Free IAS workshop by Topper On 17th June at 9.30am and New KAS prelims batch starts from 15th July 2018 - For registratin Contact: 9686664983/9845512052. Admission Open for Universal School of Admission (B.A & B.com with IAS/KAS Integrated Coaching) Contact - 9686664985/080-46568844

ತಿಲೋಮೆರಾ ನಾಗಲಾಂಡ: ಹೊಸ ಜಲಚರ ಪತ್ತೆ

ತಿಲೋಮೆರಾ ನಾಗಲಾಂಡ: ಹೊಸ ಜಲಚರ ಪತ್ತೆ

ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾ (ಝೆಡ್ಎಸ್) ವಿಜ್ಞಾನಿಗಳು ತಿಲೋಮೆರಾ ನಾಗಲಾಂಡ ಜೆಹಮಲರ್ ಮತ್ತು ತಿಲೋಮೆರಾ ನಾಗಲಾಂಡ ಚಂದ್ರಾ ಎಂಬ ಹೊಸ ಎರಡು ಹೊಸ ಜಲಚರಗಳನ್ನು (ವಾಟರ್ ಸ್ಟ್ರೈಡರ್) ಪತ್ತೆ ಮಾಡಿದ್ದಾರೆ. ಎರಡು ಪ್ರಬೇಧಗಳನ್ನು ನಾಗಾಲ್ಯಾಂಡ್ ಪೆರೆನ್ ಜಿಲ್ಲೆಯ ಇಂಟಂಕಿ ನದಿಯಲ್ಲಿ ಪತ್ತೆ ಮಾಡಲಾಗಿದೆ.

ಹೊಸದಾಗಿ ಪತ್ತೆ ಮಾಡಲಾದ ಎರಡು ಪ್ರಭೇಧಗಳು ತಿಲೋಮೆರಾ ಅಗ್ರಿಯೋಡೆಸ್ ಗುಂಪಿಗೆ ಸೇರಿದ್ದಾಗಿವೆ. ಇವು 11.79 ಮಿಲೀಮೀಟರ್ ಉದ್ದವಿದ್ದು, ಉದ್ದವಾದ ಚಾಚುಗಾಲನ್ನು ಹೊಂದಿವೆ. ಇದು ಕಿತ್ತಳೆ ಬಣ್ಣದ್ದಾಗಿದ್ದು, ಕಪ್ಪು ಗೆರೆಗಳನ್ನು ಹೊಂದಿವೆ. ಅಂತೆಯೇ ಉದ್ದುದ್ದಕ್ಕೆ ಹಳದಿ ಬಣ್ಣದ ಗೆರೆಗಳನ್ನು ಹೊಂದಿದೆ. ಇದರ ಮುಳ್ಳಿನ ಬದಿಯಲ್ಲಿ ಇರುವ ಕಪ್ಪು ಗೆರೆಗಳು ಇದನ್ನು ಇತರ ಬಗೆಯ ತಿಲೋಮೆರ ಉಪಪ್ರಬೇಧಗಳಿಗಿಂತ ಭಿನ್ನವಾಗಿ ಮಾಡಿದೆ. ಇದು ಕೇವಲ ಕಲ್ಲುಗಳಿರುವ, ರಭಸದಿಂದ ನೀರು ಹರಿಯುವ ನದಿಗಳಲ್ಲಿ ಮಾತ್ರ ಕಂಡುಬರುತ್ತವೆ ಹಾಗೂ ಇವು ಸೂರ್ಯನ ಕಿರಣಗಳಿಗೆ ತೆರೆದುಕೊಳ್ಳುವುದಿಲ್ಲ. ಇದು ಕಾಲಿನ ಮಧ್ಯದಲ್ಲಿ ರೋಮಗಳನ್ನು ಹೊಂದಿದ್ದು, ಇವು ಪ್ರಬಲವಾದ ರಭಸದ ಹರಿವನ್ನು ತಡೆಯಲು ಕೀಟಕ್ಕೆ ಸಹಕರಿಸುತ್ತವೆ.

ವಾಟರ್ ಸ್ಟ್ರೈಡರ್ಸ್

ವಾಟರ್ ಸ್ಟ್ರೈಡರ್ಸ್ ಎಂದರೆ ಒಂದು ಬಗೆಯ ಜಲಚರ ಕೀಟಗಳ ಗುಂಪಾಗಿದ್ದು, ನೀರಿನ ಮೇಲ್ಮೈನಲ್ಲಿ ಇವು ಜೀವಿಸುತ್ತವೆ. ಮೇಲ್ಮೈ ಒತ್ತಡವನ್ನು ಇವು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತವೆ. ಇವುಗಳ ಇರುವಿಕೆಯು ನೀರಿನ ಗುಣಮಟ್ಟದ ಸೂಚಕವಾಗಿದ್ದು, ಇದು ನದಿ ಪರಿಸರದ ಆಹಾರ ಸರಣಿಯಲ್ಲಿ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ ಇವು ಸೊಳ್ಳೆಗಳ ಮೊಟ್ಟೆಗಳಿಗೆ ಆಹಾರ ಒದಗಿಸುತ್ತವೆ.

ವಾಟರ್ ಸ್ಟ್ರೈಡರ್ಸ್ಗಳಿಗೆ ಮೂರು ಜತೆ ಕಾಲುಗಳಿದ್ದು, ಮುಂದಿನ ಕಾಲುಗಳು ಉಳಿದ ಎರಡು ಜೋಡಿ ಕಾಲುಗಳಿಗಿಂತ ಗಿಡ್ಡವಾಗಿರುತ್ತವೆ. ಮಧ್ಯದ ಹಾಗೂ ಹಿಂದಿನ ಕಾಲುಗಳಿಗಿಂತ ಹೆಚ್ಚಾಗಿ ಗಿಡ್ಡ ಕಾಲಿನ ಮೂಲಕ ಕೀಟಗಳು ತಮ್ಮ ಬೇಟೆಯನ್ನು ಹಿಡಿಯಲು ಬಳಸುತ್ತವೆ. ಇವುಗಳು ಸೂಜಿಯಾಕಾರದ ಮುಖದ ಭಾಗವನ್ನು ಹೊಂದಿದ್ದು, ಇವು ತಾವು ಬೇಟೆಯಾಡುವ ಪ್ರಾಣಿಗಳ ರಸವನ್ನು ಹೀರಲು ಬಳಕೆಯಾಗುತ್ತವೆ. ವಿವಿಧ ಬಗೆಯ ನೀರಿನಲ್ಲಿ ಸುಮಾರು 100ಕ್ಕೂ ಹೆಚ್ಚು ಪ್ರಬೇಧಗಳ ವಾಟರ್ ಸ್ಟ್ರೈಡರ್ಸ್ಗಳು ಕಾಣಸಿಗುತ್ತವೆ. ಸಮುದ್ರ, ಕೆರೆ, ಸರೋವರ, ನದಿ, ತೊರೆ, ಹಳ್ಳಗಳಲ್ಲೂ ಬಗೆಬಗೆಯ ವಾಟರ್ ಸ್ಟ್ರೈಡರ್ಸ್ ಕಾಣಸಿಗುತ್ತವೆ.

ಇದೀಗ ತಿಲೋಮೆರಾ ನಾಗಾಲ್ಯಾಂಡ ಪ್ರಬೇಧದ ಪತ್ತೆಯೊಂದಿಗೆ ಭಾರತದಲ್ಲಿ ತಿಲೋಮೆರಾದ ಆರು ಉಪಪ್ರಬೇಧಗಳು ಪತ್ತೆಯಾದಂತಾಗಿವೆ. ಇದರಲ್ಲಿ ಭಾರತ ಪರ್ಯಾಯದ್ವೀಪದಲ್ಲಿ ಕಂಡುಬರುವ ತಿಲೋಮೆರಾ ಅಗ್ರಿಯೊಡೆಸ್, ಉತ್ತರ ಭಾರತ ಹಾಗೂ ಈಶಾನ್ಯ ಭಾರತದಲ್ಲಿ ಕಂಡುಬರುವ ತಿಲೋಮೆರಾ ಲ್ಯಟಿಕ್ಯುಡಟಾ, ಈಶಾನ್ಯ ಭಾಗದಲ್ಲಿ ಕಂಡುಬರುವ ತಿಲೋಮೆರಾ ಅಸ್ಸಾಮೀಸ್, ಉತ್ತರಾಖಂಡದಲ್ಲಿ ಕಂಡುಬರುವ ತಿಲೊಮೆರಾ ಒಶಿಡೆಂಟಾಲಿಸಿಸ್ ಹಾಗೂ ಅಂಡಮಾನ್ ದ್ವೀಪದಲ್ಲಿ ಕಂಡುಬರುವ ತಿಲೊಮೆರಾ ಟಿಗ್ರಿನಾ ಸೇರಿವೆ.

Comment