Our website is under process, we will get back soon. Sorry for the inconvenience!!!!!!

ಫ್ರಾನ್ಸ್ ನೌಕಾಪಡೆ ಜತೆ ಭಾರತೀಯ ನೌಕಾಪಡೆ ಜಂಟಿ ಕಾರ್ಯಾಚರಣೆ

ಫ್ರಾನ್ಸ್ ನೌಕಾಪಡೆ ಜತೆ ಭಾರತೀಯ ನೌಕಾಪಡೆ ಜಂಟಿ ಕಾರ್ಯಾಚರಣೆ

ಭಾರತ ಹಾಗೂ ಫ್ರಾನ್ಸ್ ನೌಕಾಪಡೆಗಳ ನಡುವಿನ ಜಂಟಿ ಕಾರ್ಯಾಚರಣೆ ವರುಣಾ- 18 ಅರಬ್ಬಿಸಮುದ್ರದ ಗೋವಾ ಕರಾವಳಿಯಲ್ಲಿ ನಡೆಯುತ್ತಿದೆ. ಇದರ ಮುಖ್ಯ ಉದ್ದೇಶವೆಂದರೆ, ಕಾರ್ಯಾಚರಣೆ ಮಟ್ಟದಲ್ಲಿ ಉಭಯ ದೇಶಗಳ ನೌಕಾಪಡೆಗಳ ನಡುವೆ ಸಮನ್ವಯ ಸಾಧಿಸುವುದು ಮತ್ತು ಪರಸ್ಪರ ಸಹಕಾರವನ್ನು ಹೆಚ್ಚಿಸುವುದು ಹಾಗೂ ಜಾಗತಿಕ ಅಪಾಯವನ್ನು ಪರಿಗಣಿಸಿ, ಪರಸ್ಪರ ಸಹಕಾರಕ್ಕೆ ಅಣಿಯಾಗುವುದು.

ಪ್ರಮುಖ ಅಂಶಗಳು

ವರುಣಾ-18 ಕಾರ್ಯಾಚರಣೆಯನ್ನು ಮೂರು ಸಮುದ್ರ ಪ್ರದೇಶಗಳಲ್ಲಿ ನಡೆಸಲಾಗುತ್ತದೆ. ಅದರಲ್ಲಿ ಅರಬ್ಬಿ ಸಮುದ್ರ, ಬಂಗಾಳಕೊಲ್ಲಿ ಹಾಗೂ ಹಿಂದೂ ಮಹಾಸಾಗರ ಸೇರುತ್ತದೆ. ಕಾರ್ಯಾಚರಣೆಯನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತದೆ. ಇದರಲ್ಲಿ ಸಬ್ಮೆರಿನ್ ನಿರೋಧಕ, ವಾಯು ಸುರಕ್ಷೆ ಮತ್ತು ಪರಸ್ಪರ ಭಿನ್ನ ಕಾರ್ಯಾಚರಣೆಗಳು ಸೇರುತ್ತವೆ.

ಜಂಟಿ ಕಾರ್ಯಾಚರಣೆಯ ಮೊದಲ ಹಂತ ಅರಬ್ಬಿ ಸಮುದ್ರದಲ್ಲಿ ನಡೆದಿತ್ತು. ಎರಡನೇ ಹಂತ 2017 ಏಪ್ರಿಲ್ನಲ್ಲಿ ಚೆನ್ನೈನಲ್ಲಿ ಬಂಗಾಳಕೊಲ್ಲಿಯ ತೀರದಲ್ಲಿ ನಡೆದಿತ್ತು. ಮೂರನೇ ಕಾರ್ಯಾಚರಣೆಯನ್ನು ಫ್ರಾನ್ಸ್ ಲಾ ರಿಯೂನಿಯನ್ ದ್ವೀಪದಲ್ಲಿ ಹಿಂದೂ ಮಹಾಸಾಗರದಲ್ಲಿ 2018 ಮೇ ತಿಂಗಲಲ್ಲಿ ನಡೆಸಲಾಗುತ್ತದೆ.

ಬಾರಿಯ ಕಾರ್ಯಾಚರಣೆಯಲ್ಲಿ, ಫ್ರಾನ್ಸ್ ಸಬ್ಮೆರಿನ್ಗಳು ಮತ್ತು ಫ್ರಿಗೇಟ್ ಜೀನ್ ಡೆ ವಿನ್ ಫ್ರಾನ್ನಿಂದ ಪಾಲ್ಗೊಂಡಿದೆ. ಭಾರತೀಯ ನೌಕಾಪಡೆಯನ್ನು ಐಎನ್ಎಸ್ ಮುಂಬೈ, ಫ್ರಿಗೇಟ್ ಸಮನ್ವಯಗೊಳಿಸಿದ ಹೆಲಿಕಾಪ್ಟರ್ಗಳು, ಐಎನ್ಎಸ್ ಸಬ್ಮೆರಿನ್ ಕರವೇರಿ, ಪಿಬಿ-1 ಮತ್ತು ಡೋರ್ನಿಯರ್ ಸಾಗರ ಗಸ್ತು ವಿಮಾನ ಹಾಗೂ ಎಂಐಜಿ 29ಕೆ ಯುದ್ಧವಿಮಾನಗಳು ಸೇರಿವೆ.

ಹಿನ್ನೆಲೆ

ಭಾರತವು ಫ್ರಾನ್ಸ್ಗೆ ಹಿಂದೂಮಹಾಸಾಗರ ಪ್ರದೇಶದಲ್ಲಿ ಪ್ರಮುಖ ಪಾಲುದಾರ ದೇಶವಾಗಿದೆ. ಸಾಗರ ಭದ್ರತೆಯು ಭಾರತ ಹಾಗೂ ಫ್ರಾನ್ಸ್ ನಡುವಿನ ರಕ್ಷಣಾ ಮತ್ತು ಭದ್ರತಾ ನೀತಿಯ ಪ್ರಮುಖ ಆದ್ಯತೆಯಾಗಿದೆ. ಇದರ ಜತೆಗೆ ಭಯೋತ್ಪಾದನೆ ವಿರುದ್ಧದ ಹೋರಾಟ ಕೂಡಾ ಉಭಯ ದೇಶಗಳ ಸಮಾನ ಆಸಕ್ತಿಯ ಕ್ಷೇತ್ರವಾಗಿದೆ. ಭಾರತೀಯ ನೌಕಾಪಡೆ ಹಾಗೂ ಫ್ರಾನ್ಸ್ ನೌಕಾಪಡೆ ಜಂಟಿ ಕಾರ್ಯಾಚರಣೆಯನ್ನು 1983ರಿಂದಲೂ ಹಮ್ಮಿಕೊಳ್ಳುತ್ತಾ ಬಂದಿವೆ. ಕಾರ್ಯಾಚರಣೆಗೆ 2001ರಲ್ಲಿ ವರುಣಾ ಎಂಬ ಹೆಸರು ಇಡಲಾಗಿದೆ.

ಕಳೆದ ಬಾರಿಯ ವಾರ್ಷಿಕ ದ್ವಿಪಕ್ಷೀಯ ಕಾರ್ಯಾಚರಣೆಯನ್ನು ಫ್ರಾನ್ಸ್ ಕರಾವಳಿಯಲ್ಲಿ 2017 ಏಪ್ರಿಲ್ನಲ್ಲಿ ನಡೆಸಲಾಗಿತ್ತು. ವರುಣಾ ಸರಣಿ ಕಾರ್ಯಾಚರಣೆಯು ಇದೀಗ ವ್ಯಾಪ್ತಿ ಮತ್ತು ಸಂಕೀರ್ಣತೆಯಲ್ಲಿ ಪ್ರಗತಿ ಕಂಡಿದ್ದು, ಉಭಯ ದೇಶಗಶಳ ನೌಕಾ ಪಡೆಗಳಿಗೆ ಅವಕಾಸಗಳನ್ನು ಹೆಚ್ಚಿಸುವಲ್ಲಿ ನೆರವಾಗಿದೆ. ಜತೆಗೆ ಇದು ಪರಸ್ಪರ ಅವಲಂಬನೆ ಹಾಗೂ ಉತ್ತಮ ರೂಢಿಗಳ ಹಂಚಿಕೆಗೆ ಕೂಡಾ ಉತ್ತಮ ವೇದಿಕೆಯಾಗಿದೆ.

Comment