IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ವಿಶ್ವದ ಮೊದಲ ಥರ್ಮಲ್ ಬ್ಯಾಟರಿ ಘಟಕ

ವಿಶ್ವದ ಮೊದಲ ಥರ್ಮಲ್ ಬ್ಯಾಟರಿ ಘಟಕ

ವಿಶ್ವದ ಮೊದಲ ಥರ್ಮಲ್ ಬ್ಯಾಟರಿ ಉತ್ಪಾದನಾ ಘಟಕ ಆಂಧ್ರಪ್ರದೇಶದ ರಾಜಧಾನಿ ಅಮರಾವತಿಯಲ್ಲಿ ಸ್ಥಾಪನೆಯಾಗಿದೆ. ಭಾರತ್ ಎನರ್ಜಿ ಸ್ಟೋರೇಜ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ (ಬಿಇಎಸ್‍ಟಿ) ಈ ಘಟಕವನ್ನು ಆರಂಭಿಸಿದೆ.
ಥರ್ಮಲ್ ಬ್ಯಾಟರಿಗಳು ಸಾಂಪ್ರಾದಾಯಿಕ ಮೂಲಗಳನ್ನು ಹೊರತುಪಡಿಸಿ ಪರ್ಯಾಯ ಮೂಲಗಳಿಂದ ವಿದ್ಯುತ್ ಉತ್ಪಾದಿಸುತ್ತವೆ. ಇವು ಸೂರ್ಯನ ಶಾಖವನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಿ ಹಿಡಿದಿಟ್ಟುಕೊಳ್ಳುತ್ತವೆ. 2019ರಿಂದ ಕಾರ್ಖಾನೆಯ ವಾಣೀಜ್ಯ ಕಾರ್ಯಾಚರಣೆ ಆರಂಭವಾಗಲಿದೆ. ಮೊದಲ ಹಂತದಲ್ಲಿ 1000 ಮೆಗಾವ್ಯಾಟ್ ಸಾಮಾಥ್ರ್ಯದ ಬ್ಯಾಟರಿಗಳು ಉತ್ಪಾದನೆಯಾಗಲಿವೆ. 2025 ವೇಳೆಗೆ 10 ಗಿಗಾವ್ಯಾಟ್ ಸಾಮಾಥ್ರ್ಯದ ಬ್ಯಾಟರಿಗಳು ಉತ್ಪಾದಿಸಲು ಕಂಪನಿ ಯೋಜಿಸಿದೆ. ಇವು ಸೌರಫಲಕಗಳಿಂದ ದಕ್ಷವಾಗಿದ್ದು, ಹೆಚ್ಚಿನ ಪ್ರಮಾಣದ ಸೌರಶಕ್ತಿ ಹಿಡಿದಿಟ್ಟುಕೊಳ್ಳುವ ಸಾಮಾಥ್ರ್ಯ ಹೊಂದಿವೆ. ಬ್ಯಾಟರಿಗಳು ಲಿಥೀಯಂ ಅಯಾನ್‍ನಿಂದ ತಯಾರಾಗಲಿದ್ದು, ಪರಿಸರ ಸ್ನೇಹಿಯಾಗಿರಲಿವೆ. ಥರ್ಮಲ್ ಬ್ಯಾಟರಿಗಳಿಂದ ಟೆಲಿಕಮ್ಯೂನಿಕೇಷನ್, ಕಾರ್ಖಾನೆಗಳಿಗೆ ವಿದ್ಯುತ್ ಒದಗಿಸಬಹುದಾಗಿದೆ. ವಿದ್ಯುತ್ ಚಾಲಿತ ಬಸ್‍ಗಳಿಗೆ ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 800 ಕಿ.ಮೀ. ಸಂಚರಿಸುತ್ತವೆ. ಕಾರ್ಖಾನೆ ಸ್ಥಾಪನೆಗೆ ಶೇ.95ರಷ್ಟು ಮರುಬಳಕೆಯ ವಸ್ತುಗಳನ್ನೇ ಬಳಸಲಾಗಿದೆ.

 

Comment