Our website is under process, we will get back soon. Sorry for the inconvenience!!!!!!

ಹನ್ನೆರಡು ವರ್ಷಕ್ಕಿಂತ ಕೆಳಗಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗುವ ಆರೋಪಿಗಳಿಗೆ ಮರಣ ದಂಡನೆ ವಿಧಿಸಲು ಅವಕಾಶ ನೀಡುವ ಅಪರಾಧ ಕಾನೂನು (ಹರ್ಯಾಣ ತಿದ್ದುಪಡಿ) ಮಸೂದೆ- 2018ಕ್ಕೆ ಹರ್ಯಾಣ ವಿಧಾನಸಭಭೆ ಅನುಮೋದನೆ ನೀಡಿದೆ. ಇದರ ಅನ್ವಯ ಭಾರತೀಯ ದಂಡ ಸಂಹಿತೆ- 1860ಕ್ಕೆ ತಿದ್ದುಪಡಿ ತರಲು ಸರ್ವಾನುಮತದ ಒಪ್ಪಿಗೆ ನೀಡಲಾಯಿತು.

ಇದೀಗ ರಾಷ್ಟ್ರಪತಿಗಳ ಒಪ್ಪಿಗೆ ಪಡೆದ ಬಳಿಕ ಇದು ಕಾನೂನು ಆಗಿ ಪರಿವರ್ತನೆಯಾಗಲಿದೆ. ಇದರೊಂದಿಗೆ ಹನ್ನೆರಡು ವರ್ಷಕ್ಕಿಂತ ಕೆಳಗಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗುವ ಆರೋಪಿಗಳಿಗೆ ಮರಣ ದಂಡನೆ ವಿಧಿಸುವ ಕಾನೂನು ಜಾರಿಗೊಳಿಸಿದ ಮೂರನೇ ರಾಜ್ಯ ಎಂಬ ಖ್ಯಾತಿಗೆ ಹರ್ಯಾಣ ಪಾತ್ರವಾಗಲಿದೆ. ಮಧ್ಯಪ್ರದೇಶ ಹಾಗೂ ರಾಜಸ್ಥಾನ ಈಗಾಗಲೇ ಇಂಥ ಕಾನೂನು ಜಾರಿಗೆ ತಂದಿದೆ.

ಪ್ರಮುಖ ಅಂಶಗಳು

ಮಸೂದೆಯ ಮುಖ್ಯ ಉದ್ದೇಶವೆಂದರೆ ಹೆಣ್ಣುಮಗುವನ್ನು ಸಂರಕ್ಷಿಸುವುದು ಹಾಗೂ ಅತ್ಯಾಚಾರಿಗಳಿಗೆ ಮರಣ ದಂಡನೆ ಸೇರಿದಂತೆ ಕಠಿಣ ಶಿಕ್ಷೆಯನ್ನು ವಿಧಿಸುವುದು. ಇದು ಭಾರತೀಯ ದಂಡಸಂಹಿತೆ-1860ಕ್ಕೆ ಸೆಕ್ಷನ್ 376ಎಎ, 376 ಡಿಡಿಯನ್ನು ಸೇರಿಸಲಿದೆ. ಸೆಕ್ಷನ್ಗಳ ಅನ್ವಯ, ಹನ್ನೆರಡು ವರ್ಷ ಅಥವಾ ಅದಕ್ಕಿಂತ ಕೆಳಗಿನ ವಯಸ್ಸಿನ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಅಥವಾ ಸಾಮೂಹಿಕ ಅತ್ಯಾಚಾರ ಎಸಗುವ ವ್ಯಕ್ತಿಗಳಿಗೆ ಮರಣ ದಂಡನೆ ಅಥವಾ ಕಠಿಣ ಶಿಕ್ಷೆ ವಿಧಿಸಲಾಗುವುದು. ಮರಣ ದಂಡನೆ ಹೊರತುಪಡಿಸಿ ಇದರ ಅನ್ವಯ ಗರಿಷ್ಠ 14 ವರ್ಷದಿಂದ 20 ವರ್ಷ ವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಇದನ್ನು ಜೀವಾವಧಿ ಶಿಕ್ಷೆಯಾಗಿ ವಿಸ್ತರಿಸಲೂ ಅವಕಾಶವಿದೆ. ಅಂದರೆ ಅತ್ಯಾಚಾರ ಎಸಗುವ ವ್ಯಕ್ತಿ ಜೀವನ ಪರ್ಯಂತ ಜೈಲಿನಲ್ಲಿ ಇರಬೇಕಾಗುತ್ತದೆ ಹಾಗೂ ದಂಡ ಪಾವತಿಸಬೇಕಾಗುತ್ತದೆ.

ಹಿನ್ನೆಲೆ

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್ಸಿಆರ್ಬಿ)- 2016 ವರದಿಯ ಪ್ರಕಾರ, ಮಕ್ಕಳ ವಿರುದ್ಧದ ಅಪರಾಧಗಳ ಪ್ರಮಾಣ ನಿಯತವಾಗಿ ಹೆಚ್ಚುತ್ತಿದೆ. 2016ರಲ್ಲಿ ರಾಜ್ಯದಲ್ಲಿ ಮಕ್ಕಳ ಮೇಲೆ ನಡೆದ ಅಪರಾಧ ಪ್ರಕರಣಗಳ ಸಂಖ್ಯೆ 4034. ಅಂದರೆ ದೇಶದಲ್ಲಿ ದಾಖಲಾಗಿರುವ ಒಟ್ಟು ಪ್ರಕರಣಗಳ ಪೈಕಿ ಶೇಕಡ 3.8ರಷ್ಟು ಅಪರಾಧಗಳು ಹರ್ಯಾಣದಲ್ಲೇ ಸಂಭವಿಸಿವೆ. ದೇಶದಲ್ಲಿ ಒಟ್ಟು 98344 ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು 2016ರಲ್ಲಿ ದಾಖಲಾಗಿವೆ. 2015ರಲ್ಲಿ ಹರ್ಯಾಣದಲ್ಲಿ ಮಕ್ಕಳ ವಿರುದ್ಧ 3689 ಅಪರಾಧ ಪ್ರಕರಣಗಳು ದಾಖಲಾಗಿವೆ. ಅಂದರೆ ಒಂದು ವರ್ಷದಲ್ಲಿ 345 ಪ್ರಕರಣಗಳು ಹೆಚ್ಚಿವೆ. ರಾಜ್ಯ ಪೊಲೀಸರು 2015ರಲ್ಲಿ ಮಕ್ಕಳ ಮೇಲಿನ 728 ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಿದ್ದರು. ಪ್ರಮಾಣ 2016ರಲ್ಲಿ 858ಕ್ಕೆ ಹೆಚ್ಚಿದೆ.

Comment