IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಸತ್ಯ ಎಸ್. ತ್ರಿಪಾಠಿ ನ್ಯೂಯಾರ್ಕ್ ಕಚೇರಿಯ ಮುಖ್ಯಸ್ಥರಾಗಿ ನೇಮಕ

ಸತ್ಯ ಎಸ್. ತ್ರಿಪಾಠಿ ನ್ಯೂಯಾರ್ಕ್ ಕಚೇರಿಯ ಮುಖ್ಯಸ್ಥರಾಗಿ ನೇಮಕ

ಭಾರತದ ಹಿರಿಯ ಅಭಿವೃದ್ದಿ ಅರ್ಥಶಾಸ್ತ್ರಜ್ಞ ಮತ್ತು ವಿಶ್ವಸಂಸ್ಥೆ ಅಧಿಕಾರಿ ಸತ್ಯ ಎಸ್. ತ್ರಿಪಾಠಿ ಅವರನ್ನು ಸಹಾಯಕ ಮಹಾ ಕಾರ್ಯದರ್ಶಿ ಹಾಗೂ ಸಂಯುಕ್ತ ರಾಷ್ಟ್ರಗಳ ಪರಿಸರ ಕಾರ್ಯಕ್ರಮ(ಯುಎನ್ಇಪಿ) ನ್ಯೂಯಾರ್ಕ್ ಕಚೇರಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.

ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಅಂಟೊನಿಯೋ ಗುಟೆರ್ರೆಸ್ ಅವರು ಸತ್ಯ ತ್ರಿಪಾಠಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಹಿಂದೆ ಹುದ್ದೆಯನ್ನು ತ್ರಿನಿಡಾಡ್ ಮತ್ತು ಟೊಬಾಗೋದ ಎಲಿಯಟ್ ಹ್ಯಾರಿಸ್ ನಿರ್ವಹಿಸುತ್ತಿದ್ದರು. ಈಗ ತ್ರಿಪಾಠಿ ಉತ್ತರಾಧಿಕಾರಿಯಾಗಿದ್ದಾರೆ. ಯುಎನ್ಇಪಿಯಲ್ಲಿ ಸುಸ್ಥಿರ ಅಭಿವೃದ್ದಿಗಾಗಿ 2030 ಕಾರ್ಯಸೂಚಿ ಕಾರ್ಯಕ್ರಮಗಳ ವಿಭಾಗಕ್ಕೆ 2017ರಿಂದ ಇವರು ಹಿರಿಯ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.

Comment