IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಆಯುಷ್‍ಮಾನ್ ಭಾರತ್/ಪ್ರಧಾನ್ ಮಂತ್ರಿ ಆರೋಗ್ಯ ಯೋಜನೆ ಜಾರಿ

ಆಯುಷ್‍ಮಾನ್ ಭಾರತ್/ಪ್ರಧಾನ್ ಮಂತ್ರಿ ಆರೋಗ್ಯ ಯೋಜನೆ ಜಾರಿ

ಫಲಾನುಭವಿಗಳೀಗೆ ಗುರುತಿನ ಪ್ರಮಾ ಪತ್ರ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಜಾರ್ಖಂಡ್‍ನ ರಾಜಧಾನಿ ರಾಂಚಿಯಲ್ಲಿ ‘ಆಯುಷ್‍ಮಾನ್ ಭಾರತ್ ಯೋಜನೆ'ಗೆ ಚಾಲನೆ ನೀಡಿದರು. ‘ಪ್ರಧಾನ್ ಮಂತ್ರಿ ಆರೋಗ್ಯ ಯೋಜನೆ’ ಎಂದೂ ಕರೆಯುವ ಈ ಯೋಜನೆಯಿಂದ ದೇಶದ 50 ಕೋಟಿ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ. 

ಈ ಯೋಜನೆಯಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ 10 ಕೋಟಿ ಕುಟುಂಬಗಳಿಗೆ ರೂ 5 ಆರೋಗ್ಯ ವಿಮೆ ಒದಗಿಸಲಾಗುವುದು. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನವಾದ ಸೆಪ್ಟಂಬರ್ 25ರಂದು ಈ ಯೋಜನೆ ಜಾರಿಯಾಗಲಿದೆ ಎಂದು ನೀತಿ ಆಯೋಗದ ಸದಸ್ಯ ಮತ್ತು ಯೋಜನೆಯ ರೂವಾರಿ ಡಾ.ವಿನೋದ್ ಪೌಲ್ ತಿಳಿಸಿದ್ದಾರೆ. 

ಪಂಜಾಬ್, ದೆಹಲಿ, ಕೇರಳ, ತೆಲಂಗಾಣ ಮತ್ತು ಒಡಿಶಾ ಹೊರತುಪಡಿಸಿ ದೇಶದ ಉಳಿದೆಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಯೋಜನೆ ಜಾರಿಯಾಗಲಿದೆ. 
 

Comment