IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಇಸ್ರೋ ಸಹಕಾರದಲ್ಲಿ ನಿಯಂತ್ರಣ ಕೊಠಡಿ

ಇಸ್ರೋ ಸಹಕಾರದಲ್ಲಿ ನಿಯಂತ್ರಣ ಕೊಠಡಿ

ರಾಷ್ಟ್ರದಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಪತ್ತುಗಳ ಸಂಧರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ಅನುವಾಗುವಂತೆ ಏಕೀಕೃತ ನಿಐಮತ್ರಣ ಕೊಠಡಿ ಸ್ಥಾಪಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. ಇದಕ್ಕಾಗಿ ಅದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಜತೆ ಒಪ್ಪಂದ ಮಾಡಿಕೊಂಡಿದೆ.

ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ (ಪ್ರಾಕೃತಿಕ ವಿಪತ್ತು) ಸಂಜೀವ್ ಕುಮಾರ್ ಜಿಂಧಾಲ್ ಹಾಗೂ ಇಸ್ರೋನ ಡೆಪ್ಯುಟಿ ಡೈರೆಕ್ಟರ್ ಪಿ.ವಿ.ಎನ್ ರಾವ್ ಒಪ್ಪಂದ ಕುರಿತ ತಿಳಿವಳಿಕಾ ಪತ್ರಗಳಿಗೆ ಸಹಿ ಹಾಕಿದರು. ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ನಿಯಂತ್ರಣ ಕೇಂದ್ರ ಕಾರ್ಯನಿರ್ವಹಿಸಿದೆ.

ಮುಂದಿನ ಒಂದುವರೆ ವರ್ಷದಲ್ಲಿ ನಿಯಂತ್ರಣ ಕೇಂದ್ರ ನಿರ್ಮಾಣ ಪೂರ್ಣಗೊಳ್ಳಲಿದೆ. ದೇಶದ ಯಾವುದೇ ಮೂಲೆಯಲ್ಲಿ ವಿಕೋಪ ಸಂಭವಿಸಿದಾಗ ಇಸ್ರೋ ಉಪಗ್ರಹಗಳ ಮೂಲಕ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುತ್ತದೆ. ಇದರಿಂದ ರಕ್ಷಣಾ ಕಾರ್ಯಾಚರಣೆ ಅನುಕೂಲವಾಗಲಿದೆ. 
 

Comment