Free IAS workshop by Topper On 17th June at 9.30am and New KAS prelims batch starts from 15th July 2018 - For registratin Contact: 9686664983/9845512052. Admission Open for Universal School of Admission (B.A & B.com with IAS/KAS Integrated Coaching) Contact - 9686664985/080-46568844

ಮ್ಯಾನ್ಮಾರ್‍ಗೆ ಭಾರತದಿಂದ 18 ರೈಲು ಹಸ್ತಾಂತರ

ಭಾರತೀಯ ರೈಲ್ವೆ ಮ್ಯಾನ್ಮಾರ್ಗೆ ಅಧಿಕೃತವಾಗಿ 1350 ಎಚ್ಪಿ ಎಸಿ/ಡಿಸಿ ಡೀಸೆಲ್ ಎಲೆಕ್ಟ್ರಿಕ್ ಲೋಕೊಮೋಟಿವ್ಗಳನ್ನು ಹಸ್ತಾಂತರಿಸಿದೆ. ಇದು ಪ್ರಸ್ತುತ ಇಂಡಿಯನ್ ಲೈನ್ ಆಫ್ ಕ್ರೆಡಿಟ್ನಲ್ಲಿ ಪೂರ್ಣಗೊಳಿಸಿದ ಮೊಟ್ಟಮೊದಲ ಯೋಜನೆಯಾಗಿದೆ.

ಪ್ರಮುಖ ಅಂಶಗಳು

ಭಾರತ ಹಾಗೂ ಮ್ಯಾನ್ಮಾರ್ ಧೀರ್ಘಕಾಲದಿಂದಲೂ ರೈಲ್ವೆ ವಲಯದಲ್ಲಿ ಪರಸ್ಪರ ಸಹಕಾರವನ್ನು ಹೊಂದಿದ್ದು, ಎರಡು ದಶಕಗಳಿಂದ ಸಹಕಾರ ವ್ಯವಸ್ಥೆ ಬೆಳೆದುಬಂದಿದೆ. ಭಾರತೀಯ ರೈಲ್ವೆ, ನೆರೆಯ ದೇಶಗಳ ಜತೆ ಸೌಹಾರ್ದಯುತ ಸಂಬಂಧವನ್ನು ಬೆಳೆಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.

ಭಾರತ ಹಸ್ತಾಂತರಿಸಿರುವ 18 ಲೋಕೊಮೀಟಿವ್ಗಳನ್ನು ಆರ್ಐಟಿಇಎಸ್ ಪೂರೈಕೆ ಮಾಡಿದೆ. ಇದು ರೈಲ್ವೆ ಸಚಿವಾಲಯದಡಿ ಕಾರ್ಯನಿರ್ವಹಿಸುವ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದೆ. ಲೋಕೊಮೋಟಿವ್ಗಳನ್ನು ಉತ್ತರ ಪ್ರದೇಶದ ವಾರಾಣಾಸಿಯ ಡೀಸೆಲ್ ಲೋಕೊಮೊಟಿವ್ ವಕ್ರ್ಸ್ ಉತ್ಪಾದಿಸಿದೆ. ಇದರಲ್ಲಿ ಮೈಕ್ರೊ ಪ್ರೊಸೆಸರ್ ಕಂಟ್ರೋಲ್ ಆಧರಿತ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದು ತೀರಾ ಇಂಧನ ಕ್ಷಮತೆಯನ್ನು ಹೊಂದಿದ್ದು, ಅತ್ಯಾಧುನಿಕ ಗುಣಲಕ್ಷಣಗಳನ್ನು ಇದು ಹೊಂದಿದೆ. ಇದರ ಗರಿಷ್ಠ ವೇಗ 100 ಕಿಲೋಮೀಟರ್ ಆಗಿದ್ದು, ಮ್ಯಾನ್ಮಾರ್ ರೈಲ್ವೆ ಅಗತ್ಯಗಳಿಗೆ ಅನುಗುಣವಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಪೈಕಿ ಬಹುತೇಕ ಲೋಕೊಮೋಟಿವ್ಗಳನ್ನು ಭಾರತೀಯ ಲೈನ್ ಆಫ್ ಕ್ರೆಡಿಟ್ ಅನ್ವಯ ಪೂರೈಸಲಾಗಿದೆ. ಎರಡು ದೇಶಗಳ ನಡುವಿನ ಒಪ್ಪಂದಕ್ಕೆ ಅನುಗುಣವಾಗಿ, ಎಲ್ಲ ಲೋಕೊಮೋಟಿವ್ಗಳನ್ನು 2018 ಸೆಪ್ಟೆಂಬರ್ ಒಳಗಾಗಿ ಪೂರೈಸಬೇಕಾಗುತ್ತದೆ. ಆದರೆ ನಿಗದಿತ ಅವಧಿಗಿಂತ ಆರು ತಿಂಗಳು ಮುಂಚಿತವಾಗಿಯೇ ಇವುಗಳನ್ನು ಒದಗಿಸಲಾಗಿದೆ.

ಆರ್ಐಟಿಇಎಸ್

ಆರ್ಐಟಿಇಎಸ್ ಭಾರತೀಯ ರೈಲ್ವೆ ಸಚಿವಾಲಯದ ಸಾರ್ವಜನಿಕ ವಲಯದ ಉದ್ದಿಮೆಯಾಗಿದೆ. ಇದು ಭಾರತೀಯ ರೈಲ್ವೆಯ ವಿವಿಧ ಯೋಜನೆಗಳನ್ನು ವಿಶ್ವಾದ್ಯಂತ ರಫ್ತು ಮಾಡುತ್ತಿದೆ. ಇದು ರೈಲ್ವೆ ರೋಲಿಂಗ್ ದಾಸ್ತಾನುಗಳಾದ ಲೋಕೊಮೋಟಿವ್, ವ್ಯಾಗನ್, ಬೋಗಿ, ಕಾಯಂ ಮಾರ್ಗ ನಿರ್ವಹಣೆ ವಾಹಳನ್ನು ಈನ, ರೈಲ್ವೆ ಮೂಲಸೌಕರ್ಯ ನಿರ್ವಹಣೆ, ತಾಂತ್ರಿಕ ಅಧ್ಯಯನ, ಇತರ ದೇಶಗಳ ರೈಲ್ವೆ ಅಧಿಕಾರಿಗಳ ತರಬೇತಿಯಂಥ ಕಾರ್ಯಗ ಸಂಸ್ಥೆ ನಿರ್ವಹಿಸುತ್ತದೆ.

Comment