Free IAS workshop by Topper On 17th June at 9.30am and New KAS prelims batch starts from 15th July 2018 - For registratin Contact: 9686664983/9845512052. Admission Open for Universal School of Admission (B.A & B.com with IAS/KAS Integrated Coaching) Contact - 9686664985/080-46568844

ವಿಶ್ವಾದ್ಯಂತ ಅರ್ಥಪೂರ್ಣ ಭೂದಿನ

ವಿಶ್ವಾದ್ಯಂತ ಅರ್ಥಪೂರ್ಣ ಭೂದಿನ

12ನೇ ವರ್ಷದ ವಿಶ್ವ ಭೂದಿನವನ್ನು 2018 ಮಾರ್ಚ್ 24ರಂದು ಆಚರಿಸಲಾಯಿತು. ಜಾಗತಿಕವಾಗಿ ಹವಾಮಾನ ಬದಲಾವಣೆ ಬಗ್ಗೆ ಜಾಗೃತಿ ಮೂಡಿಸುವುದು ಇದರ ಪ್ರಮುಖ ಉದ್ದೇಶ. ದಿನಾಚರಣೆಯ ಅಂಗವಾಗಿ ವಿಶ್ವಾದ್ಯಂತ ಎಲ್ಲ ನಗರಗಳು ಅಂದು ರಾತ್ರಿ ಸ್ಥಳೀಯ ಕಾಲಮಾನದ ಪ್ರಕಾರ 8.30ರಿಂದ 9.30ರವರೆಗೆ ದೀಪಗಳನ್ನು ಆರಿಸಿ ಕತ್ತಲು ಆಚರಿಸಿದರು.

ಬಿಡುವ ಮತ್ತು ಪಡೆಯುವ ಯೋಜನೆ

ವಿಶ್ವ ಭೂಗಂಟೆ ಅಂಗವಾಗಿ ವಲ್ಡ್ವೈಡ್ ಫಂಡ್ (ಡಬ್ಲ್ಯುಡಬ್ಲ್ಯುಎಫ್)- ಇಂಡಿಯಾ, ಬಿಡುವ ಮತ್ತು ಪಡೆಯುವ ಯೋಜನೆಗಾಗಿ ಹಿನ್ನೆಲೆಯನ್ನು ಒದಗಿಸಿಕೊಟ್ಟಿತು. ಯೋಜನೆಯ ಮುಖ್ಯ ಉದ್ದೇಶವೆಂದರೆ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರನ್ನು ಕೆಲ ಹವ್ಯಾಸಗಳನ್ನು ಕುಂಠಿತಗೊಳಿಸುವಂತೆ ಮನವೊಲಿಸುವುದು. ಪರಿಸರಕ್ಕೆ ಮತ್ತು ನಮ್ಮ ಜೀವನಕ್ಕೆ ಹೊರೆ ಎನಿಸಿದ ಕೆಲ ಚಟಗಳು, ಪದ್ಧತಿಗಳು ಹಾಗೂ ಜೀವನಶೈಲಿನ್ನು ಬಿಡುವಂತೆ ಪ್ರೇರೇಪಿಸುವುದು ಇದರ ಉದ್ದೇಶವಾಗಿದೆ. ಇದರಲ್ಲಿ ಪ್ರಮುಖವಾಗಿ ದಹಿಸುವ ಇಂಧನವನ್ನು ಬಿಡುವುದು, ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಮತ್ತು ಎಲ್ಲ ಸಿಬ್ಬಂದಿಗಾಗಿ ಏಕೈಕ ಕಾರು ಯೋಜನೆ ಜಾರಿ ಮತ್ತು -ತ್ಯಾಜ್ಯವನ್ನು ಬಿಡುವುದು ಸೇರಿದೆ.

ಭೂಗಂಟೆ

ಭೂಗಂಟೆ ಪರಿಕಲ್ಪನೆಯ ಪ್ರಮುಖ ಉದ್ದೇಶವೆಂದರೆ, ಸಾರ್ವಜನಿಕರು ಹವಾಮಾನ ಬದಲಾವಣೆಯ ವಿರುದ್ಧ ಸೆಟೆದು ನಿಲ್ಲುವಂತೆ ಪ್ರೇರೇಪಿಸುವುದು. ಇದನ್ನು ವಲ್ರ್ಡ್ವೈಡ್ ಫಂಡರ್ ಫಾರ್ ನೇಚರ್ ಸಂಘಟನೆ ಆಯೋಜಿಸುತ್ತದೆ. ಇದು ಮನುಷ್ಯ ಹಾಗೂ ಕಾಡುಪ್ರಾಣಿಗಳ ನಡುವೆ ಸಾಮರಸ್ಯದ ಸಂಬಂಧವನ್ನು ಹೊಂದುವ ಉದ್ದೇಶವನ್ನು ಹೊಂದಿದೆ. ವಿದ್ಯುತ್ ಉಳಿತಾಯ ಹಾಗೂ ಸುಸ್ಥಿರತೆಗಾಗಿ ಅನಗತ್ಯ ದೀಪಗಳನ್ನು ಆರಿಸಿ, ಇದಕ್ಕೆ ನೆರವಾಗುವ ಮೂಲಕ ಹಲವು ದೇಶಗಳಲ್ಲಿ ಒಂದು ಗಂಟೆಯ ಕತ್ತಲು ಆಚರಿಸಲಾಗಿತ್ತು. ಇದು ವಿದ್ಯುತ್ ಸುಸ್ಥಿರ ಬಳಕೆ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಪರಿಸರಾತ್ಮಕವಾಗಿ ಹೆಚ್ಚು ಸುಸ್ಥಿರ ಎನಿಸಿದ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಲು ಉದ್ದೇಶಿಸಲಾಗಿದೆ. ಮೊಟ್ಟಮೊದಲ ಭೂಗಂಟೆ ಕಾರ್ಯಕ್ರಮ 2007 ಮಾರ್ಚ್ 31ರಂದು ಆಸ್ಟ್ರೇಲಿಯಾ ರಾಜಧಾನಿ ಸಿಡ್ನಿಯಲ್ಲಿ ನಡೆದಿತ್ತು. ಇದು ಇಂದು ವಿಶ್ವದ ಅತಿದಪಡ್ಡ ತಳಮಟ್ಟದ ಪರಿಸರಸ್ನಹಿ ಚಳವಳಿಯಾಗಿ ಬೆಳೆದಿದೆ. ಇಂದು ಲಕ್ಷಾಂತರ ಮಂದಿ ನಮ್ಮ ಭೂಮಿ ಹಾಗೂ ನಿಸರ್ಗದ ರಕ್ಷಣೆಗೆ ಪಣತೊಡುವಂತೆ ಪ್ರೇರೇಪಿಸುವ ದೊಡ್ಡ ಚಳವಳಿಯಾಗಿ ಮಾರ್ಪಟ್ಟಿದೆ.

Comment