Our website is under process, we will get back soon. Sorry for the inconvenience!!!!!!

ಅಸ್ಸಾಮಿ ಎಮ್ಮೆಯ ತದ್ರೂಪಿ ಸಚ್‍ಗೌರವ್ ಜನನ

ಅಸ್ಸಾಮಿ ಎಮ್ಮೆಯ ತದ್ರೂಪಿ ಸಚ್‍ಗೌರವ್ ಜನನ

ಕೇಂದ್ರೀಯ ಎಮ್ಮೆ ಸಂಶೋಧನಾ ಸಂಸ್ಥೆ (ಸಿಐಬಿಆರ್) ದೇಶದ ಮೊಟ್ಟಮೊದಲ ಅಸ್ಸಾಮಿ ಎಮ್ಮೆಯ ತದ್ರೂಪಿ ಕರುವನ್ನು ಸೃಷ್ಟಿಸಿರುವುದಾಗಿ ಹೇಳಿಕೊಂಡಿದೆ. ಕ್ಲೋನ್ ಮಾಡಲಾದ ಗಂಡು ಕರುವನ್ನು ಸೃಷ್ಟಿಸಲಾಗಿದ್ದು, ಇದಕ್ಕೆ ಸಚ್-ಗೌರವ್ ಎಂದು ಹೆಸರಿಸಲಾಗಿದೆ. ಹರ್ಯಾಣದ ಹಿಸ್ಸಾರ್ನಲ್ಲಿ ಮೊಟ್ಟಮೊದಲ ಗಂಡುಕರು ಜನಿಸಿದೆ. ಇದು ಮುರ್ರಾ ಎಮ್ಮೆಯ ಕೋಶಗಳಿಂಧ ಜನಿಸಿದ್ದು, ಹೈಟೆಕ್ ಸಚ್ ಡೈರಿ ಫಾರ್ಮ್ನಲ್ಲಿ ಪ್ರಯೋಗ ಕೈಗೊಳ್ಳಲಾಗಿದೆ. ಕ್ಲೋನಿಂಗ್ ಪ್ರಯೋಗಾಲಯದಿಂದ 100 ಕಿಲೋಮೀಟರ್ ದೂರದ ಪ್ರದೇಶದಲ್ಲಿ ಇದು ಜನಿಸಿದ್ದು, ಕ್ಷೇತ್ರದಲ್ಲಿ ಜನಿಸಿದ ಮೊಟ್ಟಮೊದಲ ತದ್ರೂಪಿ ಕರು ಎಂಬ ಹೆಗ್ಗಳಿಕೆಯನ್ನು ಸಚ್ಗೌರವ್ ಕರು ಪಡೆದುಕೊಂಡಿದೆ.

ಪ್ರಮುಖ ಅಂಶಗಳು

ಪ್ರಾಣಿಗಳ ಕ್ಲೋನಿಂಗ್ ಅಥವಾ ತದ್ರೂಪಿ ಸೃಷ್ಟಿ, ಅತ್ಯುತ್ತಮ ಪುನರುತ್ಪತ್ತಿ ಸಾಧನವಾಗಿದ್ದು, ಇದು ಸಂರಕ್ಷಣೆ ಮತ್ತು ಆಯ್ದ ಉನ್ನತ ದರ್ಜೆಯ ಎಮ್ಮೆ ತಳಿಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸುವ ನಿಟ್ಟಿನಲ್ಲಿಕೂಡಾ ಸಹಕಾರಿಯಾಗಿದೆ. ಇದು ಐಸಿಎಆರ್-ಸಿಐಆರ್ಬಿ ಅಭಿವೃದ್ಧಿಪಡಿಸಿದ ಎರಡನೇ ಗಂಡುಕರುವಾಗಿದ್ದು, 2015 ಡಿಸೆಂಬರ್ನಲ್ಲಿ ಹಿಸ್ಸಾರ್-ಗೌರವ್ ಸೃಷ್ಟಿಯಾಗಿತ್ತು.

ಸಚ್ ಗೌರವ್ ಕರುವನ್ನು ವಿಶಿಷ್ಟ ವಿಧಾನದಲ್ಲಿ ಉತ್ಪಾದಿಸಲಾಗಿದ್ದು, ಸಾಮಾನ್ಯ ಹೆರಿಗೆ ಮೂಲಕ ಕರುವನ್ನು ಪಡೆಯಲಾಗಿದೆ. ಕರುವಿನ ಹುಟ್ಟಿದಾಗಿನ ತೂಕ 54.2 ಕೆ.ಜಿ ಇತ್ತು ಮತ್ತು ಆರೋಗ್ಯದಿಂದ ಇತ್ತು. ಇದು ಸಾಮಾನ್ಯ ಮನಃಶಾಸ್ತ್ರೀಯ ಮಾನದಂಡಗಳು ಮತ್ತು ರಕ್ತದ ಪ್ರೊಫೈಲ್ ಹೊಂದಿತ್ತು. ಸಚ್ ಗೌರವ್ ಕರುವಿನ ಜೆನೊಟೈಪ್ ಅನ್ನು ಮೈಕ್ರೊಸೆಟಲೈಟ್ ವಿಶ್ಲೇಷಣೆ ಮತ್ತು ಕ್ರೊಮೊಸೋಮ್ ವಿಶ್ಲೇಷಣೆ ಮೂಲಕ ದೃಢಪಡಿಸಲಾಗಿದೆ.

ಅಸ್ಸಾಮಿ ಎಮ್ಮೆಯ ಸಣ್ಣ ಜೀವಕೋಶವನ್ನು ಗುವಾಹತಿಯ ಖನ್ನಾಪುರ ಪಶುವೈದ್ಯಕೀಯ ಕಾಲೇಜಿನಲ್ಲಿ ಸಂಗ್ರಹಿಸಲಾಗಿದೆ. ಇದು ಹಿಸ್ಸಾರ್ನಲ್ಲಿರುವ ಕ್ಲೋನಿಂಗ್ ಪ್ರಯೋಗಾಲಯದಿಂದ 2000 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಡೋನರ್ ಕೋಶವನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಭ್ರೂಣವನ್ನು ಸ್ವೀಕರಿಸುವ ತಾಯಿಗೆ ಎರಡು ಗಂಟೆಯಲ್ಲಿ ವರ್ಗಾಯಿಸಲಾಗಿದೆ. ಮುರ್ರಾ ಎಮ್ಮೆಯ ಗರ್ಭಕೋಶವನ್ನು ಸ್ವೀಕೃತಿ ಓಕ್ಟಿಸ್ ಆಗಿ ಇದಕ್ಕೆ ಬಳಸಿಕೊಳ್ಳಲಾಗಿದೆ.

Comment