New KAS prelims batch starts from 6th August 2018 - For registration Contact: 9686664983/9845512052. Admission Open for Universal School of Admission (B.A & B.com with IAS/KAS Integrated Coaching) Contact - 9686664985/080-46568844

ರಕ್ಷಣಾ ಉತ್ಪಾದನೆ: ಕರಡು ನೀತಿ ಬಿಡುಗಡೆ

ರಕ್ಷಣಾ ಉತ್ಪಾದನೆ: ಕರಡು ನೀತಿ ಬಿಡುಗಡೆ

ಕೇಂದ್ರ ರಕ್ಷಣಾ ಸಚಿವಾಲಯ ರಕ್ಷಣಾ ಉತ್ಪಾದನೆ ಕುರಿತಂತೆ ಕರಡು ನೀತಿಯನ್ನು ಬಿಡುಗಡೆ ಮಾಡಿದೆ. ಭಾರತವನ್ನು ವಿಶ್ವದ ಅಗ್ರ ಐದು ರಕ್ಷಣಾ ಸಾಮಗ್ರಿಗಳ ಉತ್ಪಾದನಾ ರಾಷ್ಟ್ರವಾಗಿಸುವ ಗುರಿಯನ್ನು ಕರಡು ನೀತಿ ಹೊಂದಿದೆ. ಇದಕ್ಕಾಗಿ ಸರ್ಕಾರಿ ಹಾಗೂ ಖಾಸಗಿ ವಲಯದ ಕೈಗಾರಿಕೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಇದು ಉತ್ತೇಜನ ನೀಡಲಿದೆ. ಸಚಿವಾಲಯವು ಕರಡು ನೀತಿಗೆ ತಜ್ಞರು ಹಾಗೂ ವಿವಿಧ ಹಕ್ಕುದಾರರ ಅಭಿಪ್ರಾಯಗಳನ್ನು ಹಾಗೂ ಸಲಹೆಗಳನ್ನು ಆಹ್ವಾನಿಸಿದೆ. ಪ್ರಸ್ತುತ ಭಾರತ ವಿಶ್ವದಲ್ಲೇ ಅತಿಹೆಚ್ಚು ಶಸ್ತ್ರಾಸ್ತ್ರಗಳು ಮತ್ತು ಸೇನಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವ ದೇಶವಾಗಿದೆ.

ನೀತಿಯ ಉದ್ದೇಶಗಳು

  • ಭಾರತವನ್ನು ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬಿ ದೇಶವಾಗಿ ಮಾಡುವುದು ಹಾಗೂ ಸ್ನೇಹಪರ ದೇಶಗಳ ಬೇಡಿಕೆಯನ್ನು ಈಡೇರಿಸುವಂತೆ ಮಾಡುವುದು ಇದರ ಮುಖ್ಯ ಉದ್ದೇಶ. ದೇಶೀಯ ರಕ್ಷಣಾ ಉದ್ಯಮವನ್ನು ಉತ್ತೇಜಿಸುವ ಮೂಲಕ 2025ರೊಳಗೆ ಸೇನಾ ಸರಕು ಮತ್ತು ಸೇವೆಗಳ ವಹಿವಾಟನ್ನು 1,70,000 ಕೋಟಿ ರೂಪಾಯಿಗಳಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ.
  • ಭಾರತವನ್ನು ವಿಶ್ವದ ಅಗ್ರ ಐದು ರಕ್ಷಣಾ ಸಾಮಗ್ರಿಗಳ ಉತ್ಪಾದನಾ ರಾಷ್ಟ್ರವಾಗಿಸುವ ಗುರಿಯನ್ನು ಕರಡು ನೀತಿ ಹೊಂದಿದೆ. ಇದಕ್ಕಾಗಿ ಸರ್ಕಾರಿ ಹಾಗೂ ಖಾಸಗಿ ವಲಯದ ಕೈಗಾರಿಕೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಇದು ಉತ್ತೇಜನ ನೀಡಲಿದೆ.
  • ದೇಶೀಯ ರಕ್ಷಣಾ ಉದ್ಯಮವನ್ನು ಉತ್ತೇಜಿಸುವ ಮೂಲಕ 2025ರೊಳಗೆ ಸೇನಾ ಸರಕು ಮತ್ತು ಸೇವೆಗಳ ಒಟ್ಟು ರಫ್ತು ಮೌಲ್ಯವನ್ನು 35,000 ಕೋಟಿ ರೂಪಾಯಿಗಳಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ.
  • ದೇಶದಲ್ಲಿ ಸುಮಾರು 20 ರಿಂದ 30 ಲಕ್ಷ ಜನರಿಗೆ ಉದ್ಯೋಗಾವಕಾಶ ಸೃಷ್ಟಿಸುವ ದೃಷ್ಟಿಯಿಂದ ಹೆಚ್ಚುವರಿಯಾಗಿ 70 ಸಾವಿರ ಕೋಟಿ ರೂಪಾಯಿಗಳ ಹೂಡಿಕೆಯನ್ನು ಆಕರ್ಷಿಸುವ ಗುರಿಯನ್ನೂ ಕರಡು ನೀತಿ ಹೊಂದಿದೆ.

ಲಕ್ಷಣಗಳು

ಮಿಲಿಟರಿ ಪ್ಲಾಟ್ಫಾರಂಗಳ ಗುರುತಿಸುವಿಕೆ: ಕರಡು ನೀತಿಯು ಪ್ರಮುಖವಾಗಿ 12 ಮಿಲಿಟರಿ ಪ್ಲಾಟ್ಫಾರಂಗಳನ್ನು ಹಾಗೂ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಭಾರತದಲ್ಲಿ ಉತ್ಪಾದಿಸಲು ಮತ್ತು ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವಂತೆ ಮಾಡುವುದು ಇದರ ಗುರಿ. ಇವುಗಳೆಂದರೆ ಯುದ್ಧವಿಮಾನಗಳು, ಯುದ್ಧನೌಕೆಗಳು, ಭೂ ಸಮರ ವಾಹನಗಳು, ಕ್ಷಿಪಣಿ ವ್ಯವಸ್ಥೆ, ಮಧ್ಯಮ ಲಿಫ್ಟ್ ಮತ್ತು ಬಳಕೆ ಹೆಲಿಕಾಪ್ಟರ್ಗಳು, ಬಂದೂಕು ವ್ಯವಸ್ಥೆ, ಸಣ್ಣ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಶಸ್ತ್ರಾಶ್ತ್ರಗಳು, ಎಲೆಕ್ಟ್ರಾನಿಕ್ ಯುದ್ಧಕ್ಷೇತ್ರ ವ್ಯವಸ್ಥೆ, ಕಣ್ಗಾವಲು ವ್ಯವಸ್ಥೆ ಮತ್ತು ರಾತ್ರಿ ಯುದ್ಧದ ಸಾಮಗ್ರಿಗಳು ಮತ್ತು ಇತರ ಸೌಲಭ್ಯಗಳು ಇದರಲ್ಲಿ ಸೇರುತ್ತವೆ.

ರಕ್ಷಣಾ ಕೈಗಾರಿಕೆಗಳಿಗೆ ಲೈಸನ್ಸಿಂಗ್ ಪ್ರಕ್ರಿಯೆ: ಇದು ಲೈಸನ್ಸ್ ವ್ಯವಸ್ಥೆಯನ್ನು ಸಡಿಲಿಸಲಿದ್ದು, ಲೈಸನ್ಸ್ ಪಡೆಯಬೇಕಾದ ವಸ್ತುಗಳ ಪಟ್ಟಿಯನ್ನು ಪರಾಮರ್ಶಿಸಿ ಪರಿಷ್ಕರಿಸಲಿದೆ. ಕೆಲ ಸಣ್ಣ ಋಣಾತ್ಮಕ ಪಟ್ಟಿಯನ್ನು ಹೊರತುಪಡಿಸಿ, ಇತರ ವಸ್ತುಗಳನ್ನು ಲೈಸನ್ಸಿಂಗ್ ವ್ಯವಸ್ಥೆಯಿಂದ ಹೊರತುಪಡಿಸಲಾಗುತ್ತದೆ. ರಕ್ಷಣಾ ಸಾಮಗ್ರಿಗಳ ಉದ್ಯಮಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗುವ ಎಲ್ಲ ಅರ್ಜಿಗಳನ್ನು 30 ದಿನಗಳ ಒಳಗಾಗಿ ವಿಲೇವಾರಿ ಮಾಡಲಾಗುವುದು. ನಿರಾಕ್ಷೇಪಣಾ ಪತ್ರ ಮತ್ತು ಎಲ್ಲ ಏಜೆನ್ಸಿಗಳ ಅಭಿಪ್ರಾಯಗಳನ್ನು ಕಂಪನಿ ಅರ್ಜಿ ಸಲ್ಲಿಸಿ ಎರಡು ವಾರಗಳ ಒಳಗಾಗಿ ಒದಗಿಸಬೇಕಾಗುತ್ತದೆ.

ರಕ್ಷಣಾ ಉದ್ಯಮಕ್ಕೆ ತೆರಿಗೆ ವ್ಯವಸ್ಥೆ: ರಕ್ಷಣಾ ಉದ್ಯಮಕ್ಕೆ ತೆರಿಗೆ ವ್ಯವಸ್ಥೆಯನ್ನು ಹೆಚ್ಚು ತಾರ್ಕಿಕಗೊಳಿಸಲಾಗುವುದು. ಮೂಲಕ ದೇಶೀಯ ಉತ್ಪಾದನೆಯನ್ನು ಹೆಚ್ಚು ಆಕರ್ಷಕವಾಗಿಸುವುದು ಮತ್ತು ತೆರಿಗೆ ಕಳ್ಳತನವನ್ನು ತಡೆಯುವುದು ಇದರ ಉದ್ದೇಶ. ಎಲ್ಲ ಬಮಡವಾಳ ಸರಕು ಮತ್ತು ಸೇವೆಗಳ ತೆರಿಗೆಯನ್ನು ತಾರ್ಕಿಕಗೊಳಿಸುವುದು, ರಕ್ಷಣಾ ಉತ್ಪಾದನೆಯಲ್ಲಿ ಬಳಕೆಯಾಗುವ ಸಾಧನಗಳು ಮತ್ತು ಸಾಮಗ್ರಿಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವುದು ಇದರಲ್ಲಿ ಸೇರಿದೆ.

Comment