IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಕೆನಡಾ ಗಣಿತಜ್ಞ ರಾಬರ್ಟ್ ಪಿ.ಲ್ಯಾಂಗ್‍ಲ್ಯಾಂಡ್‍ಗೆ ಅಬೆಲ್-2018 ಪ್ರಶಸ್ತಿ

ಕೆನಡಾ ಗಣಿತಜ್ಞ ರಾಬರ್ಟ್ ಪಿ.ಲ್ಯಾಂಗ್‍ಲ್ಯಾಂಡ್‍ಗೆ ಅಬೆಲ್-2018 ಪ್ರಶಸ್ತಿ

ಕೆನಡಾ ಗಣಿತಜ್ಞ ರಾಬರ್ಟ್ ಪಿ.ಲ್ಯಾಂಗ್ಲ್ಯಾಂಡ್ ಅವರಿಗೆ ಪ್ರಸಕ್ತ ಸಾಲಿನ ಅಬೆಲ್-2018 ಪ್ರಶಸ್ತಿ ಸಂದಿದೆ. ಇವರ ದೂರದೃಷ್ಟಿಯ ಯೋಜನೆಯಾದ ಪ್ರತಿನಿಧಿತ್ವ ಸಿದ್ಧಾಂತವನ್ನು ಸಂಖ್ಯಾ ಸಿದ್ಧಾಂತದ ಜತೆ ಸಂಪರ್ಕಿಸಿದ ಸಾಧನೆಗಾಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವರು 2018 ಮೇ ತಿಂಗಳಲ್ಲಿ ಓಸ್ಲೋದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾರ್ವೆ ಅರಸ ಹೆರಾಲ್ಡ್-5 ಅವರಿಂದ ಪ್ರಶಸ್ತಿ ಸ್ವೀಕರಿಸುವರು.

ರಾಬರ್ಟ್ ಫೆಲಾನ್ ಲ್ಯಾಂಗ್ಲ್ಯಾಂಡ್ಸ್

ರಾಬರ್ಟ್ ಫೆಲಾನ್ ಲ್ಯಾಂಗ್ಲ್ಯಾಂಡ್ಸ್ ಹುಟ್ಟಿದ್ದು, 1936 ಅಕ್ಟೋಬರ್ 6ರಂದು. ಕೆನಡಾದ ಬ್ರಿಟಿಷ್ ಕೊಲಂಬಿಯಾದ ನ್ಯೂ ವೆಸ್ಟ್ಮಿನಿಸ್ಟರ್ನಲ್ಲಿ. ಇವರನ್ನು ಲ್ಯಾಂಗ್ಲ್ಯಾಂಡ್ ಯೋಜನೆಯ ಜನಕ ಎಂದೇ ಗುರುತಿಸಲಾಗುತ್ತದೆ. ಇದು ವಿಸ್ತøತವಾದ ಕಂಜೆಕ್ಷರ್ಗಳ ಜಾಲವಾಗಿದ್ದು, ಇದು ಪ್ರತಿನಿಧಿತ್ವ ಸಿದ್ಧಾಂತವನ್ನು ಮತ್ತು ಸ್ವಯಂ ಮಾರ್ಪಾಡು ವಿಧಾನವನ್ನು ಸಂಪರ್ಕಿಸುವ ಅಧ್ಯಯನ ಭಾಗವಾಗಿದೆ. ಸ್ವಯಂಮಾರ್ಪಾಡು ವಿಧಾನ ಸಂಖ್ಯಾಸಿದ್ದಾಂತದ ಪ್ರಮುಖ ಗಲೋಯಿಸ್ ಗುಂಪಿನ ಕ್ಷೇತ್ರವಾಗಿದೆ. ಇವರು ಎಮೆರಿಟಸ್ ಪ್ರೊಫೆಸರ್ ಆಗಿದ್ದು, ಪ್ರಿನ್ಸ್ಟನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಸಂಸ್ಥೆಯ ಅಲ್ಬರ್ಟ್ ಐನ್ಸ್ಟೀನ್ ಪೀಠದ ಮುಖ್ಯಸ್ಥರಾಗಿದ್ದಾರೆ.

ಅಬೆಲ್ ಪ್ರಶಸ್ತಿ ಬಗ್ಗೆ

ಪ್ರಶಸ್ತಿಯನ್ನು ನಾರ್ವೇಯನ್ ಅಕಾಡೆಮಿ ಆಫ್ ಸೈನ್ಸ್ ಅಂಡ್ ಲೆಟರ್ಸ್ ವಾರ್ಷಿಕವಾಗಿ ನೀಡುತ್ತದೆ. ಗಣನೀಯ ಸಾಧನೆ ಮಾಡಿದ ಒಬ್ಬರು ಅಥವಾ ಅಧಿಕ ಗಣಿತಶಾಸ್ತ್ರಜ್ಞರಿಗೆ ಪ್ರಶಸ್ತಿ ನೀಡಲಾಗುತ್ತದೆ. ನಾರ್ವೆಯ ಖ್ಯಾತ ಗಣಿತಜ್ಞ ನೀಲ್ಸ್ ಹೆನ್ರಿಕ್ ಅಬೆಲ್ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.

ಪ್ರಶಸ್ತಿಯನ್ನು ನಾರ್ವೇ ಸರ್ಕಾರ 2001ರಲ್ಲಿ ಆರಂಭಿಸಿದೆ. ಪ್ರಶಸ್ತಿಯನ್ನು ಗಣಿತಶಾಸ್ತ್ರಜ್ಞರ ನೋಬೆಲ್ ಪೃಶಸ್ತಿ ಎಂದು ಗುರುತಿಸಲಾಗುತ್ತಿದ್ದು, ಗಣಿತಶಾಸ್ತ್ರ ಕ್ಷೇತ್ರದಲ್ಲಿ ಇಡೀ ವಿಶ್ವದಲ್ಲೇ ಅತ್ಯುನ್ನತ ಪ್ರಶಸ್ತಿ ಇದಾಗಿರುತ್ತದೆ.

ಇದು 60 ಲಕ್ಷ ನಾರ್ವೆಯನ್ ಕ್ರೊನೆರ್ (ಎನ್ಓಕೆ) ಅಂದರೆ 5 ಲಕ್ಷ ಯೂರೊ ನಗದು ಬಹುಮಾನವನ್ನು ಒಳಗೊಂಡಿರುತ್ತದೆ.

ಭಾರತೀಯ ಮೂಲದ ಅಮೆರಿಕನ್ ಗಣಿತಶಾಸ್ತ್ರಜ್ಞ ಆರ್.ಶ್ರೀನಿವಾಸ ವರಧನ್ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ 2007ರಲ್ಲಿ ಸಂದಿತ್ತು. ಸಂಭವನೀಯತೆಯ ಸಿದ್ಧಾಂತಕ್ಕೆ ನೀಡಿದ ಮೂಲಭೂತ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿತ್ತು. ಜತೆಗೆ ವಿಸ್ತø ವಿಮುಖತೆಯ ಕ್ರೋಢೀಕೃತ ಸಿದ್ಧಾಂತವನ್ನೂ ಪರಿಗಣಿಸಲಾಗಿತ್ತು.

Comment