IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಸಿಕ್ಕಿಂನ ಮೊದಲ ವಿಮಾನ ನಿಲ್ದಾಣಕ್ಕೆ ಮೋದಿ ಚಾಲನೆ

ಪ್ರಧಾನಿ ನರೇಂದ್ರ ಮೋದಿ ಸಿಕ್ಕಿಂನ ಪಾಕ್ ಯಾಂಗ್ ವಿಮಾನನಿಲ್ದಾಣಕ್ಕೆ ಸೆಪ್ಟಂಬರ್ 24ರಂದು ಚಾಲನೆ ನೀಡಿದ್ದಾರೆ. ಸಿಕ್ಕಿಂನ ಮೊದಲ ಮತ್ತು ಏಕಮಾತ್ರ ವಿಮಾನನಿಲ್ದಾಣ ಇದಾಗಿದೆ. ಸಮುದ್ರಮಟ್ಟಕ್ಕಿಂತ 4,500 ಅಡಿ ಎತ್ತರದಲ್ಲಿದೆ. ಇದಕ್ಕೂ ಮೊದಲು ಸಿಕ್ಕಿಂ ಜನತೆ ಪ್ರಯಾಣ ನಡೆಸಬೇಕೆಂದರೆ 124 ಕಿ.ಮೀ ದೂರದಲ್ಲಿರುವ ಪಶ್ಚಿಮ ಬಂಗಾಳದ ಬಾಗ್‍ದೋಗ್ರಾ ವಿಮಾನ ನಿಲ್ದಾಣಕ್ಕೆ ಬರಬೇಕಾಗಿತ್ತು.

ಪಾಕ್‍ಯಾಂಗ್ ವಿಮಾನ ನಿಲ್ದಾಣ 201 ಎಕರೆ ಪ್ರದೇಶದಲ್ಲಿ ವಿಸ್ತರಿಸಿದ್ದು, 2009ರಲ್ಲಿ ಇದರ ಶಂಕುಸ್ಥಾಪನೆ ಮಾಡಲಾಗಿತ್ತು. ಇದು ಸಿಕ್ಕಿಂ ರಾಜಧಾನಿ ಗ್ಯಾಂಗ್ಟಕ್‍ನಿಂದ 33 ಕಿ.ಮೀ ದೂರದಲ್ಲಿದೆ. ಭಾರತ ಚೀನಾ ಗಡಿಯಿಂದ ಕೇವಲ 60 ಕಿ.ಮೀ ದೂರದಲ್ಲಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಇದನ್ನು ನಿರ್ಮಿಸಿದೆ ಹಾಗೂ 600ಕೋಟಿ ರೂ. ವೆಚ್ಚವಾಗಿದೆ.C 
 

Comment