯರ ನ್ಯಾಯಪೀಠವು ನೀಡಿರುವ ತೀರ್ಪಿನ ವಿರುದ್ಧ ಟ್ರಾವಾಂಕೂರು ದೇವಸ್ವ ಮಂಡಳಿ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ.

ಅಯ್ಯಪ್ಪ ಸ್ವಾಮಿ ದೇಗುಲಕ್ಕೆ 10 ರಿಂದ 50 ವರ್ಷ ವಯಸ್ಸಿನೊಳಗಿನ ಸ್ತ್ರೀಯರಿಗೆ ಪ್ರವೇಶ ನಿರ್ಬಂಧಿಸಲಾಗಿದೆಸಂಪ್ರದಾಯದ ಪ್ರಕಾರ ಮುಟ್ಟಾದ ಸ್ತ್ರೀಯು ಮನೆಯಲ್ಲಿನ ಪೂಜಾಗೃಹಕ್ಕೆ ಅಥವಾ ದೇವಾಲಯಕ್ಕೆ ಪ್ರವೇಶ ಮಾಡಬಾರದು. ಹೀಗಾಗಿ, ಋತುಮತಿಯಾದ ಹೆಣ್ಣು ದೇಗುಲದಲ್ಲಿ ಕಾಲಿಡುವಂತಿಲ್ಲ ಎಂದು ಅಯ್ಯಪ್ಪ ಸ್ವಾಮಿ ದೇಗುಲ ಮಂಡಳಿ ನಿಯಮ ರೂಪಿಸಿದೆ.

Comment