Our website is under process, we will get back soon. Sorry for the inconvenience!!!!!!

ಈಶಾನ್ಯ ರಾಜ್ಯಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಏರ್‍ಬಿಎನ್‍ಬಿ ಒಪ್ಪಂದ

ಈಶಾನ್ಯ ರಾಜ್ಯಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಏರ್‍ಬಿಎನ್‍ಬಿ ಒಪ್ಪಂದ

ಆನ್ಲೈನ್ ಮಾರ್ಕೆಟ್ಪ್ಲೇಸ್ ಮತ್ತು ಆತಿಥ್ಯ ಸೇವಾ ಸಂಸ್ಥೆಯಾದ ಏರ್ಬಿಎನ್ಬಿ ಭಾರತದ ಈಶಾನ್ಯ ರಾಜ್ಯಗಳಲ್ಲಿ ಪ್ರವಾಸೋದ್ಯಮಕ್ಕೆ ನೆರವಾಗುವ ನಿಟಿಟನಲ್ಲಿ ನಾಲ್ಕು ಒಪ್ಪಂದಗಳನ್ನು ಮಾಡಿಕೊಂಡಿದೆ. ಒಪ್ಪಂದಗಳಿಗೆ ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವಾಲಯದ ಜತೆ ಸಹಿ ಮಾಡಲಾಗಿದೆ. ಈಶಾನ್ಯ ಮಂಡಳಿಯ ಪರವಾಗಿ ಒಪ್ಪಂದಗಳಿಗೆ ಸಹಿಮಾಡಲಾಗಿದ್ದು, ಈಶಾನ್ಯ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ, ಈಶಾನ್ಯ ಗ್ರಾಮೀಣ ಜೀವನಾಧಾರ ಯೋಜನೆ ಮತ್ತು ಈಶಾನ್ಯ ಪ್ರದೇಶ ಸಮುದಾಯ ಸಂಪನ್ಮೂಲ ನಿರ್ವಹಣೆ ಯೋಜನೆಗಳು ನಿಟ್ಟಿನಲ್ಲಿ ಜಂಟಿಯಾಗಿ ಕಾರ್ಯ ನಿರ್ವಹಿಸಲಿವೆ.

ಪ್ರಮುಖ ಅಂಶಗಳು

ಒಪ್ಪಂದದ ಪ್ರಮುಖ ಉದ್ದೇಶವೆಂದರೆ, ಆತಿಥ್ಯ ಕ್ಷೇತ್ರದಲ್ಲಿ ಸೂಕ್ಷ್ಮ ಉದ್ಯಮಶೀಲರನ್ನು ಇಡೀ ಈಶಾನ್ಯ ಭಾರತದಲ್ಲಿ ಸೃಷ್ಟಿಸುವುದು. ಇವರು ಸಮುದಾಯ ಸಂಪನ್ಮೂಲಗಳನ್ನು ಬಳಸಿಕೊಂಡು ಮತ್ತು ಸ್ಥಳೀಯ ಪರಿಸ್ಥಿತಿಗೆ ಸೂಕ್ತ ಎನಿಸಿದ ಸಂಪನ್ಮೂಲಗಳನ್ನು ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಗಾಗಿ ಬಳಸಿಕೊಳ್ಳುವ ಗುರಿ ಹೊಂದಿದೆ. ಒಪ್ಪಂದದ ಅನ್ವಯ, ಎನ್ಇಸಿ, ಎನ್ಇಟಿಡಿಸಿ ಮತ್ತು ಏರ್ಬಿಎನ್ಬಿ ಈಶಾನ್ಯ ಭಾರತದಲ್ಲಿ ಪ್ರವಾಸೋದ್ಯಮವನ್ನು ವಿಸ್ತರಿಸಲು ನೆರವಾಗಲಿವೆ. ಏರ್ಬಿಎನ್ಬಿಯ ಜಾಗತಿಕ ವೇದಿಕೆ ಮೂಲಕ ಇದನ್ನು ಸಾಧಿಸುವ ಉದ್ದೇಶವನ್ನು ಒಪ್ಪಂದ ಹೊಂದಿದೆ.

ಇವು ಈಶಾನ್ಯ ಭಾರತದಲ್ಲಿ ವಿಶಿಷ್ಟ ಆಸ್ತಿಗಳನ್ನು ಮತ್ತು ಹೋಮ್ಸ್ಟೇ ಸೌಲಭ್ಯಗಳ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶ ಹೊಂದಿವೆ. ಮೂಲಕ ಅದ್ಭುತ ಪ್ರವಾಸೋದ್ಯಮ ಸಂಪನ್ಮೂಲವನ್ನು ಉತ್ತೇಜಿಸುವುದು ಇದರ ಉದ್ದೇಶ. ಇದು ಈಶಾನ್ಯಪ್ರದೇಶದಲ್ಲಿ ಮನೆ ಹಂಚಿಕೊಳ್ಳುವಿಕೆಗೆಪೂರಕವಾದ ನಿಯಂತ್ರಣ ಚೌಕಟ್ಟನ್ನು ಕೂಡಾ ಅಭಿವೃದ್ಧಿಪಡಿಸಲಿದೆ. ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ ಆಧರಿತ ಜೀವನಾಧಾರ ಅವಕಾಶಗಳನ್ನು ಸೃಷ್ಟಿಸುವುದು ಇದರ ಉದ್ದೇಶ. ಇದರ ಜತೆಗೆ ಈಶಾನ್ಯ ರಾಜ್ಯಗಳ ಕಡಿಮೆ ಆದಾಯದ ಕುಟುಂಬಗಳು ತಮ್ಮ ಪ್ರಸ್ತುತ ಇರುವ ಆಸ್ತಿಗಳನ್ನು ಹೆಚ್ಚು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳುವಂತೆ ಮಾಡುವ

ಮತ್ತು ಮನೆಯನ್ನು ಹಂಚಿಕೊಳ್ಳುವಿಕೆಯಂಥ ಸೌಲಭ್ಯಗಳಿಗೆ ಅವಕಾಶ ಕಲ್ಪಿಸಿಕೊಡಲಿದೆ. ಒಪ್ಪಂದಗಳ ಅನ್ವಯ, ಏರ್ಬಿಎನ್ಬಿ, ಎನ್ಇಆರ್ಎಲ್ಪಿ ಮತ್ತು ಎನ್ಇಆರ್ಸಿಓಆರ್ಎಂಪಿ ಸಿಬ್ಬಂದಿಗೆ ತರಬೇತಿಯನ್ನು ನೀಡಲಿದೆ. ಇದರ ಜತೆಗೆ ಪ್ರಸ್ತುತ ಇರುವ ಹಾಗೂ ಸಂಭಾವ್ಯ ಹೋಮ್ ಷೇರಿಂಗ್ ಸೌಲಭ್ಯ ಒದಗಿಸುವವರಿಗೆ ತರಬೇತಿ ನೀಡುವ, ಜವಾಬ್ದಾರಿಯುತ ಆತಿಥ್ಯ ಒದಗಿಸುವ, ಆತಿಥ್ಯ ಗುಣಮಟ್ಟವನ್ನು ಹೊಂದುವ, ನೈರ್ಮಲ್ಯ ಮತ್ತು ಮೂಲ ಅಗತ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲೂ ತರಬೇತಿ ನೀಡಲಿದೆ.

Comment