Our website is under process, we will get back soon. Sorry for the inconvenience!!!!!!

ಮಾರ್ಚ್ 25: ಅಂತರರಾಷ್ಟ್ರೀಯ ಜೀತಸಂತ್ರಸ್ತರ ಸ್ಮರಣೆ ದಿನ

ಮಾರ್ಚ್ 25: ಅಂತರರಾಷ್ಟ್ರೀಯ ಜೀತಸಂತ್ರಸ್ತರ ಸ್ಮರಣೆ ದಿನ

ಅಂತರರಾಷ್ಟ್ರೀಯ ಜೀತಸಂತ್ರಸ್ತರ ಮತ್ತು ಅಟ್ಲಾಂಟಿಕ್ನಿಂದ ವರ್ಗಾವಣೆಯಾಗುವ ಜೀತ ವ್ಯಾಪಾರದ ಸಂತ್ರಸ್ತರ ಸ್ಮರಣೆ ದಿನವಾಗಿ ಪ್ರತಿ ವರ್ಷದ ಮಾರ್ಚ್ 25ನ್ನು ಆಚರಿಸಲಾಗುತ್ತದೆ. ವಿಶ್ವಾದ್ಯಂತ ಅಂತರರಾಷ್ಟ್ರೀಯ ಜೀತಸಂತ್ರಸ್ತರ ಸ್ಮರಣೆ ದಿನ ಆಚರಿಸಲ್ಪಡುತ್ತದೆ. ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ, ಅಟ್ಲಾಂಟಿಕ್ನಿಂದ ವರ್ಗಾವಣೆಯಾಗುವ ಜೀತ ವ್ಯಾಪಾರದ ಸಂತ್ರಸ್ತರು ಅನುಭವಿಸಿದ ಕಷ್ಟ ಕಾರ್ಪಣ್ಯಗಳನ್ನು ಸ್ಮರಿಸುವುದು ಮತ್ತು ಅವರಗೆ ಗೌರವ ಸಲ್ಲಿಸುವುದು. ಜೀತ ವ್ಯಾಪಾರದಲ್ಲಿ ಹಲವು ಮಂದಿ ಜೀತದಾಳುಗಳು ಧಾರುಣ ಸಾವನ್ನು ಕಂಡಿದ್ದಾರೆ. ಇದು ವರ್ಣಬೇಧ ನೀತಿಯ ಬಗ್ಗೆ ಮತ್ತು ಅಟ್ಲಾಂಟಿಕ್ನಿಂದ ವರ್ಗಾವಣೆಯಾಗುವ ಜೀತ ವ್ಯಾಪಾರದ ಸಂತ್ರಸ್ತರ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. 400 ವರ್ಷಗಳಿಂದ ನಡೆಯುತ್ತಿದ್ದ ದಂಧೆಯನ್ನು ಮಾನವ ಇತಿಹಾಸದಲ್ಲೇ ಮಾನವ ಹಕ್ಕುಗಳ ಉಲ್ಲಂಘನೆಯ ಅತಿದೊಡ್ಡ ಪ್ರಕರಣ ಎಂದು ಗುರುತಿಸಲಾಗುತ್ತದೆ. ದಂಧೆಯಿಂದಾಗಿ ಸುಮಾರು 15 ದಶಲಕ್ಷ ಮಂದಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸಂತ್ರಸ್ತರಾಗಿದ್ದಾರೆ. 2018ನೇ ವರ್ಷದ ಧ್ಯೇಯವಾಕ್ಯವೆಂದರೆ, "ರಿಮೆಂಬರ್ ಸ್ಲೇವರಿ; ಟ್ರಂಪ್ಸ್ ಅಂಡ್ ಸ್ಟ್ರಗಲ್ಸ್ ಫಾರ್ ಫ್ರೀಡಮ್ ಅಂಡ್ ಈಕ್ವಾಲಿಟಿ" ಎಂದಾಗಿದೆ. ಇದು ಆಫ್ರಿಕನ್ ಮೂಲದ ಜೀತದವರ ಸ್ವಾತಂತ್ರ್ಯವನ್ನು ಆಚರಿಸುವ ದಿನಾಚರಣೆಯಾಗಿದೆ. ಸ್ವಾತಂತ್ರ್ಯ ಮತ್ತು ಸಮಾನತೆಯ ಪಯಣದಲ್ಲಿ ಜನರು ಎದುರಿಸಿದ ಸವಾಲುಗಳನ್ನು ಗುರುತಿಸಿ ಅವರನ್ನು ಗೌರವಿಸುವುದು ಕೂಡಾ ಇದರ ಉದ್ದೇಶ.

ಹಿನ್ನೆಲೆ

ಅಂತರರಾಷ್ಟ್ರೀಯ ಜೀತಸಂತ್ರಸ್ತರ ಮತ್ತು ಅಟ್ಲಾಂಟಿಕ್ನಿಂದ ವರ್ಗಾವಣೆಯಾಗುವ ಜೀತ ವ್ಯಾಪಾರದ ಸಂತ್ರಸ್ತರ ಸ್ಮರಣೆ ದಿನವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಿರ್ಣಯ ಮೂಲಕ 2007ರಿಂದ ಆಚರಿಸಲಾಗುತ್ತಿದೆ. ಮೊಟ್ಟಮೊದಲ ಬಾರಿಗೆ 2008ರಲ್ಲಿ ಅಂತರರಾಷ್ಟ್ರೀಯ ಜೀತಸಂತ್ರಸ್ತರ ಮತ್ತು ಅಟ್ಲಾಂಟಿಕ್ನಿಂದ ವರ್ಗಾವಣೆಯಾಗುವ ಜೀತ ವ್ಯಾಪಾರದ ಸಂತ್ರಸ್ತರ ಸ್ಮರಣೆ ದಿನವನ್ನು ಆಚರಿಸಲಾಯಿತು. ಬಳಿಕ ಪ್ರತಿ ವರ್ಷ ಇದನ್ನು ಆಚರಿಸಲಾಗುತ್ತಿದೆ. ಅದೇ ವರ್ಷ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ 62/122 ನಿರ್ಣಯದ ಮೂಲಕ ಅಂತರರಾಷ್ಟ್ರೀಯ ಜೀತಸಂತ್ರಸ್ತರ ಮತ್ತು ಅಟ್ಲಾಂಟಿಕ್ನಿಂದ ವರ್ಗಾವಣೆಯಾಗುವ ಜೀತ ವ್ಯಾಪಾರದ ಸಂತ್ರಸ್ತರ ಸ್ಮರಣೆ ದಿನವನ್ನು ಆಚರಿಸುವ ಸಂಪ್ರದಾಯಕ್ಕೆ ನಾಂದಿ ಹಾಡಲಾಯಿತು. ಕಾರ್ಯಕ್ರಮದ ಮುಖ್ಯ ಉದ್ದೇಶವೆಂದರೆ, ವರ್ಣಬೇಧ ನೀತಿ ಮತ್ತು ಪಕ್ಷಪಾತ ನೀತಿ ವಿರುದ್ಧ ಜಾಗೃತಿ ಮೂಡಿಸುವುದು. ಶೈಕ್ಷಣಿಕ ಚಟುವಟಿಕೆಗಳನ್ನು ವರ್ಷವಿಡೀ ಹಮ್ಮಿಕೊಳ್ಳುವ ಮೂಲಕ ಇದನ್ನು ಸಾಧಿಸುವ ಪ್ರಯತ್ನ ನಡೆದಿದೆ. ಚಲನಚಿತ್ರ ಪ್ರದರ್ಶನ, ವಸ್ತುಪ್ರದರ್ಶನ, ಕಾಯಂ ಸ್ಮಾರಕಗಳ ಪ್ರವಾಸ, ದುಂಡುಮೇಜಿನ ಚರ್ಚೆಗಳು ಮತ್ತಿತರ ವಿಧಾನಗಳ ಮೂಲಕ ಇದನ್ನು ಸಾಧಿಸಲಾಗುತ್ತದೆ. ಇದು ಸಾರ್ವಜನಿಕ ಮಾಹಿತಿ ಇಲಾಖೆಯ ವಿಸ್ತರಣೆ ಯೋಜನೆಯಡಿ ಇದು ಕಾರ್ಯನಿರ್ವಹಿಸುತ್ತದೆ.

Comment