Our website is under process, we will get back soon. Sorry for the inconvenience!!!!!!

ಸೌದಿ ಅರೇಬಿಯಾದಲ್ಲಿ ಗಲ್ಫ್‍ಶೀಲ್ಡ್

ಸೌದಿ ಅರೇಬಿಯಾದಲ್ಲಿ ಗಲ್ಫ್‍ಶೀಲ್ಡ್

23 ದೇಶಗಳ ಗಲ್ಫ್ಶೀಲ್ಡ್-1 ಮಿಲಿಟರಿ ಕಾರ್ಯಾಚರಣೆ ಸೌದಿ ಅರೇಬಿಯಾದ ಪೂರ್ವ ಭಾಗದಲ್ಲಿ ನಡೆದಿದೆ. ಇದರಲ್ಲಿ ಗಲ್ಫ್ ಸಹಕಾರ ಮಂಡಳಿಯ ಎಲ್ಲ ಸದಸ್ಯದೇಶಗಳು ಭಾಗವಹಿಸಿವೆ. ಇದನ್ನು ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯ ಆಯೋಜಿಸಿದೆ. ಒಂದು ತಿಂಗಳ ಅವಧಿಯ ಜಂಟಿ ಕಾರ್ಯಾಚರಣೆ ಭಾಗದ ಅತಿದೊಡ್ಡ ಕಾರ್ಯಾಚರಣೆಯಾಗಿದೆ. ಇದರಲ್ಲಿ ಎಲ್ಲ ಸದಸ್ಯದೇಶಗಳ ಭೂಸೇನೆ, ನೌಕಾಪಡೆ, ವಾಯುಪಡೆಗಳು ಭಾಗವಹಿಸುತ್ತವೆ.

ಗಲ್ಫ್ಶೀಲ್ಡ್-1 ಕಾರ್ಯಾಚರಣೆ ಬಗ್ಗೆ

ಬಹುಪಕ್ಷೀಯ ಕಾರ್ಯಾಚರಣೆಯ ಮುಖ್ಯ ಉದ್ದೇಶವೆಂದರೆ, ಪಾಲ್ಗೊಂಡ ದೇಶಗಳ ಮಿಲಿಟರಿ ಸರ್ವಸನ್ನದ್ಧತೆಯನ್ನು ಖಾತ್ರಿಪಡಿಸುವುದು, ಜಂಟಿ ವ್ಯವಸ್ಥೆಯನ್ನು ಆಧುನೀಕರಿಸುವುದು ಮತ್ತು ಸಹಕಾರ ಮತ್ತು ಸಮನ್ವಯ ವ್ಯವಸ್ಥೆಯನ್ನು ಹೆಚ್ಚಿಸುವುದು. ಇದು ಯೋಜನೆ, ಸಂಘಟನೆ ಮತ್ತು ವಿವಿಧ ತರಬೇತಿ ಚಟುವಟಿಕೆಗಳ ಅನುಷ್ಠಾನದ ವಿಚಾರದಲ್ಲಿ ಮಾಹಿತಿ ಮತ್ತು ಅನುಭವವನ್ನು ಹಂಚಿಕೊಳ್ಳುವ ಉದ್ದೇಶ ಹೊಂದಿದೆ.

ಪಾಲ್ಗೊಂಡ ಸೇನಾ ಯೋಧರ ಕೌಶಲವನ್ನು ಹೆಚ್ಚಿಸುವಲ್ಲಿ ಮತ್ತು ಅವರ ಸಾಮಥ್ರ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಇದು ನೆರವಾಗಲಿದೆ. ಇದು ವಿಭಿನ್ನ ಕ್ಷೇತ್ರಗಳ ಕಾರ್ಯಾಚರಣೆಯನ್ನು ನಡೆಸಲಿದ್ದು, ದೇಶಗಳ ಸಾಗರ ಗಡಿಗಳನ್ನು ಮತ್ತು ಕಾರಿಡಾರ್ಗಳನ್ನು ಸಂರಕ್ಷಿಸುವಲ್ಲಿ ಕೂಡಾ ಮಹತ್ವದ್ದಾಗಿದೆ.

ಕಾರ್ಯಾಚರಣೆಯು ಸಶಸ್ತ್ರ ಪಡೆಗಳ ಜಂಟಿ ತರಬೇತಿ ಯೋಜನೆಯನ್ನು ಸಹೋದರತ್ವ ಮತ್ತು ಸ್ನೇಹಪರ ದೇಶಗಳ ನಡುವೆ ಆಯೋಜಿಸುವುದು ಇದರ ಉದ್ದೇಶ. ಇದು ಅನುಭವಗಳ ವಿನಿಮಯಕ್ಕೆ ಮತ್ತು ಮಿಲಿಟರಿ ಸಹಕಾರಕ್ಕೆ ಪೂರಕವಾಗಲಿದ್ದು, ಅತ್ಯಧಿಕ ಮಟ್ಟದ ಕ್ಷಮತೆ ಮತ್ತು ಹೋರಾಟದ ಸರ್ವಸನ್ನದ್ಧತೆಯನ್ನು ಹೆಚ್ಚಿಸಲು ಇದು ನೆರವಾಗುತ್ತದೆ.

Comment