IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಪ್ರಹಾರ್ ಪ್ರಕ್ಷೇಪಕ ಕ್ಷಿಪಣಿ ಪ್ರಯೋಗ ಯಶಸ್ವಿ

ಪ್ರಹಾರ್ ಪ್ರಕ್ಷೇಪಕ ಕ್ಷಿಪಣಿ ಪ್ರಯೋಗ ಯಶಸ್ವಿ

ರಸ್ತೆಯಲ್ಲಿ ಸಾಗಿಸಬಹುದಾದ ಘನ ಇಂಧನ ಚಾಲಿತ ಪ್ರಹಾರ್ ಎಂಬ ಭೂಮಿಯಿಂದ ಭೂಮಿಗೆ ನೆಗೆಯುವ ಪ್ರಕ್ಷೇಪಕ ಕ್ಷಿಪಣಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‍ಡಿಒ) ಯಶಸ್ವಿಯಾಗಿ ಪ್ರಯೋಗಿಸಿದೆ. ಒಡಿಶಾದ ಬಾಲಸೋರ್‍ನಲ್ಲಿರುವ ಮೂರನೇ ಉಡಾವಣಾ ಸಮುಚ್ಚಯದಿಂದ ಇದನ್ನು ಯಶಸ್ವಿಯಾಗಿ ಪ್ರಯೋಗಿಸಲಾಯಿತು. ರೇಂಜ್ ಸ್ಟೇಷನ್‍ಗಳು ಮತ್ತು ಎಲೆಕ್ಟ್ರಿಕ್ ಆಪ್ಟಿಕಲ್ ಸಿಸ್ಟಮ್‍ಗಳು ಹಾರಾಟ ಪಥದುದ್ದಕ್ಕೂ ಕ್ಷಿಪಣಿಯ ಕಾರ್ಯಕ್ಷಮತೆಯನ್ನು ಗಮನಿಸಿದವು.

ಪ್ರಹಾರ್ ಕ್ಷಿಪಣಿ
ಪ್ರಹಾರ್ ಕ್ಷಿಪಣಿಯು ಘನ ಇಂಧನಚಾಲಿತ ಭೂಮಿಯಿಂದ ಭೂಮಿಗೆ ನೆಗೆಯುವ ಪ್ರಕ್ಷೇಪಕ ಕ್ಷಿಪಣಿ. ಇದು ಸರ್ವ ಋತು, ಎಲ್ಲ ಬಗೆಯ ಪ್ರದೇಶ, ವಾತಾವರಣದಲ್ಲಿ ಉಡಾವಣೆ ಮಾಡಬಹುದಾಗಿದೆ. ಆರು ಕ್ಷಿಪಣಿಗಳಿಗೆ ಆರು ಬಗೆಯ ಸಿಡಿತಲೆಗಳನ್ನು ಆಳವಡಿಸಿ, ಚಲಿಸುವ ಲಾಂಚರ್‍ನಲ್ಲಿರಿಸಿ, 2 ನಿಮಿಷದ ಅಂತರದಲ್ಲಿ ಬೇರೆ, ಬೇರೆ ಗುರಿಗಳ ಮೇಲೆ ದಾಳಿ ಮಾಡಬಹುದಾಗಿದೆ.

2011ರಲ್ಲಿ ಮೊದಲ ಹಾರಾಟ
ಪ್ರಹಾರ್ ಕ್ಷಿಪಣಿಯನ್ನು 2011ರ ಜುಲೈ 21ರಂದು ಒಡಿಶಾದ ಬಾಲಸೋರ್ ನೆಲೆಯಿಂದ ಯಶಸ್ವಿಯಾಗಿ ಪ್ರಯೋಗಿಸಲಾಗಿತ್ತು. ಆಗ ಕ್ಷಿಪಣಿಯು 250 ಸೆಕೆಂಡ್‍ಗಳಲ್ಲಿ 150 ಕಿ.ಮೀ. ಅಂತರ ಸಾಗಿ ಬಂಗಾಳ ಕೊಲ್ಲಿಯಲ್ಲಿ ನಿಗದಿಪಡಿಸಲಾಗಿದ್ದ ಗುರಿಯ ಮೇಲೆ ನಿಖರವಾಗಿ ಅಪ್ಪಳಿಸಿತ್ತು. ಸೆ.20ರಂದು ನಡೆಸಿರುವ ಕ್ಷಿಪಣಿಯ 2ನೇ ಪ್ರಯೋಗವು ಯಶಸ್ವಿಯಾಗಿದೆ

 

ಅನುಕೂಲ: ಪಿನಾಕಾ ಮಲ್ಟಿ ಬ್ಯಾರಲ್ ಲಾಂಚರ್ ಮತ್ತು ಸ್ಮರ್ಚ್ ಎಂಬಿಆರ್ಎಲ್ ಲಾಂಚರ್ಗಳನ್ನು ಒಂದೊಂದು ತುದಿಯಲ್ಲಿ ನಿಲ್ಲಿಸಿ, ಒಂದೆಡೆ ಪ್ರಹಾರ್ ಕ್ಷಿಪಣಿ ಹಾಗೂ ಇನ್ನೊಂದೆಡೆ ದ್ರವ ಇಂಧನ ಚಾಲಿತ ಪೃಥ್ವಿ ಪ್ರಕ್ಷೇಪಕ ಕ್ಷಿಪಣಿಗಳನ್ನು ಪ್ರಯೋಗಿಸುವ ಮೂಲಕ ಶತ್ರುಪಡೆಯ ಮೇಲೆ ಘಾತಕ ದಾಳಿ ನಡೆಸಲು ಅನುಕೂಲವಾಗುತ್ತದೆ.

Comment