Our website is under process, we will get back soon. Sorry for the inconvenience!!!!!!

ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದಿಂದ ಹೊರಬಂದ ಫಿಲಿಫೀನ್ಸ್

ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದಿಂದ ಹೊರಬಂದ ಫಿಲಿಫೀನ್ಸ್

ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯವು ಅಂತರರಾಷ್ಟ್ರೀಯ ಪಕ್ಷಪಾತ ಧೋರಣೆಯನ್ನು ಅನುಸರಿಸುತ್ತಿದ್ದು, ಇದನ್ನು ತನ್ನ ವಿರುದ್ಧ ರಾಜಕೀಯ ಅಸ್ತ್ರವಾಗಿ ಬಳಸಲಾಗುತ್ತಿದೆ ಎಂದು ಆಪಾದಿಸಿ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದಿಂದ ಫಿಲಿಫೀನ್ಸ್ ಹೊರಬಂದಿದೆ. ಫಿಲಿಫೀನ್ಸ್ ಇದೀಗ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದಿಂದ ಹೊರಬಂದ ಎರಡನೇ ದೇಶ ಎನಿಸಿಕೊಂಡಿದ್ದು, 2017ರಲ್ಲಿ ಬುರುಂಡಿ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದಿಂದ ಹೊರಬಂದಿತ್ತು. ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯ ರೋಮ್ನಲ್ಲಿ ಕಾರ್ಯನಿರ್ವಹಿಸುತ್ತಿದೆ. 2016ರಲ್ಲಿ ದಕ್ಷಿಣ ಆಫ್ರಿಕಾ ಕೂಡಾ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದಿಂದ ಹೊರಬರುವ ಪ್ರಯತ್ನ ನಡೆಸಿತ್ತು. ಆದರೆ ಇದರ ವಾಪಸ್ಸಾತಿಯನ್ನು ವಿಶ್ವಸಂಸ್ಥೆ ರದ್ದುಪಡಿಸಿತ್ತು.

ಪ್ರಮುಖ ಅಂಶಗಳು

ರೋಮ್ನಲ್ಲಿರುವ ಅಂತರರಾಷ್ಟ್ರೀಯ ನ್ಯಾಯಾಲಯ ವ್ಯವಸ್ಥೆಗೆ ಫಿಲಿಫೀನ್ಸ್ 2011ರಲ್ಲಿ ಅನುಮೋದನೆ ನೀಡಿತ್ತು. ಇದನ್ನು ಒಪ್ಪಿಕೊಂಡ ಫಿಲಿಫೀನ್ಸ್ ಕ್ರಮವನ್ನು ಏಷ್ಯಾದ ಮಾನವಹಕ್ಕು ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆ ಎಂದು ಬಣ್ಣಿಸಲಾಗಿತ್ತು. ಇದೀಗ ನ್ಯಾಯಾಲಯದಿಂದ ವಾಪಸ್ಸಾಗಿರುವುದರಿಂದ ಪ್ರದೇಶದ ಅಂತರರಾಷ್ಟ್ರೀಯ ಹೊಣೆಗಾರಿಕೆಗೆ ದೊಡ್ಡ ಹೊಡೆತ ಬಿದ್ದಂತಾಗಿದೆ.

ಫಿಲಿಫೀನ್ಸ್ ಅಧ್ಯಕ್ಷ ರಾಡ್ರಿಗೊ ಡ್ಯುಟೆರೆಟ್ಸ್ ಮಾದಕವಸ್ತು ವಿರೋಧಿ ಕಾರ್ಯಾಚರಣೆಯಲ್ಲಿ ಆಗಿರುವ ರಕ್ತಪಾತದ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಳವಳ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಚಾರದ ಬಗ್ಗೆ ಸಮಗ್ರ ಪರಿಶೀಲನೆ ನಡೆಸುವುದಾಗಿ ಅಂತರರಾಷ್ಟ್ರೀಯ ನ್ಯಾಯಾಲಯವು 2018 ಫೆಬ್ರವರಿಯಲ್ಲಿ ಘೋಷಿಸಿತ್ತು. ಅಭಿಯಾನದಡಿ 4000ಕ್ಕೂ ಹೆಚ್ಚು ಮಂದಿ ಶಂಕಿತ ಮಾದಕವಸ್ತು ಕಳ್ಳಸಾಗಾಣಿಕೆದಾರರನ್ನು ಹತ್ಯೆ ಮಾಡಲಾಗಿತ್ತು. ಆದರೆ ವಾಸ್ತವವಾಗಿ ಪ್ರಮಾಣ 12 ಸಾವಿರಕ್ಕೂ ಅಧಿಕ ಎಂದು ಮಾನವ ಹಕ್ಕು ಸಂಸ್ಥೆಗಳು ದೂರಿದ್ದವು.

ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯ (ಐಸಿಸಿ)

ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯ (ಐಸಿಸಿ)ವು ವಿಶ್ವದ ಮೊಟ್ಟಮೊದಲ ಅಂತರರಾಷ್ಟ್ರೀಯ ಕಾನೂನು ಸಂಸ್ಥೆಯಾಗಿದ್ದು, ಇದು ಕಾಯಂ ಅಂತರರಾಷ್ಟ್ರೀಯ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ಇದು ಹತ್ಯಾಕಾಂಡಗಳು, ಮಾನವತೆ ಮತ್ತು ಯುದ್ಧಾಪರಾಧಗಳ ಬಗ್ಗೆ ವೈಯಕ್ತಿಕ ಹಾಗೂ ಸಾಂಸ್ಥಿಕ ವ್ಯವಸ್ಥೆ ಬಗ್ಗೆ ತನಿಖೆಗಳನ್ನು ನಡೆಎಸುವ ಅಧಿಕಾರ ಹೊಂದಿದೆ. ಇದರ ಕೇಂದ್ರ ಕಚೇರಿ ನೆದರ್ಲೆಂಡ್ಸ್ ಹೇಗ್ ನಗರದಲ್ಲಿದೆ. ಇದು 2002 ಜುಲೈ 1ರಂದು ಕಾರ್ಯಾರಂಭ ಮಾಡಿದೆ. ಇದು 123 ಸದಸ್ಯದೇಶಗಳನ್ನು ಹೊಂದಿದ್ದು, ಭಾರತ ಇದರ ಸದಸ್ಯತ್ವ ಪಡೆದಿಲ್ಲ. ರೋಮ್ ಸ್ಟ್ಯಾಚ್ಯೂ ಎನ್ನುವುದು ಬಹುಪಕ್ಷೀಯ ಒಪ್ಪಂದವಾಗಿದ್ದು, ಇದರ ಅನ್ವಯ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯ ಕಾರ್ಯ ನಿರ್ವಹಿಸುತ್ತದೆ. ಭಾರತ ಒಪ್ಪಂದಕ್ಕೆ ಸಹಿ ಮಾಡಿಲ್ಲ. ಇದು ವ್ಯಕ್ತಿಗಳ ತನಿಖೆ ನಡೆಸುವ ಅಧಿಕಾರ ಹೊಂದಿದ್ದು, ವಿಶ್ವಸಂಸ್ಥೆಯಿಂದ ಇದು ಮುಕ್ತವಾಗಿರುತ್ತದೆ. ಆದರೆ ಇದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ಪ್ರಕರಣಗಳನ್ನು ಪರಾಮರ್ಶೆಗೆ ಪಡೆಯಬಹುದು ಹಾಗೂ ವಿಶ್ವಸಂಸ್ಥೆಯ ಕ್ರಮದ ಹೊರತಾಗಿಯೂ ವಿಚಾರಣೆ ಆರಂಭಿಸಬಹುದು.

2000ನೇ ಇಸ್ವಿಯಲ್ಲಿ ಅಮೆರಿಕ ಕೂಡಾ ಒಪ್ಪಂದಕ್ಕೆ ಸಹಿ ಮಾಡಿದ್ದರೂ, ಇದುವರೆಗೆ ಅದನ್ನು ಅನುಮೋದಿಸಿಲ್ಲ. ಇದರಿಂದ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಇದೆ ಎನ್ನುವುದು ಅಮೆರಿಕದ ವಾದ. ರಷ್ಯಾ ಸ್ಥಿತಿ ಕೂಡಾ ಇಂಥದ್ದೇ ಆಹಿದೆ. ಇಸ್ರೇಲ್ ಕೂಡಾ ಇದಕ್ಕೆ ತಕ್ಷಣ ಸಹಿ ಮಾಡಿದರೂ, ಅದನ್ನು ದೃಢೀಕರಿಸಿಲ್ಲ. ಚೀನಾ ಕೂಡಾ ಇದಕ್ಕೆ ಸಹಿ ಮಾಡಿಲ್ಲ.

Comment