IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಭಾರತಕ್ಕೆ ಅಮೆರಿಕದಿಂದ ನಿರ್ಬಂಧ ಭೀತಿ

ಭಾರತಕ್ಕೆ ಅಮೆರಿಕದಿಂದ ನಿರ್ಬಂಧ ಭೀತಿ

ರಷ್ಯಾದಿಂದ ಯುದ್ದವಿಮಾನ, ಕ್ಷಿಪಣಿಗಳನ್ನು ಖರೀದಿಸಿದ ಕಾರಣಕ್ಕಾಗಿ ಚೀನಾ ಮೇಲೆ ಅಮೆರಿಕಾ ನಿರ್ಬಂಧ ವಿಧಿಸಿದೆ. ರಷ್ಯಾದಿಂದ ಬಹುಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಎಸ್-400 ಟ್ರಯಂಪ್ ಕ್ಷಿಪಣಿ ಖರೀದಿಸಲು ಮುಂದಾಗಿರುವ ಭಾರತವು ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕಾದ ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ.

2017ರಲ್ಲಿ ರಷ್ಯಾದಿಂದ 10ಎಸ್‍ಯು-35 ಯುದ್ದವಿಮಾನ ಖರೀದಿ ಹಾಗೂ 2018ರಲ್ಲಿ ಎಸ್-400 ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿ ಮಾಡಿದ್ದಕ್ಕಾಗಿ ಚೀನಾದ ಎಕ್ವಿಪ್‍ಮೆಂಟ್ ಡೆವಲಪ್‍ಮೆಂಟ್ (ಇಡಿಡಿ) ಸಂಸ್ಥೆ ಅದರ ನಿರ್ದೇಶಕರು, ಈ ಸಂಸ್ಥೆ ಜತೆ ಸಂಬಂಧ ಹೊಂದಿರುವ ಅಂದಾಜು 20 ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ.

ಕಾರಣ
2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಮಾಡಿದೆ ಎಂಬ ಆರೋಪ ಕೇಳಿಬಂದಿದ್ದು, ಹೀಗಾಗಿ ಇದನ್ನು ಕಪ್ಪುಪಟ್ಟಿಗೆ ಸೇರಿಸಲಾಗಿತ್ತು. ಈ ಪಟ್ಟಿಯಲ್ಲಿರುವ ರಾಷ್ಟ್ರಗಳ ಜತೆ ದೊಡ್ಡ ಪ್ರಮಾಣದಲ್ಲಿ ವಹಿವಾಟು ನಡೆಸುವ ಯಾವುದೇ ದೇಶಗಳ ಮೇಲೆ ನಿರ್ಬಂಧ ಹೇರುವ ಅವಕಾಶ(ಕಾಸ್ಟಾ ಕಾಯ್ದೆ ಪ್ರಕಾರ) ಅಮೆರಿಕ ಆಡಳಿತಕ್ಕೆ ಇದೆ. ಪ್ರಸ್ತುತ 72 ದೇಶಗಳು, ವ್ಯಕ್ತಿಗಳು, ಅಮೆರಿಕದ ನಿರ್ಬಂಧ ಪಟ್ಟಿಯಲ್ಲಿವೆ. 
 

Comment