Free IAS workshop by Topper On 17th June at 9.30am and New KAS prelims batch starts from 15th July 2018 - For registratin Contact: 9686664983/9845512052. Admission Open for Universal School of Admission (B.A & B.com with IAS/KAS Integrated Coaching) Contact - 9686664985/080-46568844

ಅತಿಥೇಯ ದೇಶ ಒಪ್ಪಂದಕ್ಕೆ ಐಎಸ್‍ಎ. ಭಾರತ ಸಹಿ

ಅತಿಥೇಯ ದೇಶ ಒಪ್ಪಂದಕ್ಕೆ ಐಎಸ್‍ಎ. ಭಾರತ ಸಹಿ

ಅಂತರರಾಷ್ಟ್ರೀಯ ಸೌರ ಒಕ್ಕೂಟ (ಐಎಸ್- ಇಂಟರ್ನ್ಯಾಷನಲ್ ಸೋಲಾರ್ ಅಲಯನ್ಸ್) ಮತ್ತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅತಿಥೇಯ ದೇಶ ಒಪ್ಪಂದಕ್ಕೆ ನವದೆಹಲಿಯಲ್ಲಿ ಸಹಿ ಮಾಡಿವೆ. ಒಪ್ಪಂದವು ಐಎಸ್ ವ್ಯಾಪ್ತಿಯ ವ್ಯಕ್ತಿತ್ವವನ್ನು ಅತಿಥೇಯ ದೇಶಕ್ಕೆ ಒದಗಿಸಲಿದೆ. ಇದು ಗುತ್ತಿಗೆಗಳನ್ನು ಮಾಡಿಕೊಳ್ಳಲು, ಎಲ್ಲ ಸ್ಥಿರಹಾಗೂ ಚರ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ವಿಲೇವಾರಿ ಮಾಡಲು ಹಾಗೂ ಕಾನೂನು ಪ್ರಕ್ರಿಯೆಗಳನ್ನು ಸಮರ್ಥಿಸಿಕೊಳ್ಳಲು ಸಂಸ್ಥೆಯನ್ನು ರೂಪಿಸುವ ಅಧಿಕಾರವನ್ನು ಅತಿಥೇಯ ದೇಶಕ್ಕೆ ನೀಡುತ್ತದೆ.

ಪ್ರಮುಖ ಅಂಶಗಳು

ಒಪ್ಪಂದದ ಅನ್ವಯ, ಐಎಸ್ ಇಂಥ ವಿಶೇಷ ಸೌಲಭ್ಯಗಳನ್ನು ಅನುಭವಿಸಲಿದ್ದು, ಇದಕ್ಕೆ ಅನ್ವಯವಾಗುವ ತೆರಿಗೆ ವಿನಾಯ್ತಿಗಳು ಮತ್ತು ವಿಶೇಷಾಧಿಕಾರವನ್ನು ಐಎಸ್ ಕೇಂದ್ರ ಕಚೇಋಇಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಒದಗಿಸಿಕೊಡಲಿದೆ. ಒಪ್ಪಂದ ಚೌಕಟ್ಟಿನ 10ನೇ ವಿಧಿ ಅನ್ವಯ, ಅತಿಥೇಯ ದೇಶಕ್ಕೆ ವಿಶೇಷಾಧಿಕಾರಿಗಳು ಮತ್ತು ವಿಶೇಷ ಸವಲತ್ತುಗಳನ್ನು ಒದಗಿಸಲಾಗಿದೆ.

ಅಂತರರಾಷ್ಟ್ರೀಯ ಸೌರ ಒಕ್ಕೂಟ (ಐಎಸ್)

ಐಎಸ್ ಯೋಜನೆಯು ಭಾರತ ಹಾಗೂ ಫ್ರಾನ್ಸ್ ಜಂಟಿ ಕಲ್ಪನೆಯ ಕೂಸು. ಇದು 2015 ನವೆಂಬರ್ನಲ್ಲಿ ಪ್ಯಾರೀಸ್ನಲ್ಲಿ ಚಾಲನೆ ಪಡೆಯಿತು. ಸಿಓಪಿ21 ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದ ವೇಳೆ ವಿನೂತನ ಯೋಜನೆಗೆ ಚಾಲನೆ ನೀಡಲಾಯಿತು. ಇದರ ಚೌಕಟ್ಟು ಒಪ್ಪಂದವು, 2017 ಡಿಸೆಂಬರ್ನಲ್ಲಿ ಅನುಷ್ಠಾನಕ್ಕೆ ಬಂತು. ಇದು ಅಧಿಕೃತವಾಗಿ 2018 ಮಾರ್ಚ್ 11ರಂದು ಜಾರಿಗೆ ಬಂದಿದೆ. ಇದರ ಕೇಂದ್ರ ಕಚೇರಿ ಹರ್ಯಾಣದ ಗುರುಗ್ರಾಮದಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೋಲಾರ್ ಎನರ್ಜಿ (ಎನ್ಐಎಸ್) ಕ್ಯಾಫಸ್ನಲ್ಲಿದೆ. ಇದು ಭಾರತದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ವಿಶ್ವದ ಮೊಟ್ಟಮೊದಲ ಅಂತರರಾಷ್ಟ್ರೀಯ ಅಂತರ ಸರ್ಕಾರಿ ಸಂಸ್ಥೆಯಾಗಿದೆ.

ಐಎಸ್ ಉದ್ದೇಶ

  • ಹಣಕಾಸು ವೆಚ್ಚ ಮತ್ತು ತಂತ್ರಜ್ಞಾನದ ವೆಚ್ಚವನ್ನು ಕಡಿಮೆಗೊಳಿಸುವ ನಿಟಿಟನಲ್ಲಿ ಜಂಟಿ ಪ್ರಯತ್ನಗಳನ್ನು ಕೈಗೊಳ್ಳುವುದು.
  • ಸೌರ ವಿದ್ಯುತ್ ಕ್ಷೇತ್ರದ ದೊಡ್ಡ ಪ್ರಮಾಣದ ಬೆಳವಣಿಗೆಗಾಗಿ 2030 ಒಳಗಾಗಿ 1000 ಶತಕೋಟಿ ಡಾಲರ್ ಮೊತ್ತದ ಹೂಡಿಕೆಯನ್ನು ಕ್ರೋಢೀಕರಿಸುವುದು.
  • ವಿಶ್ವದ 121 ಸೌರಸಮೃದ್ಧ ದೇಶಗಳು ಅಗತ್ಯವಾದ ಭವಿಷ್ಯದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ವೇದಿಕೆಯನ್ನು ಕಲ್ಪಿಸಿಕೊಡುವುದು. ಕರ್ಕಾಟಕ ಸಂಕ್ರಾಂತಿ ವೃತ್ತದಿಂದ ಮಕರ ಸಂಕ್ರಾಂತಿ ವೃತ್ತದವರೆಗಿನ ಪ್ರದೇಶದ ದೇಶಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆ.

ಐಎಸ್ ಪ್ರಸ್ತುತ ನಾಲ್ಕು ಅನುಷ್ಠಾನ ಹಂತದ ಯೋಜನೆಗಳನ್ನು ಹೊಂದಿದೆ. ಅವುಗಳೆಂದರೆ:

  • ಸೌರ ವಿದ್ಯುತ್ ಮಿನಿ ಗ್ರಿಡ್ಗಳ ಮಾಪನ
  • ಇದಕ್ಕೆ ಅಗತ್ಯವಾದ ಹಣಕಾಸು ನೆರವನ್ನು ಕೈಗೆಟುಕುವ ದರದಲ್ಲಿ ದೊರಕಿಸಿಕೊಡುವುದು.
  • ಕೃಷಿ ಬಳಕೆಗಾಗಿ ಸೌರ ಅನ್ವಯಿಕೆಗಳಿಗೆ ಸಜ್ಜುಗೊಳಿಸುವುದು.
  • ನಿರ್ದಿಷ್ಟ ಪ್ರದೇಶದ ಸೌರ ವಿದ್ಯುತ್ ಅಗತ್ಯತೆಯನ್ನು ಪೂರೈಸುವ ಸಲುವಾಗಿ ಛಾವಣಿ ತುದಿಯ ಸೌರವಿದ್ಯುತ್ ಸಾಧ್ಯತೆಯನ್ನು ಪರಿಶೀಲಿಸುವುದು.

Comment