Our website is under process, we will get back soon. Sorry for the inconvenience!!!!!!

ಬ್ರಹ್ಮೋಸ್ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಬ್ರಹ್ಮೋಸ್ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಸೂಪರ್ ಸಾನಿಕ್ ಯುದ್ಧಕ್ಷಿಪಣಿ ಬ್ರಹ್ಮೋಸ್ ಅನ್ನು ರಾಜಸ್ಥಾನದ ಪೊಖ್ತಾನ್ ಪರೀಕ್ಷಾ ವಲಯದಲ್ಲಿ ಯಶಸ್ವಿಯಾಗಿ ಪರೀಕ್ಷಾರ್ಥ ಪ್ರಯೋಗ ಮಾಡಲಾಗಿದೆ. ದೇಶೀಯವಾಗಿ ಅಭಿವೃದ್ಧಿಪಡಿಸಿದ ಸೀಕೆರ್ನೊಂದಿಗೆ ಪ್ರಯೋಗ ನಡೆಸಲಾಯಿತು. ಇದುವರೆಗೆ ಕ್ಷಿಪಣಿಯಲ್ಲಿ ಪ್ರಮುಖ ತಂತ್ರಜಜ್ಞಾನವಾದ ಸೀಕೆರ್ ಅನ್ನು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಕ್ಷಿಪಣಿಯ ಪರೀಕ್ಷೆಯ ಅವಧಿಯಲ್ಲಿ ಭಾರತ ನಿರ್ಮಿತ ಸೀಕೆರ್ನೊಂದಿಗೆ ಕ್ಷಿಪಣಿ ನಿಯೋಜಿತ ಗಮ್ಯಸ್ಥಾನವನ್ನು ಮತ್ತು ಗುರಿಯನ್ನು ಪಿನ್ಪಾಯಿಂಟ್ ನಿಖರತೆಯೊಂದಿಗೆ ಸಾಧಿಸುವಲ್ಲಿ ಯಶಸ್ವಿಯಾಯಿತು.

ಸೀಕೆರ್

ಸೀಕೆರ್ ತಂತ್ರಜ್ಞಾನವು ಕ್ಷಿಪಣಿಯ ನಿಖರತೆಯನ್ನು ನಿರ್ಧರಿಸುತ್ತದೆ ಹಾಗೂ ಇದು ಅತ್ಯಂತ ಗುಪ್ತವಾಗಿ ಸಂರಕ್ಷಿಸಲ್ಪಟ್ಟ ರಹಸ್ಯವಾಗಿದೆ. ದೇಶೀಯ ಸೀಕೆರ್ ಅನ್ನು ಹೈದರಾಬಾದ್ನಲ್ಲಿರುವ ರೀಸರ್ಚ್ ಸೆಂಟರ್ ಇಮಾರತ್ (ಆರ್ಸಿಐ), ಡಿಆರ್ಡಿಓ ಪ್ರಯೋಗಾಲಯದ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದೆ. ಇದನ್ನು ದೇಶೀಯ ಕ್ಷಿಪಣಿ ತಂತ್ರಜ್ಞಾನದಲ್ಲಿ ಮಹತ್ವದ ಮೈಲುಗಲ್ಲು ಎಂದು ಪರಿಗಣಿಸಲಾಗಿದ್ದು, ಇದು ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ.

ಬ್ರಹ್ಮೋಸ್ ಕ್ಷಿಪಣಿ

ಬ್ರಹ್ಮೋಸ್, ಸೂಪರ್ಸಾನಿಕ್ ಯುದ್ಧ ಕ್ಷಿಪಣಿಯಾಗಿದ್ದು, ಇದನ್ನು ರ್ಯಾದ ಮಷಿನೊಸ್ಟೆನಿಯಾ ಮತ್ತು ಭಾರತದ ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ಡಿಆರ್ಡಿಓ) ಜಂಟಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿವೆ. ಇದಕ್ಕೆ ಬ್ರಹ್ಮಪುತ್ರಾ ನದಿ ಮತ್ತು ರಷ್ಯಾದ ಪಶ್ಚಿಮ ಭಾಗದಲ್ಲಿರುವ ಮೋಸ್ಕ್ವಾ ನದಿಯ ಹೆಸರನ್ನು ಇಟ್ಟು ಬ್ರಹ್ಮೋಸ್ ಎಂದು ಹೆಸರಿಸಲಾಗಿದೆ.

ಇದು ಎರಡು ಹಂತದ ಕ್ಷಿಪಣಿಯಾಗಿದ್ದು, ಮೊದಲನೆಯ ಹಂತ ಸಾಲಿಡ್ ಹಾಗೂ ಎರಡನೇ ಹಂತ ರಾಮ್ಜೆಟ್ ದ್ರವ ಪ್ರೊಪಲೆಂಟ್ ಆಗಿದೆ. ಇದು ಫೈರ್ ಅಂಡ್ ಫರ್ಗೆಟ್ ತತ್ವದಡಿ ಕಾರ್ಯ ನಿರ್ವಹಿಸುತ್ತದೆ. ಇದನ್ನು ಭೂಮಿ, ಸಮುದ್ರ, ಅರೆ ಸಮುದ್ರ ಮತ್ತು ವಾಯುವಿನಿಂದ ಸಮುದ್ರ ಹಾಗೂ ಭೂಮಿಯ ಗುರಿಗಳನ್ನು ನಿರ್ದೇಶಿಸಿ ಉಡಾಯಿಸಲು ಅವಕಾಶವಿದೆ.

ಇದು ಸಾಂಪ್ರದಾಯಿಕ ಹಾಗೂ ಅಣ್ವಸ್ತ್ರ ಸೇರಿ 300 ಕಿಲೋಗ್ರಾಂ ಸಿಡಿತಲೆಗಳನ್ನು ಒಯ್ಯುವ ಸಾಮಥ್ರ್ಯ ಹೊಂದಿದ್ದು, ಇದರ ಅತಿಹೆಚು ಸೂಪರ್ಸಾನಿಕ್ ವೇಗ 2.8 ರಿಂದ 3 ಮಾಚ್ಗಳಾಗಿರುತ್ತವೆ. ಅಂದರೆ ಶಬ್ದದ ವೇಗಕ್ಕಿಂತ ಸುಮಾರು ಮೂರು ಪಟ್ಟು ಅಧಿಕ. ಇದನ್ನು ವಿಶ್ವದ ಅತಿವೇಗದ ಹಡಗು ನಿರೋಧಕ ಯುದ್ಧ ಕ್ಷಿಪಣಿ ಎಂದು ಪರಿಗಣಿಸಲಾಗಿದೆ. ಇದರ ದೂರಸಾಮಥ್ರ್ಯವನ್ನು ಆರಂಭದಲ್ಲಿ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ (ಎಂಟಿಸಿಆರ್) ಬದ್ಧತೆಗೆ ಅನುಗುಣವಾಗಿ 290 ಕಿಲೋಮೀಟರ್ ಎಂದು ನಿಗದಿಪಡಿಸಲಾಗಿತ್ತು. ಭಾರತ ಎಲೈಟ್ ಕ್ಲಬ್ಗೆ ಪ್ರವೇಶ ಪಡೆದಿರುವುದರಿಂದ, ಇದರ ದೂರಸಾಮಥ್ರ್ಯವನ್ನು 450 ಕಿಲೋಮೀಟರ್ಗೆ ವಿಸ್ತರಿಸಲಾಗಿದೆ. ಇದನ್ನು ಇನ್ನೂ 600 ಕಿಲೋಮೀಟರ್ಗೆ ವಿಸ್ತರಿಸುವ ಗುರಿ ಇದೆ.

ಇದು ಸ್ವಯಂ ಇಂಧನ ಚಾಲಿತ ಹಾಗೂ ನಿರ್ದೇಶಿತ ಕ್ಷಿಪಣಿಯಾಗಿದ್ದು, ಏರೊಡೈನಮಿಕ್ ಲಿಫ್ಟ್ ಮೂಲಕ ವಾಯುಪ್ರದೇಶದಲ್ಲೇ ಸುಸ್ಥಿರವಾಗಿರುತ್ತದೆ. ಕ್ಷಿಪಣಿಯ ದಾಳಿಸಾಮಥ್ರ್ಯ ಶೇಕಡ 99.99ರಷ್ಟು ನಿಖರ ಎಂದು ಹೇಳಿಕೊಳ್ಳಲಾಗಿದೆ. ಇದು ಎತ್ತರ, ಸಾಮಾನ್ಯ ಎತ್ತರ, ತಗ್ಗು, ಮೇಲ್ಮೈಮಟ್ಟ ಹೀಗೆ ಹಲವು ವಿಭಿನ್ನ ಗುರಿಗಳನ್ನು ಹೊಂದಬಹುದಾಗಿದೆ. ಇದನ್ನು ಈಗಾಗಲೇ ಭೂಸೇನೆ ಹಾಗೂ ನೌಕಾಪಡೆಯಲ್ಲಿ ನಿಯೋಜಿಸಿಕೊಳ್ಳಲಾಗಿದೆ. ವಾಯು ಚಾಲಿತ ಕ್ಷಿಪಣಿ ಅವತರಣಿಕೆಯನ್ನು ಇತ್ತೀಚೆಗೆ ಮೊಟ್ಟಮೊದಲ ಬಾರಿಗೆ ನವೀಕೃತ ಎಸ್ಯು-30ಎಂಕೆಐ ವಿಮಾನದಿಂದ ಪ್ರಯೋಗಿಸಲಾಗಿದೆ.

Comment