Our website is under process, we will get back soon. Sorry for the inconvenience!!!!!!

ಅರ್ಥ್ ಅಬ್ಸರ್ವೇಶನ್ ಮಾಹಿತಿ ಹಂಚಿಕೆಗೆ ಭಾರತ, ಇಯು ಒಪ್ಪಂದ

ಅರ್ಥ್ ಅಬ್ಸರ್ವೇಶನ್ ಮಾಹಿತಿ ಹಂಚಿಕೆಗೆ ಭಾರತ, ಇಯು ಒಪ್ಪಂದ

ಭಾರತದ ಬಾಹ್ಯಾಕಾಶ ಇಲಾಖೆ ಹಾಗೂ ಯೂರೋಪಿಯನ್ ಯೂನಿಯನ್, ಭೂ ಸರ್ವೇಕ್ಷಣೆ ಉಪಗ್ರಹ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವ ಸಂಬಂಧ ಮತ್ತು ಕ್ಷೇತ್ರದಲ್ಲಿ ಪರಸ್ಪರ ಸಹಕರಿಸುವ ಸಂಬಂಧ ಒಪ್ಪಂದ ಮಾಡಿಕೊಂಡಿವೆ. ಒಪ್ಪಂದವು ಉಭಯ ದೇಶಗಳ ನಡುವಿನ ಭೂ ಸರ್ವೇಕ್ಷಣೆ ಮತ್ತು ಪರಸ್ಪರ ಉಪಗ್ರಹಗಳ ಮಾಹಿತಿಗಳ ವಿಚಾರದಲ್ಲಿ ಸಹಕರಿಸಿಕೊಳ್ಳಲು ಅನುಕೂಲವಾಗಲಿದೆ. ಭಾರತದ ಉಪಗ್ರಹ ಸರಣಿಯ ಅಂಕಿ ಅಂಶಗಳನ್ನು ಯೂರೋಪ್ ಬಳಸಿಕೊಳ್ಳಲು ಅವಕಾಶವಾಗಲಿದ್ದು, ಅಂತೆಯೇ ಯೂರೋಪ್ ಸರಣಿಯ ಉಪಗ್ರಹಗಳ ಮಾಹಿತಿಗಳನ್ನು ಭಾರತ ಬಳಸಿಕೊಳ್ಳಬಹುದಾಗಿದೆ. ಮಾಹಿತಿಗಳ ಹಂಚಿಕೆಯು ಪರಸ್ಪರ ದೇಶಗಳಿಗೆ ಪ್ರಯೋಜನಕಾರಿಯಾಗಲಿದ್ದು, ಅದರಲ್ಲೂ ಮುಖ್ಯವಾಗಿ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಯೋಜನವಾಗಲಿದೆ.

ಪ್ರಮುಖ ಅಂಶಗಳು

ಒಪ್ಪಂದದ ಅಡಿಯಲ್ಲಿ, ಯುರೋಪಿಯನ್ ಯೂನಿಯನ್, ಭಾರತಕ್ಕೆ ಕೋಪರ್ನಿಕಸ್ ಸೆಂಟಿನಲ್ ಫ್ಯಾಮಿಲಿ ಆಫ್ ಸೆಟಲೈಟ್ಸ್ ಮಾಹಿತಿಗಳ ಉಚಿತ, ಸಂಪೂರ್ಣ ಮತ್ತು ಮುಕ್ತ ಲಭ್ಯತೆಯನ್ನು ಒದಗಿಸಲಿದೆ. ಹೈಬ್ಯಾಂಡ್ವಿಡ್ತ್ ಸಂಪರ್ಕವನ್ನು ಬಲಸಿಕೊಂಡು, ಡಾಟಾ ಹಬ್ನಿಂದ ಡಾಟಾ ಹಬ್ಗೆ ಇದು ಮಾಹಿತಿ ರವಾನಿಸಲಿದೆ. ಇದಕ್ಕೆ ಪ್ರತಿಯಾಗಿ ಭಾರತ ಕೂಡಾ ಕೋಪರ್ನಿಕಸ್ ಯೋಜನೆಗೆ ಮತ್ತು ಇದರ ಪಾಲುದಾರ ರಾಜ್ಯಗಳಿಗೆ ಮುಕ್ತ, ಸಂಪೂರ್ಣ ಹಾಗೂ ಉಚಿತ ಮಾಹಿತಿಗಳನ್ನು ಇಸ್ರೋದ ಭೂ ಸರ್ವೇಕ್ಷಣೆ ಉಪಗ್ರಹಗಳಿಂದ ಒದಗಿಸಲಿದೆ. ಇದರಲ್ಲಿ ಐತಿಹಾಸಿಕ ಮಾಹಿತಿಗಳು ಕೂಡಾ ಒಳಗೊಳ್ಳುತ್ತವೆ. ಇದರಲ್ಲಿ ಭೂಮಿ, ಸಾಗರ ಮತ್ತು ಹವಾಮಾನ ಸರಣಿಯ ಮಾಹಿತಿಗಲನ್ನು ಇಸ್ರೋದ ನಾಗರಿಕ ಉಪಗ್ರಹಗಳಾದ ಓಶಿಯನ್ಸ್ಯಾಟ್-2, ಸ್ಕೇಟ್ಸ್ಯಾಟ್-1, ಮೆಗಾ ಟ್ರೋಪಿಕ್ಸ್, ಸರಳ್, ಇನ್ಸಾಟ್ 3ಡಿ, ಇನ್ಸಾಟ್- 3ಡಿಆರ್ಗಳಿಂದ ಒದಗಿಸಲಿದೆ. ಆದರೆ ವಾಣಿಜ್ಯ ಹೈ ರೆಸಲ್ಯೂಶನ್ ಉಪಗ್ರಹಗಳ ಮಾಹಿತಿಗಳು ಮಾತ್ರ ಇದರ ವ್ಯಾಪ್ತಿಯಲ್ಲಿ ಸೇರುವುದಿಲ್ಲ. ಇದು ಇಸ್ರೋ ಸೈಟ್ನೊಂದಿಗೆ ಹೈ ಬ್ಯಾಂಡ್ವಿಡ್ತ್ ಡಾಟಾ ಸಂಪರ್ಕವನ್ನು ಒದಗಿಸಲು ಅದರಲ್ಲೂ ಮುಖ್ಯವಾಗಿ ಮಿರರ್ ಸರ್ವರ್ಗಳನ್ನು ವ್ಯವಸ್ಥೆಗೊಳಿಸಲು, ಡಾಟಾ ಸ್ಟೋರೇಜ್ ಮತ್ತು ಸಂಗ್ರಹ ಸೌಲಭ್ಯಗಳಿಗೆ ಕೂಡಾ ನೆರವು ನೀಡಲಾಗುತ್ತದೆ.

ಕೋಪರ್ನಿಕಸ್ ಯೋಜನೆ

ಇದು ವಿಶ್ವದ ಅತಿದೊಡ್ಡ ಏಕ ಭೂಸರ್ವೇಕ್ಷಣೆ ಯೋಜನೆಯಾಗಿದ್ದು, ಯೂರೋಪಿಯನ್ ಕಮಿಷನ್ ಇದನ್ನು ನಿರ್ದೇಶಿಸುತ್ತದೆ. ಯೂರೋಪಿಯನ್ ಬಾಹ್ಯಾಕಾಶ ಏಜೆನ್ಸಿಯ ಪಾಲುದಾರಿಕೆಯಲ್ಲಿ ಇದನ್ನು ನಿರ್ವಹಿಸಲಾಗುತ್ತದೆ. ಇದರ ಮುಖ್ಯ ಗುರಿಯೆಂದರೆ ಜಾಗತಿಕ, ನಿರಂತರ, ಸ್ವಾಯತ್ತ, ಅತ್ಯಧಿಕ ಗುಣಮಟ್ಟದ, ವಿಸ್ತø ಶ್ರೇಣಿಯ ಭೂ ಸರ್ವೇಕ್ಷಣೆ ಸಾಮಥ್ರ್ಯವನ್ನು ಅಭಿವೃದ್ಧಿಪಡಿಸುವುದು.

ಇದು ಹಲವು ಬಗೆಯ ಅನ್ವಯಿಕೆಗಳಾದ ಹವಾಮಾನ ಬದಲಾವಣೆ, ಸಾಗರ, ಭೂಮಿ ಮತ್ತು ಹವಾಮಾನ ಮೇಲುಸ್ತುವಾರಿ ಹಾಗೂ ವಿಕೋಪ ಮುನ್ಸೂಚನೆ ನಿರ್ವಹಣೆ ಮತ್ತು ತಡೆಗೆ ಕೂಡಾ ನೆರವಾಗಲಿದೆ. ಇದು ಸಂಪೂರ್ಣ, ಉಚಿತ ಹಾಗೂ ಮುಕ್ತ ಮಾಹಿತಿ ನೀತಿಯು ಯೂರೋಪಿಯನ್ ದೇಶಗಳ ಜತೆಗೆ ಅಭಿವೃದ್ಧಿಶೀಲ ದೇಶಗಳಿಗೆ ಕೂಡ ನೆರವಾಗುತ್ತದೆ.

Comment