Our website is under process, we will get back soon. Sorry for the inconvenience!!!!!!

ವಿಮಾನ ನಿಲ್ದಾಣದಲ್ಲಿ ಕಳೆದುಕೊಳ್ಳುವ ವಸ್ತುಗಳ ಪತ್ತೆಗೆ ಆಪ್

ವಿಮಾನ ನಿಲ್ದಾಣದಲ್ಲಿ ಕಳೆದುಕೊಳ್ಳುವ ವಸ್ತುಗಳ ಪತ್ತೆಗೆ ಆಪ್

ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಕಳೆದುಕೊಳ್ಳುವ ವಸ್ತುಗಳನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಸಹಕಾರಿಯಾಗುವ ಹೊಸ ಮೊಬೈಲ್ ಅಪ್ಲಿಕೇಶನ್ ಒಂದನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಬಿಡುಗಡೆ ಮಾಡಿದೆ. ದೇಶದ 59 ವಿಮಾನ ನಿಲ್ದಾಣಗಳಿಗೆ ಇದು ಅನ್ವಯಿಸುತ್ತದೆ. ಇದನ್ನು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಭಾರತದಲ್ಲಿ ಕಾರ್ಯನಿರ್ವಹಿಸುವ 59 ವಿಮಾನ ನಿಲ್ದಾಣಗಳಿಗೆ ಭದ್ರತೆಯನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಒದಗಿಸುತ್ತದೆ.

ಪ್ರಮುಖ ಅಂಶಗಳು

ಮೊಬೈಲ್ ಅಪ್ಲಿಕೇಶನ್ ಪ್ರಮುಖವಾಗಿ ಮೂರು ಸೌಲಭ್ಯಗಳನ್ನು ಒದಗಿಸುತ್ತದೆ. ವಿಮಾನ ನಿಲ್ದಾಣಗಳಲ್ಲಿ ಕಳೆದುಹೋದ ಮತ್ತು ಸಿಕ್ಕಿದ ವಸ್ತುಗಳು, ದೂರುಗಳ ಜಾಡು ಹಿಡಿಯುವುದು ಅಥವಾ ಸ್ಥಿತಿಗತಿಯ ಮನವಿ ಹಾಗೂ ಭದ್ರತೆಯಲ್ಲಿನ ತಾಂತ್ರಿಕ ಸಲಹೆ ನೀಡುವುದು ಮತ್ತು ಅಗ್ನಿಶಾಮಕ ಸೇವೆಗಳನ್ನು ಒದಗಿಸುವ ಸೇವೆಗಳು ಆಪ್ ಮೂಲಕ ಲಭ್ಯ. ಇದರ ಪ್ರಮುಖವಾದ ಪ್ರಯೋಜನವೆಂದರೆ, ಪ್ರಯಾಣಿಕರು ನೇರವಾಗಿ ತಮ್ಮ ದೂರುಗಳನ್ನು ದಾಖಲಿಸಲು ನೆರವಾಗುವುದು ಮತ್ತು ತಮ್ಮ ದೂರುಗಳ ಸ್ಥಿತಿಗತಿ ಏನಾಗಿದೆ ಎಂಬ ಬಗ್ಗೆ ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಯಿಂದ ಮಾಹಿತಿಯನ್ನು ಪಡೆಯಲು ಪ್ರಯಾಣಿಕರಿಗೆ ನೆರವಾಗುವುದು. ಆಪ್ ಮೂಲಕ ಪ್ರಯಾಣಿಕರು ತಮ್ಮ ಕಳೆದುಹೋದ ವಸ್ತುವಿನ ಬಗ್ಗೆ ಮಾಹಿತಿಯನ್ನು ಅಪ್ಲೋಡ್ ಮಾಡಲು ಅವಕಾಶವಿದ್ದು, ಇದರಲ್ಲಿ ಕಳೆದು ಹೋದ ವಸ್ತು ಹಾಗೂ ವಿಮಾನಯಾನದ ವಿವರಗಳನ್ನು ದಾಖಲಿಸಬೇಕಾಗುತ್ತದೆ. ಜತೆಗೆ ಕಳೆದುಹೋದ ವಸ್ತುಗಳು ಸಿಕ್ಕಿದಾಗ ಪ್ರಯಾಣಿಕರಿಗೆ ಸಂದೇಶವನ್ನು ಇದು ರವಾನಿಸುತ್ತದೆ.

ಹಿನ್ನೆಲೆ

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) "ಕಳೆದು ಹೋದ ಮತ್ತು ಪತ್ತೆಯಾದ" ವಸ್ತುಗಳ ಯೋಜನೆಯನ್ನು ತನ್ನ ವೆಬ್ಸೈಟ್ನಲ್ಲಿ 2015ರಲ್ಲಿ ಆರಂಬಿಸಿತ್ತು. ಇದು ಕಳೆದುಹೋದ ವಸ್ತುಗಳ ವಸ್ತುಗಳ ಮತ್ತು ವಿಮಾನ ನಿಲ್ದಾಣಗಳಲ್ಲಿ ಪ್ರಮಾದವಶಾತ್ ಬೆಲೆಬಾಳುವ ವಸ್ತುಗಳನ್ನು ಬಿಟ್ಟುಹೋಗಿದ್ದಲ್ಲಿ, ಬಗ್ಗೆ ಮಾಹಿತಿ ನೀಡುವ ಕಾರ್ಯವನ್ನು ಮಾಡುತ್ತದೆ. ವ್ಯವಸ್ಥೆಯ ಮೂಲಕ 2017ರಲ್ಲಿ 50.05 ಕೋಟಿ ರೂಪಾಯಿ ಮೌಲ್ಯದ ಕಳೆದು ಹೋದ ವಸ್ತುಗಳನ್ನು ಪಡೆಯಲು ಸಾಧ್ಯವಾಗಿದೆ. 2018 ಮೊದಲ ಮೂರು ತಿಂಗಳಲ್ಲಿ 5.49 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ಪತ್ತೆಯಾಗಿವೆ.

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಗೃಹ ಸಚಿವಾಲಯದಡಿ ಕಾರ್ಯ ನಿರ್ವಹಿಸುವ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯಾಗಿದೆ. ಇದನ್ನು ಆರಂಭದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಕಾಯ್ದೆ- 1968ಕ್ಕೆ ಅನುಗುಣವಾಗಿ ಕೇಂದ್ರೀಯ ಉದ್ದಿಮೆಗಳಿಗೆ ಭದ್ರತೆ ಒದಗಿಸುವ ಪಡೆಯಾಗಿ ಆಂಭಿಸಲಾಗಿತ್ತು. ಆದಾಗ್ಯೂ ಕಾಯ್ದೆಗೆ 1983ರಲ್ಲಿ ತಿದ್ದುಪಡಿ ತಂದ ಬಳಿಕ ಇದನ್ನು ಸಶಸ್ತ್ರ ಪಡೆಯಾಗಿ ರೂಪಾಂತರಿಸಲಾಯಿತು.

ಇದೀಗ ಸಿಐಎಸ್ಎಫ್ ಎಲ್ಲ ಕೈಗಾರಿಕಾ ಯೋಜನೆಗಳಿಗೆ ಮತ್ತು ಸಂಘ ಸಂಸ್ಥೆಗಳಿಗೆ ಭದ್ರತೆ ಒದಗಿಸುತ್ತಿದ್ದು, ಜತೆಗೆ ಗಣ್ಯರಿಗೆ ಭದ್ರತೆ ನೀಡುವ ಮತ್ತು ವಿಕೋಪ ನಿರ್ವಹಣೆ ಸಂದರ್ಭದಲ್ಲಿ ಕೂಡಾ ಅಗತ್ಯ ನೆರವನ್ನು ಒದಗಿಸುವ ಕಾರ್ಯ ಮಾಡುತ್ತಿದೆ. ಇದು ಅಗ್ನಿಶಾಮಕ ದಳವನ್ನೂ ಹೊಂದಿದ್ದು, ಬೆಂಕಿ ಆಕಸ್ಮಿಕಗಳ ಮತ್ತು ತುರ್ತು ಸಂದರ್ಭದಲ್ಲಿ ತುರ್ತುಸೇವೆ ಒದಗಿಸುತ್ತದೆ. ಇದು 1.65 ಲಕ್ಷಕ್ಕೂ ಅಧಿಕ ಸಿಬ್ಬಂದಿಯನ್ನು ಹೊಂದಿದ್ದು ವಿಶ್ವದಲ್ಲೇ ಅತಿದೊಡ್ಡ ಭದ್ರತಾ ಪಡೆ ಎನಿಸಿಕೊಂಡಿದೆ.

Comment