IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಯುನೆಸ್ಕೊ ಆಡಳಿತ ಮಂಡಳಿ ಪ್ರತಿನಿಧಿಯಾಗಿ ಜೆ.ಎಸ್.ರಜಪೂತ್

ಎನ್ಸಿಇಆರ್ಟಿ ಮಾಜಿ ನಿರ್ದೇಶಕ ಜೆ.ಎಸ್.ರಜಪೂತ್ ಅವರನ್ನು ಯುನೆಸ್ಕೊ ಆಡಳಿತ ಮಂಡಳಿಗೆ ಭಾರತದ ಪ್ರತಿನಿಧಿಯಾಗಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನೇಮಕ ಮಾಡಿದೆ. ವಿಶ್ವಸಂಸ್ಥೆಯ ಶಯಕ್ಷಣ, ವೈಜ್ಞಾನಿಕ ಮತ್ತು ಸಾಂಸ್ಕøತಿಕ ಸಂಸ್ಥೆಯ ಅಡಳಿತ ಮಂಡಳಿಯಲ್ಲಿ ಇವರು ಭಾರತವನ್ನು ಪ್ರತಿನಿಧಿಸುವರು.

ಜೆ.ಎಸ್.ರಜಪೂತ್

ಪ್ರೊಫೆಸರ್ ಜೆ.ಎಸ್.ರಜಪೂತ್ ಅವರು ಶಾಲಾ ಶಿಕ್ಷಣ ಮತ್ತು ಶಿಕ್ಷಕರ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರುವಲ್ಲಿ ನೀಡಿದ ಕೊಡುಗೆಯಿಂದಾಗಿ ಪ್ರಖ್ಯಾತರಾಗಿದ್ದಾರೆ. ಇವರು ಹಲವಾರು ಕಾರ್ಯಭಾರಗಳನ್ನು ನಿಭಾಯಿಸಿದ್ದು, ಎಸ್ಸಿಇಆರ್ಟಿ ಪ್ರೊಫೆಸರ್ ಆಗಿ 1974ರಲ್ಲಿ ಸೇವೆ ಆರಂಭಿಸಿದ್ದರು. 1977-88ರಲ್ಲಿ ಭೋಪಾಲ್ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿದರು. 1994-99 ಅವಧಿಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಲಾಖೆಯ ಜಂಟಿ ಶಿಕ್ಷಣ ಸಲಹೆಗಾರರಾಗಿ, ಶಿಕ್ಷಕ ಶಿಕ್ಷಣದ ರಾಷ್ಟ್ರೀಯ ಮಂಡಳಿ (ಎನ್ಸಿಟಿಇ) ಅಧ್ಯಕ್ಷರಾಗಿ ಮತ್ತು 1999-2004 ಅವಧಿಯಲ್ಲಿ ಎನ್ಸಿಇಆರ್ಟಿ ನಿರ್ದೇಶಕರಾಗಿ ಕಾರ್ಯಭಾರ ನಿರ್ವಹಿಸಿದರು.

ಎನ್ಸಿಇಆರ್ಟಿ ನಿರ್ದೇಶಕರಾಗಿ ಇವರು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಶಾಲಾ ಪಠ್ಯಕ್ರಮದಲ್ಲಿ ಮೌಲಿಕ ಬದಲಾವಣ ತಂದ ಅವರು, ಐದು ಮೌಲ್ಯಗಳನ್ನು ಅಳವಡಿಸಿದರು. ಅವುಗಳೆಂದರೆ ಸತ್ಯ, ಶಾಂತಿ, ಅಹಿಂಸೆ, ಧರ್ಮ ಮತ್ತು ಪ್ರೀತಿ. ಇವರು ಹಲವು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದು, ಶಿಕ್ಷಣದಲ್ಲಿ ಹಲವು ವಿಶೇಷ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಹಲವು ಸಂಶೋಧಕರಿಗೆ ಮಾರ್ಗದರ್ಶನ ಮಾಡಿದ ಇವರು ಹಲವು ಕೃತಿಗಳನ್ನೂ ರಚಿಸಿದ್ದರು.

ಯುನೆಸ್ಕೊ ಮತ್ತು ಇತರ ಅಂತರರಾಷ್ಟ್ರೀಯ ಏಜೆನ್ಸಿಗಳ ಜತೆಗಿನ ಇವರ ಸಂಬಂಧ ಸುಮಾರು ಮೂರು ದಶಕಗಳಷ್ಟು ಹಳೆಯದು. 2005 ಏಪ್ರಿಲ್- ಮೇ ತಿಂಗಳಲ್ಲಿ ಯುನೆಸ್ಕೊಗೆ ಆಹ್ವಾನಿತರಾಗಿದ್ದ ಇವರು, ಯುನೆಸ್ಕೊ ಅಂತರರಾಷ್ಟ್ರೀಯ ತಾಂತ್ರಿಕ ಹಾಗೂ ವೃತ್ತಿಪರ  ಶಿಕ್ಷಣ ಕೇಂದ್ರದ ಮೌಲ್ಯಮಾಪನಕ್ಕೆ ಆಯ್ಕಯಾಗಿದ್ದರು. ಇದು ಜರ್ಮನಿಯ ಬಾನ್ ನಗರದ ಯುವೆಕೋವ್ನಲ್ಲಿದೆ. ಇವರು ಜರ್ಮನಿಯ ಬ್ರೆಮೆಎನ್ ವಿಶ್ವವಿದ್ಯಾನಿಲಯದಲ್ಲಿ 2007-08 ಅವಧಿಯಲ್ಲಿ ಯುನೆಸ್ಕೊ ಯೋಜನೆ ಪೂರ್ಣಗೊಳಿಸಿದರು.

ಇವರ ಕೊಡುಗೆಯನ್ನು ಗುರುತಿಸಿ ಗೌರವಿಸಿದ ಯುನೆಸ್ಕೊ, ಇವರಿಗೆ ಪ್ರತಿಷ್ಠಿತ ಜಾನ್ ಅಮೋಸ್ ಕಮೆನಸ್ ಪದಕ ಪ್ರದಾನ ಮಾಡಿತ್ತು. ಸಂಶೋಧನೆ ಹಾಗೂ ಅನುಶೋಧನೆ ಕ್ಷೇತ್ರಕ್ಕೆ ಸಲ್ಲಿಸಿದ ಗಣನೀಯ ಸೇವೆಗಾಗಿ 2004ರಲ್ಲಿ ಗೌರವ ನೀಡಲಾಗಿತ್ತು. ಇವರು 2009ರಲ್ಲೂ ಪೃಶಸ್ತಿಗೆಎ ಆಯ್ಕೆಯಾದರು. ಇವರಿಗೆ ಮಹರ್ಷಿ ವೇದವ್ಯಾಸ ರಾಷ್ಟ್ರೀಯ ಪ್ರಶಸ್ತಿಯನ್ನು ಮಧ್ಯಪ್ರದೇಶ ಸರ್ಕಾರ ನೀಡಿ ಗೌರವಿಸಿದೆ. ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಜೀವಮಾನದ ಕೊಡುಗೆಗಾಗಿ ಪ್ರಶಸ್ತಿ ನೀಡಲಾಗಿದೆ. 2009ರಲ್ಲಿ ಇವರಿಗೆ ದೇಶದ ನಾಲ್ಕನೇ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಯುನೆಸ್ಕೊ ಆಡಳಿತ ಮಂಡಳಿ

ಯುನೆಸ್ಕೊ ಆಡಳಿತ ಮಂಡಳಿ ಎನ್ನುವುದು ಯುನೆಸ್ಕೊದ ಸಂವಿಧಾನಬದ್ಧ ಸಂಸ್ಥೆಯಾಗಿದ್ದು, ಸಾಮಾನ್ಯ ಸಮ್ಮೇಳನದಲ್ಲಿ ಇದಕ್ಕೆ ಆಯ್ಕೆ ಂಆಡಲಾಗುತ್ತದೆ. ಇದು 58 ಸ್ಥಾನಗಳನ್ನು ಹೊಂದಿದ್ದು, ಅಧಿಕಾರಾವಧಿ ನಾಲ್ಕು ವರ್ಷಗಳು. ಆಡಳಿತ ಮಂಡಳಿ ಯುನೆಸ್ಕೊ ಕಾರ್ಯವೈಖರಿಯನ್ನು ಪರಿಶೀಲಿಸುತ್ತದೆ ಹಾಗೂ ಅದಕ್ಕೆ ಅಗತ್ಯವಾದ ಬಜೆಟ್ ಅಂದಾಜು ಸಿದ್ಧಪಡಿಸುತ್ತದೆ. ವಸ್ತುಶಃ ಇದು ಯುನೆಸ್ಕೊ ಕಾರ್ಯಕ್ರಮಗಳ ಬಗೆಗಿನ ಎಲ್ಲ ನೀತಿಗಳನ್ನು ರೂಪಿಸುವ ಅಂಗವಾಗಿದೆ.

Comment