New KAS prelims batch starts from 6th August 2018 - For registration Contact: 9686664983/9845512052. Admission Open for Universal School of Admission (B.A & B.com with IAS/KAS Integrated Coaching) Contact - 9686664985/080-46568844

ಸರ್ಕಾರಿ ಫೇಲೋಶಿಪ್‌ನಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನ 

ಸರ್ಕಾರಿ ಫೇಲೋಶಿಪ್‌ನಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನ 

ದಲಿತ ವಿದ್ಯಾರ್ಥಿಗಳಿಗೆ ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಕೈಗೊಳ್ಳಲು ನೀಡುವ ಸರ್ಕಾರಿ ಫೇಲೋಶಿಪ್ನಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನ ಪಡೆದಿದೆ. ಒಟ್ಟು 72 ವಿದ್ಯಾರ್ಥಿಗಳು ನ್ಯಾಷನಲ್ ಓವರ್ಸೀಸ್ ಸ್ಕಾಲರ್ಶಿಪ್ ಪಡೆದಿದ್ದು, ಪೈಕಿ 40 ಮಂದಿ ಮಹಾರಾಷ್ಟ್ರದವರು.

ಎರಡನೇ ಸ್ಥಾನದಲ್ಲಿರುವ ಕರ್ನಾಟಕ ಮತ್ತು ಉತ್ತರ ಪ್ರದೇಶದ ತಲಾ ಆರು ವಿದ್ಯಾರ್ಥಿಗಳು ಮಾತ್ರ ಸಾಧನೆ ಮಾಡಿದ್ದಾರೆ. ಪ್ರವೃತ್ತಿ ಕಳೆದ ಕೆಲ ವರ್ಷಗಳಿಂದ ಮುಂದುವರಿದಿದ್ದು, 2016-17ರಲ್ಲಿ ಫೆಲೋಶಿಪ್ ಪಡೆದ 108 ಮಂದಿಯ ಪೈಕಿ 53 ಮಂದಿ ಮರಾಠಿಗರು. ಉತ್ತರ ಪ್ರದೇಶದ ಎಂಟು, ಮಧ್ಯಪ್ರದೇಶ ಹಾಗೂ ತಮಿಳುನಾಡಿನ ತಲಾ ಐದು ಮಂದಿ ಗೌರವಕ್ಕೆ ಪಾತ್ರರಾಗಿದ್ದರು. ಉಳಿದ ಬಹುತೇಕ ರಾಜ್ಯಗಳ ವಿದ್ಯಾರ್ಥಿಗಳ ಸಾಧನೆ ಶೂನ್ಯ.

ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಸಚಿವಾಲಯ ಫೆಲೋಶಿಪ್ ನಿಡುತ್ತಿದ್ದು, ದಲಿತ ವಿದ್ಯಾರ್ಥಿಗಳು ವಿದೇಶಿ ವಿವಿಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್ಡಿ ಪಡೆಯಲು ನೆರವು ನೀಡಲಾಗುತ್ತಿದೆ. 30 ಮಂದಿ ದಲಿತ ವಿದ್ಯಾರ್ಥಿಗಳಿಗೆ ಇದ್ದ ಅವಕಾಶವನ್ನು ಬಳಿಕ 60ಕ್ಕೆ ಹಾಗೂ 2014ರಲ್ಲಿ 100 ವಿದ್ಯಾರ್ಥಿಗಳಿಗೆ ವಿಸ್ತರಿಸಲಾಗಿತ್ತು.

ಮಹಾರಾಷ್ಟ್ರದಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಬಗೆಗೆ ಉತ್ತಮ ಮಾರ್ಗದರ್ಶನ ಲಭ್ಯವಿರುವುದು ಮಹಾರಾಷ್ಟ್ರ ವಿದ್ಯಾರ್ಥಿಗಳ ಪ್ರಾಬಲ್ಯಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

Comment