Free IAS workshop by Topper On 17th June at 9.30am and New KAS prelims batch starts from 15th July 2018 - For registratin Contact: 9686664983/9845512052. Admission Open for Universal School of Admission (B.A & B.com with IAS/KAS Integrated Coaching) Contact - 9686664985/080-46568844

ಶ್ರೀಲಂಕಾ ನೌಕಾಪಡೆಗೆ ಅವಧಿಗೆ ಮುನ್ನವೇ ಎಓವಿಪಿ ಪೂರೈಸಿದ ಜಿಎಸ್‍ಎಲ್

ಶ್ರೀಲಂಕಾ ನೌಕಾಪಡೆಗೆ ಅವಧಿಗೆ ಮುನ್ನವೇ ಎಓವಿಪಿ ಪೂರೈಸಿದ ಜಿಎಸ್‍ಎಲ್

ಗೋವಾ ಶಿಪ್ಯಾರ್ಡ್ ಲಿಮಿಟೆಡ್ (ಜಿಎಸ್ಎಲ್_ ಎರಡನೇ ಅತ್ಯಾಧುನಿಕ ಕರಾವಳಿ ತೀರ ಗಸ್ತು ಹಡಗನ್ನು (ಎಓಪಿವಿ) ಶ್ರೀಲಂಕಾ ನೌಕಾಪಡೆಗೆ ಅವಧಿಗೆ ಮುಂಚಿತವಾಗಿಯೇ ಹಸ್ತಾಂತರಿಸಿದೆ. ಇದು ಗೋವಾ ಶಿಪ್ಯಾರ್ಡ್ ಹಸ್ತಾಂತರಿಸಿದ ನಾಲ್ಕನೇ ಕರಾವಳಿ ತೀರ ಗಸ್ತು ಹಡಗು (ಎಓಪಿವಿ) ಆಗಿದೆ.

ಪ್ರಮುಖ ಅಂಶಗಳು

ಹಡಗು ಶ್ರೀಲಂಕಾ ನೌಕಾಪಡೆಯ ಅತಿದೊಡ್ಡ ಹಾಗೂ ಅತ್ಯಾಧುನಿಕ ಹಡಗು ಎನಿಸಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಗೋವಾ ಶಿಪ್ಯಾರ್ಡ್ (ಜಿಎಸ್ಎಲ್) ಹಸ್ತಾಂತರಿಸಿದ ನಾಲ್ಕನೇ ಕರಾವಳಿ ತೀರ ಗಸ್ತು ಹಡಗು (ಎಓಪಿವಿ) ಆಗಿದೆ.

ಹಡಗಿನ ನಿರ್ಮಾಣ ಕಾರ್ಯಕ್ಕೆ 2015 ಮೇ ತಿಂಗಳಲ್ಲಿ ಚಾಲನೆ ನೀಡಲಾಗಿತ್ತು ಹಾಗೂ ಇದನ್ನು 2017 ಮೇ ತಿಂಗಳಲ್ಲಿ ಚಾಲನೆ ಮಾಡಲಾಗಿತ್ತು. ಇದು ಗುತ್ತಿಗೆಯಲ್ಲಿ ನಿಗದಿಪಡಿಸಿದ ಅವಧಿಯ 25 ದಿನ ಮುಂಚಿತವಾಗಿಯೇ ಹಡಗನ್ನು ಹಸ್ತಾಂತರಿಸಲಾಗಿದೆ. ಇದರೊಂದಿಗೆಎ ಗೋವಾ ಶಿಪ್ಯಾರ್ಡ್ ಲಿಮಿಟೆಡ್, 2500 ಟನ್ ಓಪಿವಿ ನಿರ್ಮಾಣ ಅವಧಿಯನ್ನು ಐದು ವರ್ಷದಿಂದ ಮೂರು ವರ್ಷಕ್ಕೆ ಇಳಿಸಿದಂತಾಗಿದೆ. ಮೊದಲು ಇಂಥ ಹಡಗು ನಿರ್ಮಾಣಕ್ಕೆ ಐದು ವರ್ಷಗಳ ಅವಧಿಯನ್ನು ತೆಗೆದುಕೊಳ್ಳುತ್ತಿತ್ತು.

ಎಸ್ಎಲ್ಓಪಿವಿ ಯೋಜನೆ

ಎಸ್ಎಲ್ಓಪಿವಿ ಯೋಜನೆಯು ಎರಡು ದೊಡ್ಡ ಗಾತ್ರದ ಹಡಗುಗಳ ನಿರ್ಮಾಣ ಯೋಜನೆಯಾಗಿದ್ದು, ಭಾರತ ಹಾಗೂ ಶ್ರೀಲಂಕಾ ನಡುವಿನ ರಕ್ಷಣಾ ಸಹಕಾರದಲ್ಲಿ ಅತುಂತ ಮಹತ್ವದ ಯೋಜನೆಯಾಗಿದೆ. ಭಾರತ ಸರ್ಕಾರದ ಸ್ವಾಮ್ಯದಲ್ಲಿರುವ ಗೋವಾ ಶಿಪ್ಯಾರ್ಡ್ ತನ್ನ ಮಿತ್ರದೇಶಕ್ಕೆ ಒದಗಿಸುತ್ತಿರುವ ಅತಿದೊಡ್ಡ ರಫ್ತು ಆದೇಶ ಇದಾಗಿದೆ. ಎಸ್ಎಲ್ಎನ್ಎಸ್ ಸಯೂರಾಲಾ ಯೋಜನೆಯಡಿ ತಯಾರಾದ ಮೊದಲ ಎಓಪಿವಿ ಹಡಗು ಆಗಿದ್ದು, ಇದನ್ನು 2017 ಜುಲೈನಲ್ಲಿ ಒಪ್ಪಂದ ಅವಧಿಗಿಂತ ಮುಂಚಿತವಾಗಿಯೇ ಪೂರೈಸಲಾಗಿತ್ತು.

ಶ್ರೀಲಂಕಾದ ಸಾಗರ ತಂತ್ರಗಾರಿಕೆಯು 2025 ಒಳಗಾಗಿ 20 ನೌಕಾ ಹಡಗುಗಳನ್ನು ಸೇರಿಸಿಕೊಳ್ಳುವುದಾಗಿದೆ. ಯೋಜನೆಯಡಿ, ಶ್ರೀಲಂಕಾ ನೌಕಾಪಡೆಯು ಇನ್ನೂ ಎರಡು ಓಪಿವಿಗಳನ್ನು ಖರೀದಿಸಲಿದೆ. ಇದರ ಜತೆಗೆ ಎರಡು ಕ್ಷಿಪ್ರ ಕ್ಷಿಪಣಿ ಹಡಗು, ಎರಡು ಅಗ್ನಿಶಾಮಕ ಹಡಗು ಹಾಗೂ ಎರಡು ಯುದ್ಧ ಹಡಗುಗಳನ್ನು ಖರೀದಿಸಲು ಉದ್ದೇಶಿಸಿದೆ. ಭಾರತದಿಂದ ಮತ್ತೆರಡು ಎಓಪಿವಿ ಖರೀದಿಸುವ ಮೂಲಕ, ಶ್ರೀಲಂಕಾ ಇದೇ ಬಗೆಯ ಒಟ್ಟು ಐದು ಹಡಗುಗಳನ್ನು ಹೊಂದಿದಂತಾಗಲಿದೆ. ಅವುಗಳೆಎಂದರೆ ಎಸ್ಎಲ್ಎನ್ಎಸ್ ಸಯೂರಾ (ಸುಕನ್ಯಾ ಕ್ಲಾಸ್ ಪಿ-620), ಎಸ್ಎಲ್ಎನ್ಎಸ್ ಸಮುದ್ರಾ ( ಮೊದಲು ಅಮೆರಿಕದ ಕರಾವಳಿ ಕಾವಲು ಪಡೆಯಲ್ಲಿದ್ದ ಪಿ- 621), ಎಸ್ಎಲ್ಎನ್ಎಸ್ ಸಾಗರ (ವಿಕ್ರಮ್ ಕ್ಲಾಸ್ ಪಿ-622) ಮತ್ತು ಎಸ್ಎಲ್ಎನ್ಎಸ್ ಸಯೂರಾಲಾ (ಪಿ 623). ನಾಲ್ಕು ಇತರ ನೌಕಾ ಹಡಗುಗಳಲ್ಲಿ, ಎರಡು ಕ್ಷಿಪ್ರ ಕ್ಷಿಪಣಿ ಹಡಗುಗಳು ಮತ್ತು ಎರಡು ವೇಗದ ಗಸ್ತು ನೌಕಗಳು ಸೇರಿವೆ. ಇವುಗಳನ್ನು ಆಸ್ಟ್ರೇಲಿಯಾದಿಂದ ಖರೀದಿಸಲಾಗಿದ್ದು, ಇವು ಈಗ ಶ್ರೀಲಂಕಾ ನೌಕಾಪಡೆಯಲ್ಲಿವೆ.

ಗೋವಾ ಶಿಪ್ಯಾರ್ಡ್ ಲಿಮಿಟೆಡ್ (ಜಿಎಸ್ಎಲ್)

ಗೋವಾ ಶಿಪ್ಯಾರ್ಡ್ ಲಿಮಿಟೆಡ್ (ಜಿಎಸ್ಎಲ್) ಭಾರತದ ಅತ್ಯುತ್ತಮ ಶಿಪ್ಯಾರ್ಡ್ಗಳಲ್ಲೊಂದಾಗಿದ್ದು, ಇದನ್ನು ಕೇಂದ್ರ ಸರ್ಕಾರ ಮಿನಿ ರತ್ನ ಕಂಪನಿ ಎಂದು ಗುರುತಿಸಿದೆ. ಇದು ಗೋವಾದ ವಾಸ್ಕೋಡಾಗಾಮದಲ್ಲಿದೆ. ಇದು 1957ರಲ್ಲಿ ಆರಂಭವಾಗಿದ್ದು, ಮೂಲಭೂತವಾಗಿ ಇದು ಭಾರತದಲ್ಲಿ ಪೋರ್ಚ್ಗಲ್ ಆಡಳಿತ ಇದ್ದ ಅವಧಿಯಲ್ಲೇ ನಿರ್ಮಾಣವಾಗಿತ್ತು. ಇದಕ್ಕೆ 'ಎಸ್ಟಲೇಏರಿಯಸ್ ನವಾಯಿಸ್ ಡೆ ಗೊವಾ" ಎಂದು ಹೆಸರಿಸಲಾಗಿತ್ತು. ಗೋವಾದಲ್ಲಿ ಬೆಳೆಯುತ್ತಿರುವ ಗಣಿಗಾರಿಕ ಉದ್ಯಮದ ನೆರವಿಗಾಗಿ ಬಾರ್ಜ್ಗಳನ್ನು ತಯಾರಿಸಲು ಇದನ್ನು ಬಳಸಲಾಗುತ್ತಿತ್ತು. ಪೋರ್ಚ್ಗಲ್ ಸೋಲು ಮತ್ತು ಬೇಷರತ್ತಾಗಿ ಭಾರತಕ್ಕೆ ಇದು ಶರಣಾದ ಹಿನ್ನೆಲೆಯಲ್ಲಿ 1961ರಲ್ಲಿ ಗೋವಾ ಭಾರತಕ್ಕೆ ಸೇರ್ಪಡೆಯಾಯಿತು. ಆಗ ಗೋವಾ ಶಿಪ್ಯಾರ್ಡ್ ಲಿಮಿಟೆಡ್ (ಜಿಎಸ್ಎಲ್)ಗೆ ಭಾರತೀಯ ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಗೆ ಯುದ್ಧನೌಕೆಗಳನ್ನು ನಿರ್ಮಿಸುವಂತೆ ಮನವಿ ಮಾಡಿಕೊಳ್ಳಲಾಯಿತು.

Comment