IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಆಧಾರ್ ಸಾಂವಿಧಾನಿಕ ಮಾನ್ಯತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ಆಧಾರ್ ಸಾಂವಿಧಾನಿಕ ಮಾನ್ಯತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ಆಧಾರ್ ಸಿಂಧುತ್ವ ಕುರಿತಂತೆ ಸುಪ್ರೀಂ ಕೋರ್ಟಿನಲ್ಲಿ ಇಂದು ಮಹತ್ವದ ತೀರ್ಪು ಹೊರಬಿದ್ದಿದ್ದು, ಆಧಾರ್ ಸಾಂವಿಧಾನಿಕ ಮಾನ್ಯತೆಯನ್ನು ಕೋರ್ಟ್ ಎತ್ತಿಹಿಡಿದಿದೆ. ಆಧಾರ್ ಕಾರ್ಡ್ ಅನ್ನು ಎಲ್ಲಾ ಸರ್ಕಾರಿ ಯೋಜನೆಗಳಿಗೂ ಕಡ್ಡಾಯವಾಗಿ ಬಳಸಬೇಕು ಎಂದು ಸುಪ್ರೀಂ ಹೇಳಿದೆ. ಆದರೆ ಖಾಸಗೀ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಆಧಾರ್ ಕಡ್ಡಾಯವಲ್ಲ ಎಂದು ಅದು ಹೇಳಿದೆ.

ಒಟ್ಟು 40 ಪುಟಗಳ ತೀರ್ಪಿನ ಸಾರಾಂಶವನ್ನು ನ್ಯಾ.ಎಕೆ ಸಿಕ್ರಿ ಓದಿದ್ದು, 'ಖಾಸಗೀತನದ ಹಕ್ಕು ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಹಕ್ಕನ್ನು ನೀಡಿದೆ.

ಪಂಚಸದಸ್ಯ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ ಎಕೆ ಸಿಕ್ರಿ, ನ್ಯಾ. ಎಂ ಖಾನ್ ವಿಲ್ಕರ್, ನ್ಯಾ.ಡಿ ವೈ ಚಂದ್ರಚೂಡ್, ನ್ಯಾ. ಅಶೋಕ್ ಭೂಷಣ್ ಅವರಿದ್ದಾರೆ.

ಆಧಾರ್ ಕಾರ್ಡ್ ಯಾವ್ಯಾವುದಕ್ಕೆ ಕಡ್ಡಾಯ?

  • ಸರ್ಕಾರದ ಎಲ್ಲಾ ಯೋಜನೆಗಳಿಗೂ ಆಧಾರ್ ಕಡ್ಡಾಯ
  • ಪ್ಯಾನ್ ಕಾರ್ಡ್ ಜೊತೆ ಆಧಾರ್ ಜೋಡಣೆಯೂ ಕಡ್ಡಾಯ
  • ಆದಾಯ ತೆರಿಗೆ ರಿಟರ್ನ್ಸ್ ಪಾವತಿಗೆ ಆಧಾರ್ ಕಡ್ಡಾಯ

ಯಾವುದಕ್ಕೆ ಕಡ್ಡಾಯವಲ್ಲ?

  • ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಡ್ಡಾಯವಲ್ಲ.
  • ಶಾಲಾ, ಕಾಲೇಜು, ಇತರ ಶಿಕ್ಷಣ ಸಂಸ್ಥೆಗಳಿಗೆ ಆಧಾರ್ ಕಡ್ಡಾಯವಲ್ಲ.
  • ಖಾಸಗೀ ಕಂಪನಿಗಳಿಗೆ ಆಧಾರ್ ಕಡ್ಡಾಯವಲ್ಲ.

Comment