IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಜಿಪಿಐ ಟ್ರ್ಯಾಕರ್ ವ್ಯವಸ್ಥೆ: ಸ್ವಿಫ್ಟ್ ನಿಂದ ಪಾವತಿ ಟ್ರ್ಯಾಕಿಂಗ್ ವ್ಯವಸ್ಥೆ ಬಲವರ್ಧನೆ

ಜಿಪಿಐ ಟ್ರ್ಯಾಕರ್ ವ್ಯವಸ್ಥೆ: ಸ್ವಿಫ್ಟ್ ನಿಂದ ಪಾವತಿ ಟ್ರ್ಯಾಕಿಂಗ್ ವ್ಯವಸ್ಥೆ ಬಲವರ್ಧನೆ

ಸೊಸೈಟಿ ಫಾರ್ ವಲ್ರ್ಡ್ ಇಂಟರ್ಬ್ಯಾಂಕ್ ಫೈನಾನ್ಶಿಯಲ್ ಟೆಲಿಕಮ್ಯುನಿಕೇಶನ್ ಸಿಸ್ಟಮ್ (ಸ್ವಿಫ್ಟ್) ಪ್ಲಾಟ್ಫಾರಂ, ಜಾಗತಿಕ ಪಾವತಿ ಅನುಶೋಧನೆ (ಜಿಪಿಐ) ಟ್ರ್ಯಾಕರ್ ಅಭಿವೃದ್ಧಿಪಡಿಸಿದ್ದು, ಇದು ಬ್ಯಾಂಕುಗಳು ತಮ್ಮ ಜಾಗತಿಕ ವಹಿವಾಟುಗಳನ್ನು ಟ್ರ್ಯಾಕ್ ಮಾಡಲು ಅನುಕೂಲವಾಗಲಿದೆ. ಇದು ಇಡೀ ಪಾವತಿ ಚಟುವಟಿಕೆಗಳ ಮೇಲೆ ಸಂಪೂರ್ಣ ನಿಗಾ ವಹಿಸಲು ಸಹಕಾರಿಯಾಗಲಿದೆ.

ಪ್ರಮುಖ ಅಂಶಗಳು

2018 ನವೆಂಬರ್ನಿಂದ ಜಿಪಿಐ ಟ್ರ್ಯಾಕರ್ ವ್ಯವಸ್ಥೆ ಜಾರಿಗೆ ಬರಲಿದ್ದು, ಇದು ವಿಶಿಷ್ಟವಾದ ಒಂದು ಕಡೆಯಿಂದ ಇನ್ನೊಂದು ಅಂತ್ಯದ ವರೆಗಿನ ವಹಿವಾಟುಗಳನ್ನು ಮತ್ತು ವರ್ಗಾವಣೆಗೆ ಬಳಸುವ ಪಾವತಿ ಸಾಧನಗಳನ್ನು ಪತ್ತೆ ಮಾಡಲು ಸಹಕಾರಿಯಾಗಲಿದೆ. ಸ್ವಿಫ್ಟ್ 200 ದೇಶಗಳ ತನ್ನ ಎಲ್ಲ 11 ಸಾವಿರ ಗ್ರಾಹಕರಿಗೆ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ. ಜಿಪಿಐ ಟ್ರ್ಯಾಕರ್ ವಿಸ್ತರಣೆಯು ಎಲ್ಲ ಪಾವತಿ ಸೂಚನೆಗಳನ್ನು ಯಾವುದೇ ಜಾಲಗಳಲ್ಲಿ ನೀಡಿದರೂ, ಅದನ್ನು ಪತ್ತೆ ಮಾಡಲು ಸಹಕಾರಿಯಾಗಲಿದೆ. ಎಲ್ಲ ಪಾವತಿ ಚಟುವಟಿಕೆಗಳನ್ನು ಇದು ತಿಳಿಸಿಕೊಡಲಿದೆ. ಇದು ಇಡೀ ವಹಿವಾಟಿನಲ್ಲಿ ಅಧಿಕ ಪಾರದರ್ಶಕತೆ ತಂದುಕೊಡಲಿದ್ದು, ಹೊಸ ಜಿಪಿಐ ವ್ಯವಸ್ಥೆಗೆ ಎಲ್ಲ ಬ್ಯಾಂಕುಗಳು ಸೇರ್ಪಡೆಯಾಗಲು ಇದು ಪ್ರೇರಣೆಯಾಗಲಿದೆ. ಇದು ಗಡಿಯಾಚೆಗಿನ ಪಾವತಿಗಳನ್ನು ತಿಳಿದುಕೊಳ್ಳುವ ಸುಲಭ ಸಾಧನವಾಗಲಿದೆ.

ಸ್ವಿಫ್ಟ್ ಜಿಪಿಐ

ಸ್ವಿಫ್ಟ್ ಜಿಪಿಐ ವ್ಯವಸ್ಥೆಯನ್ನು 2017 ಮೇ ತಿಂಗಳಲ್ಲಿ ಆರಂಭಿಸಲಾಗಿದೆ. ಇದು ಬ್ಯಾಂಕುಗಳು ತಮ್ಮ ಜಾಗತಿಕ ವಹಿವಾಟುಗಳನ್ನು ತಕ್ಷಣವೇ ಪತ್ತೆ ಮಾಡಲು ಇದು ಅನುವು ಮಾಡಿಕೊಡುತ್ತದೆ. ಇದರಿಂದಾಗಿ ಇಡೀ ಪಾವತಿ ಚಟುವಟಿಕೆಗಳ ಮೇಲೆ ಇದು ಗಮನ ಹರಿಸಲಿದೆ. ಇದು ಎಲ್ಲ ಪಾವತಿ ಸೂಚನೆಗಳನ್ನು ಯಾವುದೇ ಜಾಲಗಳಲ್ಲಿ ನೀಡಿದರೂ, ಅದನ್ನು ಪತ್ತೆ ಮಾಡಲು ಸಹಕಾರಿಯಾಗಲಿದೆ. ಎಲ್ಲ ಪಾವತಿ ಚಟುವಟಿಕೆಗಳನ್ನು ಇದು ತಿಳಿಸಿಕೊಡಲಿದೆ. ಇದು ಇಡೀ ವಹಿವಾಟಿನಲ್ಲಿ ಅಧಿಕ ಪಾರದರ್ಶಕತೆ ತಂದುಕೊಡಲಿದೆ. ಇದು ಗಡಿಯಾಚೆಗಿನ ವಹಿವಾಟುಗಳ ಶೇಕಡ 10ರಷ್ಟು ಪಾಲನ್ನು ಹೊಂದಿದ್ದು, ಸ್ವಿಫ್ಟ್ ಜಾಲದಲ್ಲಿ ಇಡೀ ವಿಶ್ವಾದ್ಯಂತ ಪ್ರತಿದಿನ ಸಾವಿರಾರು ಕೋಟಿ ಡಾಲರ್ಗಳ ವರ್ಗಾವಣೆಗೆ ಅನುಕೂಲ ಕಲ್ಪಿಸಲಿದೆ.

ಪ್ರಯೋಜನಗಳು

  • ಇದು ವೇಗವನ್ನು ಹೆಚ್ಚಿಸುವ ಮೂಲಕ ಗ್ರಾಹಕ ಅನುಭವವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇದರ ಜತೆಗೆ ಪಾರದರ್ಶಕತೆಯನ್ನೂ ಇದು ಹೆಚ್ಚಿಸಲಿದ್ದು, ಜಿಪಿಐ ಪಾವತಿ ಸರಣಿಯಲ್ಲಿ ಪಾಲ್ಗೊಂಡ ಎಲ್ಲ ಜಿಪಿಐ ಬ್ಯಾಂಕ್ಗಳಿಗೆ ಸ್ಥಿತಿಗತಿಯ ವಿವರಗಳನ್ನು ಕಾಲಕಾಲಕ್ಕೆ ನೀಡುತ್ತದೆ. ಯಾವಾಗ ಪಾವತಿ ಪ್ರಕ್ರಿಯೆ ಪೂರ್ಣಗೊಂಡಿದೆ ಎನ್ನುವುದನ್ನು ಖಚಿತಪಡಿಸಲು ಇದು ನೆರವಾಗಲಿದೆ.
  • ಇದು ಪಾವತಿಗಳು ಹಾಗೂ ಇನ್ವೈಸ್ಗಳನ್ನು ಹೆಚ್ಚು ನಿಖರವಾಗಿ ಸಮನ್ವಯಗೊಳಿಸಲು ನೆರವಾಗಲಿದ್ದು, ಸುಧಾರಿತ ನಗದು ಮುನ್ಸೂಚನೆ ಮೂಲಕ ದ್ರವ್ಯತೆಯನ್ನು ಗರಿಷ್ಠಗೊಳಿಸಲು ಮತ್ತು ವಿದೇಶಿ ವಿನಿಮಯ ಅಪಾಯ ಸಾಧ್ಯತೆಗೆ ತೆರೆದುಕೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡಲಿದೆ. ಎಲ್ಲ ಕಾಲಾವಧಿಯ ವಲಯಗಳಿಗೆ ಕೂಡಾ ಅದೇ ದಿನ ನಿಧಿ ಫಲಾನುಭವಿಗಳ ಸಂಸ್ಕರಣೆ ವಹಿವಟು ನಡೆಸಲು ಇದು ಅನುಕೂಲ ಮಾಡಿಕೊಡಲಿದೆ.

ಸ್ವಿಫ್ಟ್

ಸ್ವಿಫ್ಟ್ ಎನ್ನುವುದು ಜಾಗತಿಕ ಹಣಕಾಸು ಮೆಸೇಜಿಂಗ್ ಸೇವೆಯಾಗಿದ್ದು, ಇದು ವಿಶ್ವಾದ್ಯಂತ ಎಲ್ಲ ಹಣಕಾಸು ಸಂಸ್ಥೆಗಳು, ಹಣಕಾಸು ವ್ಯವಹಾರಗಳ ಬಗ್ಗೆ ಮಾಹಿತಿಯನ್ನು ಕಳುಹಿಸಲು ಮತ್ತು ಸ್ವೀಕರಿಸಲು, ಇರುವ ಅತ್ಯಂತ ಗುಣಮಟ್ಟದ, ವಿಶ್ವಾಸಾರ್ಹ ವೇದಿಕೆಯಾಗಿದೆ. ಇದು ಎಲ್ಲ ಗಡಿಯಾಚೆಗಿನ ವರ್ಗಾವಣೆಗಳಿಗೆ  ಸಂಬಂಧಿಸಿದ ಮಾಹಿತಿಗಳನ್ನು ವರ್ಗಾಯಿಸಲು ಬಳಕೆಯಾಗುತ್ತದೆ.

ಇದು 1973ರಲ್ಲಿ ಸ್ಥಾಪನೆಯಾಗಿದ್ದು, ಇದರ ಕೇಂದ್ರ ಕಚೇರಿ ಬೆಲ್ಜಿಯಂನ ಲಾ ಹುಲ್ಪ್ನಲ್ಲಿದೆ. ಇದು ಬೆಲ್ಜಿಯಂ ಕಾನೂನಿನ ಅನ್ವಯ ಸಹಕಾರ ಸೊಸೈಟಿಯಾಗಿದ್ದು, ಇಡೀ ವಿಶ್ವದ ಎಲ್ಲ ಹಣಕಾಸು ಸಂಘ ಸಂಸ್ಥೆಗಳ ಸದಸ್ಯರ ಜಂಟಿ ಮಾಲೀಕತ್ವವನ್ನು ಹೊಂದಿದೆ. ಜಾಗತಿಕವಾಗಿ 200ಕ್ಕೂ ಅಧಿಕ ದೇಶಗಳ 11 ಸಾವಿರ ಹಣಕಾಸು ಸಂಸ್ಥೆಗಳು ಸ್ವಿಫ್ಟ್ ಸೇವೆ ಬಳಸಿಕೊಳ್ಳುತ್ತಿವೆ.

ಸ್ವಿಫ್ಟ್ ವ್ಯವಸ್ಥೆಯು ಹಣಕಾಸು ನಿಧಿ ವರ್ಗಾವಣೆಗೆ ಸೌಲಭ್ಯ ಕಲ್ಪಿಸುವುದಿಲ್ಲ. ಆದರೆ ಇದು ಪಾವತಿ ಆದೇಶವನ್ನು ಕಳುಹಿಸುವ ಕಾರ್ಯವನ್ನು ಮಾಡುತ್ತದೆ. ಆಯಾ ಖಾತೆಗಳಿಗೆ ವಿಲೇವಾರಿಯಾಗಬೇಕಾದ ಹಣದ ಬಗ್ಗೆ ಇದು ಮಾಹಿತಿ ಒದಗಿಸುತ್ತದೆ. ಸ್ವಿಫ್ಟ್ ಮೂಲಕ ಮಾಹಿತಿಯನ್ನು ಸ್ವೀಕರಿಸಿದ ಬಳಿಕ, ಬಹುತೇಕ ದೇಶೀಯ ಬ್ಯಾಂಕ್ ಶಾಖೆಗಳು ಕಂಪನಿಗಳಿಗೆ ನಿಧಿ ಒದಗಿಸುತ್ತವೆ.

Comment