IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಟಿಇಎಸ್‍ಎಸ್: ನಾಸಾ, ಸ್ಪೇಸ್‍ಎಕ್ಸ್ ಸಹಭಾಗಿತ್ವ

ಟಿಇಎಸ್‍ಎಸ್: ನಾಸಾ, ಸ್ಪೇಸ್‍ಎಕ್ಸ್ ಸಹಭಾಗಿತ್ವ

ಬಾಹ್ಯಗ್ರಹಗಳನ್ನು ಪತ್ತೆ ಮಾಡುವ ಶೋಧ ಕಾರ್ಯಾಚರಣೆಗಾಗಿ ಉಡಾಯಿಸಲು ಉದ್ದೇಶಿಸಿರುವ ಟ್ರಾನ್ಸಿಸ್ಟಿಂಗ್ ಎಕ್ಸ್ಪೋನೆಂಟ್ ಸರ್ವೆ ಸೆಟಲೈಟ್ (ಟಿಇಎಸ್ಎಸ್) ಯೋಜನೆಗೆ ನಾಸಾ, ಸ್ಪೇಸ್ಎಕ್ಸ್ ಜತೆ ಸಹಭಾಗಿತ್ವ ಮಾಡಿಕೊಂಡಿದೆ.

ಟಿಇಎಸ್ಎಸ್ ಯೋಜನೆಯನ್ನು ಮೊಟ್ಟಮೊದಲ ಬಾಹ್ಯಾಕಾಶ ಇಡೀ ಆಕಾಶದ ಟ್ರಾನ್ಸಿಸ್ಟಿಂಗ್ ಎಕ್ಸ್ಪೊನೆಂಟ್ ಸಮೀಕ್ಷೆಗಾಗಿ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ನಾಲ್ಕು ವಿಸ್ತø ಕೋನದ ಟೆಲೆಸ್ಕೋಪ್ಗಳು ಮತ್ತು ಸಹಕಾರಿಯಾಗಿ ಚಾರ್ಜ್ ಕಪಲ್ಡ್ ಸಾಧನದ ಪತ್ತೆ ಸಾಧನಗಳಿರುತ್ತವೆ. ಇದನ್ನು 2018 ಏಪ್ರಿಲ್ನಲ್ಲಿ ಉಡಾಯಿಸಲು ಉದ್ದೇಶಿಸಿದ್ದು, ಸ್ಪೇಸ್ಎಕ್ಸ್ ಫಾಲ್ಕನ್ 9 ರಾಕೆಟ್ ಮೂಲಕ ಕೇಪ್ಕಾರ್ನಿವಾಲ್ ವಾಯುಪಡೆ ನೆಲೆಯಿಂದ ಇದನ್ನು ಉಡಾಯಿಸಲಾಗುತ್ತದೆ.

ಟ್ರಾನ್ಸಿಸ್ಟಿಂಗ್ ಎಕ್ಸ್ಪೊನೆಂಟ್ ಸರ್ವೆ ಸೆಟಲೈಟ್ (ಟಿಇಎಸ್ಎಸ್)

ಯೋಜನೆಯ ಪ್ರಾಥಮಿಕ ಉದ್ದೇಶವೆಂದರೆ, ಭೂಮಿಗೆ ಸನಿಹದಲ್ಲಿರುವ ಪ್ರಖರವಾದ ನಕ್ಷತ್ರಗಳನ್ನು ಸಮೀಕ್ಷೆ ಮಾಡುವುದು ಹಾಗೂ ಬಾಹ್ಯ ಗ್ರಹಗಳ ಸಾಧ್ಯತೆಯ ಬಗ್ಗೆ ಎರಡು ವರ್ಷಗಳ ಅವಧಿಗೆ ಅಧ್ಯಯನ ಸಮೀಕ್ಷೆಯನ್ನು ಕೈಗೊಳ್ಳುವುದು. ಇದು ವಿಭಿನ್ನ ಶ್ರೇಣಿಯ ವಿಸ್ತøತವಾದ ಕ್ಷೇತ್ರ ಕ್ಯಾಮೆರಾಗಳನ್ನು ಒಳಗೊಂಡಿದ್ದು, ಇಡೀ ಆಕಾಶದ ಸಮೀಕ್ಷೆ ನಡೆಸಲು ಇದು ಪೂರಕವಾಗಲಿದೆ. ಇದು ಟ್ರಾನ್ಸಿಸ್ಟ್ ಫೊಟೊಮೆಟ್ರಿ ವಿಧಾನದ ಮೂಲಕ ಸಾವಿರಾರು ನಕ್ಷತ್ರಮಂಡಲಗಳನ್ನು ಪತ್ತೆ ಮಾಡಲು ಸಹಕಾರಿಯಾಗಲಿದೆ.

ಇದು ಜೇಮ್ಸ್ ವೆಬ್ ಸ್ಪೇಸ್ ಟೆಲೆಸ್ಕೋಪ್ ಇನ್ನಷ್ಟು ಗುಣಲಕ್ಷಣಗಳನ್ನು ಹೊಂದಿದ್ದು, ಇದರ ಜತೆಗೆ ದೊಡ್ಡ ಪ್ರಮಾಣದ ಭೂ ಆಧರಿತ ಮತ್ತು ಬಾಹ್ಯಾಕಾಶ ಆಧರಿತ ಟೆಲೆಸ್ಕೋಪ್ಗಳನ್ನು ಭವಿಷ್ಯದಲ್ಲಿ ಹೊಂದುವ ನಿರೀಕ್ಷೆ ಇದೆ. ಟಿಇಎಸ್ಎಸ್ನೊಂದಿಗೆ, ಸಣ್ಣ ಗ್ರಹ ಪುಂಜಗಳ ದ್ರವ್ಯರಾಶಿ, ಗಾತ್ರ, ಸಾಂದ್ರತೆ ಮತ್ತು ಕಕ್ಷೆಯನ್ನು ಅಧ್ಯಯನ ಮಾಡಲು ಸಾಧ್ಯವಾಗಲಿದೆ. ಇದರಲ್ಲಿ ಶಿಲಾಮಯವಾಗಿರುವ ಜೀವಿಸಲು ಯೋಗ್ಯವಾದ ಭೂಮಿಯ ಮಾದರಿಯನ್ನು ಪತ್ತೆ ಮಾಡಲು ಮತ್ತು ಅವುಗಳನ್ನು ಹೊಂದಿದ ನಕ್ಷತ್ರಗಳನ್ನು ಅಧ್ಯಯನ ಮಾಡಲು ಕೂಡಾ ಸಾಧ್ಯವಾಗಲಿದೆ. ಅಧ್ಯಯನವು ನಿರ್ದಿಷ್ಟ ಗ್ರಹವು  ಭೂಮಿಯಂತೆ ಕಲ್ಲಿನಿಂದ ಕೂಡಿದೆಯೇ ಅಥವಾ ಗುರುಗ್ರಹದಂತೆ ದೈತ್ಯ ಬಂಡೆಗಳ ಗ್ರಹವಾಗಿದೆಯೇ ಅಥವಾ ಇನ್ನೂ ವಿಶೇಷಣಗಳಿಂದ ಕೂಡಿವೆಯೇ ಎನ್ನುವುದನ್ನು ಪತ್ತೆ ಮಾಡಲು ಕೂಡಾ ಸಹಕಾರಿಯಾಗಲಿದೆ.

Comment