Free IAS workshop by Topper On 17th June at 9.30am and New KAS prelims batch starts from 15th July 2018 - For registratin Contact: 9686664983/9845512052. Admission Open for Universal School of Admission (B.A & B.com with IAS/KAS Integrated Coaching) Contact - 9686664985/080-46568844

ಸಂರಕ್ಷಿತ ಪ್ರದೇಶ ಪರವಾನಗಿ ನಿಯಮಾವಳಿ ಸಡಿಲ

ಸಂರಕ್ಷಿತ ಪ್ರದೇಶ ಪರವಾನಗಿ ನಿಯಮಾವಳಿ ಸಡಿಲ

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಸಂರಕ್ಷಿತ ಪ್ರದೇಶ ಪರವಾನಗಿ (ಪಿಎಪಿ) ವ್ಯವಸ್ಥೆಯನ್ನು ಸಡಿಲಿಸಲು ನಿರ್ಧರಿಸಿದೆ. ಇದರಿಂದ ವಿದೇಶಿ ಪ್ರವಾಸಿಗಳು ಭಾರತದ ಗಡಿಭಾಗಗಳಿಗೆ ಸುಲಭವಾಗಿ ಭೇಟಿ ನೀಡಲು ಸಾಧ್ಯವಾಗಲಿದೆ. ಭಾರತದ ಪ್ರವಾಸೋದ್ಯಮವನ್ನು ಉತ್ತೇಜಿಸುವ ದೃಷ್ಟಿಯಿಂದ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು, ಇದರಿಂದ ಸ್ಥಳೀಯರಿಗೆ ಉದ್ಯೋಗ ಸೃಷ್ಟಿ ಮತ್ತು ಸರ್ಕಾರಕ್ಕೆ ಆದಾಯವನ್ನು ತಂದುಕೊಡುವುದು ಸಾಧ್ಯವಾಗಲಿದೆ.

ಪ್ರಮುಖ ಅಂಶಗಳು

ಪ್ರವಾಸೋದ್ಯಮ ಸಚಿವಾಲಯ ಪದೇ ಪದೇ ಪರವಾನಗಿ ವ್ಯವಸ್ಥೆಯ ನಿಯಮಾವಳಿಯನ್ನು ಸಡಿಲಿಸುವಂತೆಎ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಪರವಾನಗಿ ವ್ಯವಸ್ಥೆಯನ್ನು ಸಡಿಲಿಸುವ ಪ್ರಸ್ತಾವವನ್ನು ಕೈಗೆತ್ತಿಕೊಳ್ಳಲಾಗಿದೆ. ಗೃಹ ವ್ಯವಹಾರಗಳ ಸಚಿವಾಲಯವು ಇತರ ಏಜೆನ್ಸಿಗಳು ಮತ್ತು ರಾಜ್ಯ ಸರ್ಕಾರಗಳ ಜತೆ ಸಮನ್ವಯದಲ್ಲಿ ನಿಯಮಾವಳಿ ಸಡಿಲಿಸಬಹುದಾದ ಸಂರಕ್ಷಿತ ಪ್ರದೇಶವನ್ನು ಪಟ್ಟಿ ಮಾಡಲಿದೆ. ಇದರ ಅನ್ಯವ ರಾಜ್ಯ ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿ ಯಾವ ಪ್ರದೇಶಗಳನ್ನು ಸಂರಕ್ಷಿತ ಪ್ರದೇಶಗಳ ಪಟ್ಟಿಯಿಂದ ಬೇರ್ಪಡಿಸಿ, ಸಾರ್ವಜನಿಕ ಪ್ರವೇಶಕ್ಕೆ ಮುಕ್ತಗೊಳಿಸಲು ಶಿಫಾರಸ್ಸು ಮಾಡಬಹುದಾಗಿದೆ. ಆದರೆ ಪಾಕಿಸ್ತಾನ ಮತ್ತು ಚೀನಾ ಪ್ರವಾಸಿಗರಿಗೆ ನಿಯಮಾವಳಿ ಸಡಿಲಿಕೆಯ ಪ್ರಯೋಜನ ನೀಡುವುದು ಸಾಧ್ಯವಿಲ್ಲ ಎನ್ನಲಾಗಿದೆ.

ಸಂರಕ್ಷಿತ ಪ್ರದೇಶ ಮತ್ತು ಸಂರಕ್ಷಿತ ಪ್ರದೇಶ ಪರವಾನಗಿ

ವಿದೇಶೀಯರ (ಸಂರಕ್ಷಿತ ಪ್ರದೇಶ) ಆದೇಶ- 1958 ಅನ್ವಯ, ಅಂತರರಾಷ್ಟ್ರೀಯ ಗಡಿ ಮತ್ತು ಅದರ ಒಳಭಾಗದಲ್ಲಿ ಬರುವ ಪ್ರದೇಶಗಳನ್ನು ಸಂರಕ್ಷಿತ ಪ್ರದೇಶ ಎಂದು ಪರಿಗಣಿಸಲಾಗುತ್ತದೆ. ಪ್ರಸ್ತುತ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಇಡೀ ಅರುಣಾಚಲ ಪ್ರದೇಶ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ, ಭಾಗಶಃ ಹಿಮಾಚಲ ಪ್ರದೇಶ, ಉತ್ತರಾಖಂಡ, ರಾಜಸ್ಥಾನ ಮತ್ತು ಜಮ್ಮು ಕಾಶ್ಮೀರ ಸೇರುತ್ತದೆ. ಸಿಕ್ಕಿಂನ ಕೆಲ ಭಾಗಗಳು ಕೂಡಾ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತಿದ್ದು, ಉಳಿದ ಪ್ರದೇಶಗಳ ನಿರ್ಬಂಧಿತ ಪ್ರದೇಶಗಳ ವ್ಯವಸ್ಥೆಗೆ ಒಳಪಡುತ್ತವೆ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ 2010 ಡಿಸೆಂಬರ್ನಲ್ಲಿ ಹೊರಡಿಸಿದ ಸುತ್ತೋಲೆಯ ಪ್ರಕಾರ, ಮಣಿಪುರ, ಮಿಜೋರಾಂ ಮತ್ತು ನಾಗಲ್ಯಾಂಡ್ಗಳನ್ನು ಸುರಕ್ಷಿತ ಪ್ರದೇಶ ವ್ಯವಸ್ಥೆಯಿಂದ ಆರಂಭದಲ್ಲಿ ಒಂದು ವರ್ಷಗಳ ವರೆಗೆ ಹೊರಗಿಡಲಾಗಿತ್ತು. 2011 ಜನವರಿಯಿಂದ ಒಂದು ವರ್ಷದ ವರೆಗೆ ಸಡಿಲಿಕೆ ಮಾಡಲಾಗಿತ್ತು.

ಮಾರ್ಗಸೂಚಿಗಳು: ಇದರ ಅನ್ವಯ, ವಿದೇಶಿ ಪ್ರಜೆಗಳಿಗೆ ಸಂರಕ್ಷಿತ ಪ್ರದೇಶ ಅಥವಾ ನಿರ್ಬಂಧಿತ ಪ್ರದೇಶಗಳಿಗೆ ಭೇಟಿ ನೀಡಲು ಅವಕಾಶವಿಲ್ಲ. ಆತ ಅಥವಾ ಆಕೆಯ ಭೇಟಿಗೆ ವಿಶೇಷ ಕಾರಣಗಳು ಇವೆ ಎಂದು ಸರ್ಕಾರಕ್ಕೆ ಮನವರಿಕೆಯಾದಲ್ಲಿ ಮಾತ್ರ ಅನುಮತಿ ನೀಡಲಾಗುತ್ತದೆ. ಭೂತಾನ್ ನಾಗರಿಕರನ್ನು ಹೊರತುಪಡಿಸಿ ಪ್ರತಿ ವಿದೇಶೀಯರು, ಇಂಥ ಅನುಮತಿ ಪಡೆಯಲು ಇದಕ್ಕೆ ನಿಯೋಜಿತವಾಗಿರುವ ವಿಶೇಷ ಅಧಿಕಾರಿಯಿಂದ ಲಿಖಿತ ಅನುಮತಿ ಪಡೆಯಬೇಕಾಗುತ್ತದೆ. ಅಪ್ಘಾನಿಸ್ತಾನ, ಚೀನಾ ಮತ್ತು ಪಾಕಿಸ್ತಾನದ ನಾಗರಿಕರು ಮತ್ತು ಪಾಕಿಸ್ತಾನದ ಮೂಲದ ವಿದೇಶಿಯರಿಗೆ ಇಂಥ ಪ್ರದೇಶಗಳನ್ನು ಸಂದರ್ಶಿಸಲು ಅವಕಾಶ ಇಲ್ಲ.

ಪರವಾನಗಿ ಪ್ರಾಧಿಕಾರ: ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಪೂರ್ವಾನುಮತಿ ಪಡೆದು, ಇಂಥ ಸ್ಥಳಗಳನ್ನು ವೀಕ್ಷಿಸಲು ವಿದೇಶಿಯರಿಗೆ ಪರವಾನಗಿ ನೀಡಲು ಹಲವು ಮಂದಿ ಅಧಿಕಾರಿಗಳಿಗೆ ಅಧಿಕಾರ ನೀಡಲಾಗುತ್ತದೆ. ಕೆಲ ಅಪವಾದಗಳನ್ನು ಹೊರತುಪಡಿಸಿ, ಉಳಿದ ಎಲ್ಲ ವಿದೇಶಿಯರಿಗೆ ಅನುಮತಿ ಪತ್ರವನ್ನು ನೀಡಬಹುದಾಗಿದೆಕೇಂದ್ರ ಗೃಹ ಸಚಿವಾಲಯದಿಂದ ವಿಶೇಷ ಅನುಮತಿ ಪಡೆಯದೇ, ಅಪ್ಘಾನಿಸ್ತಾನ, ಚೀನಾ ಮತ್ತು ಪಾಕಿಸ್ತಾನದ ನಾಗರಿಕರು ಮತ್ತು ಪಾಕಿಸ್ತಾನದ ಮೂಲದ ವಿದೇಶಿಯರಿಗೆ ಇಂಥ ಪ್ರದೇಶಗಳನ್ನು ಸಂದರ್ಶಿಸಲು ಅವಕಾಶ ಇಲ್ಲ. ವಿದೇಶಿ ರಾಜತಾಂತ್ರಿಕರು, ವಿಶ್ವಸಂಸ್ಥೆಯ ಸದಸ್ಯರು ಮತ್ತು ಅಧಿಕೃತ ರಾಜತಾಂತ್ರಿಕ ಪಾಸ್ಪೋರ್ಟ್ ಹೊಂದಿರುವ ಅಂತರರಾಷ್ಟ್ರೀಯ ಸಂಘಟನೆಗಳ ಸದಸ್ಯರಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಿಶೇಷ ಪರವಾನಿಯನ್ನು ಒದಗಿಸಿ, ಸಂರಕ್ಷಿತ ಪ್ರದೇಶ ಹಾಗೂ ನಿರ್ಬಂಧಿತ ಪ್ರದೇಶಗಳಿಗೆ ಭೇಟಿ ನೀಡಲು ಅವರಿಗೆ ಅನುಮತಿಯನ್ನು ನೀಡುತ್ತದೆ.

Comment