IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಅನುಶೋಧನೆ ಮತ್ತು ಉದ್ಯಮಶೀಲತೆ ಮೇಳಕ್ಕೆ ರಾಷ್ಟ್ರಪತಿ ಚಾಲನೆ

ಅನುಶೋಧನೆ ಮತ್ತು ಉದ್ಯಮಶೀಲತೆ ಮೇಳಕ್ಕೆ ರಾಷ್ಟ್ರಪತಿ ಚಾಲನೆ

ರಾಷ್ಟ್ರಪತಿ ರಾಮನಾಥ್ ಕೋವೀಂದ್ ಅವರು, ನವದೆಹಲಿಯಲ್ಲಿ ಅನುಶೋಧನೆ ಮತ್ತು ಉದ್ಯಮಶೀಲತೆ ಮೇಳಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅವರು, ಗಾಂಧಿಯನ್ ಯಂಗ್ ಟೆಕ್ನಾಲಜಿಕಲ್ ಇನ್ನೊವೇಶನ್ ಅವಾಡ್ರ್ಸ್ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಮುಖ ಅಂಶಗಳು

ಅನುಶೋಧನೆ ಮತ್ತು ಉದ್ಯಮಶೀಲತೆ ಮೇಳವು ವಿನೂತನ ಯೋಜನೆಯಾಗಿದ್ದು, ಇದು ಅನುಶೋಧಕರ ಬೆಂಬಲ ವ್ಯವಸ್ಥೆಯನ್ನು ಉತ್ತೇಜಿಸುವ ಹಾಗೂ ಅನುಶೋಧಕರನ್ನು ಗುರುತಿಸಿ ಗೌರವಿಸುವ ವೇದಿಕೆಯಾಗಿದೆ. ಐದು ದಿನಗಳ ಮೇಳವನ್ನು ರಾಷ್ಟ್ರಪತಿ ಭವನವು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ರಾಷ್ಟ್ರೀಯ ಅನುಶೋಧನಾ ಪ್ರತಿಷ್ಠಾನ- ಭಾರತ ಜಂಟಿಯಾಗಿ ಆಯೋಜಿಸುತ್ತದೆ.

ಇದು ಅನುಶೋಧಕರಿಗೆ ವೇದಿಕೆ ಒದಗಿಸುವ ಉದ್ದೇಶ ಹೊಂದಿದ್ದು, ಸಂಭಾವ್ಯ ಹಕ್ಕುದಾರರಿಗೆ ಸಂಪರ್ಕಗಳನ್ನು ಬೆಳೆಸಿಕೊಳ್ಳಲು ಮತ್ತು ಅಭಿವೃದ್ಧಿಯ ಅವಕಾಶವನ್ನು ಸಾಧಿಸಲು ನೆರವಾಗುತ್ತದೆ. ಇಲ್ಲಿ ಯುವ ಅನುಶೋಧಕರು, ತಮ್ಮ ಕಲ್ಪನೆಗಳನ್ನು ಅನುಷ್ಠಾನಯೋಗ್ಯ ಯೋಜನೆಗಳಾಗಿ ಸಾಮಾಜಿಕ ಉನ್ನತಿಯ ದೃಷ್ಟಿಯಿಂದ ಪರಿವರ್ತಿಸುವ ಗುರಿ ಹೊಂದಿವೆ.

Comment