IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ನಿರ್ದಿಷ್ಟ ಪರಿಹಾರ (ತಿದ್ದುಪಡಿ) ಮಸೂದೆಗೆ ಲೋಕಸಭೆ ಒಪ್ಪಿಗೆ

ನಿರ್ದಿಷ್ಟ ಪರಿಹಾರ (ತಿದ್ದುಪಡಿ) ಮಸೂದೆಗೆ ಲೋಕಸಭೆ ಒಪ್ಪಿಗೆ

ನಿರ್ದಿಷ್ಟ ಪರಿಹಾರ (ತಿದ್ದುಪಡಿ) ಮಸೂದೆ-2017ಕ್ಕೆ ಲೋಕಸಭೆ ಒಪ್ಪಿಗೆ ನೀಡಿದೆ. ಇದು ದೇಶದಲ್ಲಿ ವಹಿವಾಟು ನಡೆಸುವ ವಾತಾವರಣವನ್ನು ಮತ್ತಷ್ಟು ಸುಲಲಿತಗೊಳಿಸುವಲ್ಲಿ ಸಹಕಾರಿಯಾಗಲಿದೆ. ಮಸೂದೆಯು ಪ್ರಸ್ತುತ ಜಾರಿಯಲ್ಲಿರುವ ನಿರ್ದಿಷ್ಟ ಪರಿಹಾರ ಕಾಯ್ದೆ- 1963ಕ್ಕೆ ತಿದ್ದುಪಡಿ ತರಲಿದೆ.

ಮಸೂದೆಯ ಲಕ್ಷಣಗಳು

ನಿರ್ದಿಷ್ಟ ಕ್ಷಮತೆ: ಮಸೂದೆಯು ನಿರ್ದಿಷ್ಟ ಕ್ಷಮತೆಯ ಸೀಮಿತ ಹಕ್ಕಿನ ಷರತ್ತುಗಳನ್ನು ಕಿತ್ತುಹಾಕಲು ಉದ್ದೇಶಿಸಿದೆ. ಇದನ್ನು ನ್ಯಾಯಾಲಯ ತಮ್ಮ ವಿವೇಚನೆಯ ಅನ್ವಯ ಕೊಡಮಾಡುತ್ತದೆ ಹಾಗೂ ನ್ಯಾಯಾಲಯದಿಂದ ನಿರ್ದಿಷ್ಟ ಕ್ಷಮತೆಯ ಪರವಾನಗಿಯನ್ನು ಸಾಮಾನ್ಯ ನಿಯಮಾವಳಿಯಾಗಿ ಮಾಡಲಿದೆ. ಇದು ಸೀಮಿತ ಹೊಣೆಗಾರಿಕೆ ಪಾಲುದಾರಿಕೆಯನ್ನು ಸೇರಿಸಲಿದ್ದು, ಪ್ರಸ್ತುತ ಇರುವ ಎರಡು ಸೀಮಿತ ಹೊಣೆಗಾರಿಕೆ ಪಾಲುದಾರಿಕೆಯನ್ನು ಕ್ರೋಢೀಕರಿಸಿ, ಸಮನ್ವಯಗೊಳಿಸಿ ಒಂದು ಸೀಮಿತ ಹೊಣೆಗಾರಿಕೆ ಪಾಲುದಾರಿಕೆಯನ್ನು ಘೋಷಿಸಲಾಗಿದೆ. ಪೈಕಿ ಒಂದನ್ನು ಕ್ರೋಢೀಕರಣಕ್ಕೆ ಮೊದಲು ಒಪ್ಪಂದವಾಗಿ ಮಾಡಿಕೊಂಡಿರಬೇಕಾಗುತ್ತದೆ.

ಬದಲಿ ಕ್ಷಮತೆ: ಮಸೂದೆಯು ತೊಂದರೆಗೀಡಾದ ವ್ಯಕ್ತಿಯ (ಅಂದರೆ ಒಪ್ಪಂದವನ್ನು ಇನ್ನೊಂದು ಕಡೆಯವರು ಜಾರಿಗೊಳಿಸದಿದ್ದರೆ) ಮೂರನೇ ಕಡೆಯವರ ಜತೆಗೆ ಕ್ಷಮತೆಯ ಒಪ್ಪಂದವನ್ನು ಮಾಡಿಕೊಳ್ಳುವ ಆಯ್ಕೆಯನ್ನು ನೀಡುತ್ತದೆ ಅಥವಾ ಸ್ವಂತ ಏಜೆನ್ಸಿಯ ಜತೆ (ಬದಲಿ ಕ್ಷಮತೆ) ಒಪ್ಪಂದವನ್ನು ಮಾಡಿಕೊಳ್ಳಬಹುದಾಗಿದೆ.

ಇಂಜಂಕ್ಷನ್: ನ್ಯಾಯಾಲಯದ ಇಂಜಕ್ಷನ್ನಿಂದ ಯೋಜನೆ ಪೂರ್ಣಗೊಳ್ಳುವುದು ವಿಳಂಬವಾಗುವ ಸಂದರ್ಭದಲ್ಲಿ ಮೂಲಸೌಕರ್ಯ ಯೋಜನೆಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳು ಇಂಜಕ್ಷನ್ ಮಂಜೂರು ಮಾಡುವುದನ್ನು ಇದು ತಡೆಯುತ್ತದೆ. ಅಂತೆಯೇ ಮೂಲಸೌಕರ್ಯದ ಉಪ ವಲಯಗಳಾದ ಸಾರಿಗೆ, ವಿದ್ಯುತ್, ನೀರು ಮತ್ತು ನೈರ್ಮಲ್ಯ, ಸಂವಹನ ಮತ್ತು ಸಾಮಾಜಿಕ ಹಾಗೂ ವಾಣಿಜ್ಯ ಮೂಲಸೌಕರ್ಯಗಳಿಗೆ ಕೂಡಾ ನ್ಯಾಯಾಲಯಗಳು ಇಂಜಕ್ಷನ್ ನೀಡುವಂತಿಲ್ಲ. ಕೇಂದ್ರ ಸರ್ಕಾರ ಇಂಥ ವಲಯಗಳ ಪಟ್ಟಿಯನ್ನು ಅಧಿಸೂಚನೆಯ ಮೂಲಕ ಸದ್ಯದಲ್ಲೇ ಪ್ರಕಟಿಸಲಿದೆ.

ವಿಶೇಷ ನ್ಯಾಯಾಲಯಗಳು: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಸಲಹೆ ಪಡೆದು ರಾಜ್ಯ ಸರ್ಕಾರಗಳು ಕೆಲ ಸಿವಿಲ್ ನ್ಯಾಯಾಲಯಗಳನ್ನು ವಿಶೇಷ ನ್ಯಾಯಾಲಯಗಳೆಂದು ನಿಯೋಜಿಸಲು ಇದು ಅವಕಾಶ ಮಾಡಿಕೊಡುತ್ತದೆ. ನ್ಯಾಯಾಲಯಗಳು ಮೂಲಸೌಕರ್ಯ ಯೋಜನೆಗಳಿಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಲಿದೆ. ಇಂಥ ಪ್ರಕರಣಗಳನ್ನು ಪ್ರತಿವಾದಿಗೆಎ ಸಮನ್ಸ್ ನೀಡಿದ ಒಂದು ವರ್ಷದ ಒಳಗಾಗಿ ವಿಲೇವಾರಿ ಮಾಡಬೇಕಾಗುತ್ತದೆ. ಅವಧಿಯನ್ನು ಹೆಚ್ಚುವರಿಯಾಗಿ ಆರು ತಿಂಗಳ ಕಾಲ ವಿಸ್ತರಿಸಲು ವಿಶೇಷ ನ್ಯಾಯಾಲಯಕ್ಕೆ ಅಧಿಕಾರ ಇರುತ್ತದೆ.

ಸ್ವಾಧೀನದ ವಸೂಲಾತಿ: ಸ್ಥಿರಾಸ್ತಿಯನ್ನು ಕಳೆದುಕೊಂಡು ಸ್ಥಳಾಂತರಗೊಂಡ ವ್ಯಕ್ತಿಗೆ ಇದನ್ನು ವಸೂಲಿ ಮಾಡಿಕೊಳ್ಳಲು ದಾವೆಯನ್ನು ಸಲ್ಲಿಸಲು ಇದು ಅವಕಾಶ ಮಾಡಿಕೊಡುತ್ತದೆ.

ತಜ್ಞರು: ಮಸೂದೆಯು ಹೊಸ ವಿಭಾಗವನ್ನು ಮೂಲ ಕಾಯ್ದೆಗೆ ಸೇರಿಸಿದ್ದು ಇದರ ಅನ್ವಯ, ತಜ್ಞರ ಅಭಿಪ್ರಾಯ ಅಗತ್ಯವಾಗಿದ್ದಲ್ಲಿ, ತಾಂತ್ರಿಕ ತಜ್ಞರನ್ನು ನಿಯೋಜಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇಂಥ ತಜ್ಞರ ಪಾವತಿ ಮತ್ತು ಇತರ ಸಂಭಾವನೆಯನ್ನು ನ್ಯಾಯಾಲಯ ನಿರ್ಧರಿಸುತ್ತದೆ. ತಜ್ಞರ ಪಾವತಿಯನ್ನು ಎರಡೂ ಪಕ್ಷದವರು ಸಮಾನವಾಗಿ ಭರಿಸಬೇಕಾಗುತ್ತದೆ.

ನಿರ್ದಿಷ್ಟ ಪರಿಹಾರ ಕಾಯ್ದೆ- 1963

ನಿರ್ದಿಷ್ಟ ಪರಿಹಾರ ಕಾಯ್ದೆ- 1963, ವ್ಯಕ್ತಿಗಳ ನಾಗರಿಕ ಹಕ್ಕು ಅಥವಾ ಒಪ್ಪಂದದ ಅನ್ವಯ ಲಭಿಸಿರುವ ಹಕ್ಕು ಉಲ್ಲಂಘನೆಯಾದಾಗ ಪರಿಹಾರ ಪಡೆಯಲು ಇದು ಅವಕಾಶ ಮಾಡಿಕೊಡುತ್ತದೆ. ಇದು ಹೊಣೆಗಾರಿಕೆಯನ್ನು ಪರಿಪೂರ್ಣವಾಗಿ ಈಡೇರಿಸುವಲ್ಲಿ ಪರಿಹಾರ ಒದಗಿಸಲು ಕೂಡಾ ಇದು ಅವಕಾಶ ಮಾಡಿಕೊಟ್ಟಿದೆ. ಒಪ್ಪಂದದ ನಿರ್ದಿಷ್ಟ ಕ್ಷಮತೆಗೆ ಅನುಗುಣವಾಗಿ ಪರಿಹಾರ ಒದಗಿಸಬೇಕೇ ವಿನಃ ಸಾಮಾನ್ಯ ಪರಿಹಾರ ಅಥವಾ ಪರಿಹಾರ ಇಲ್ಲವೇ ನಷ್ಟ ಭರ್ತಿ ಆಧಾರದಲ್ಲಿ ನೀಡುವಂತಿಲ್ಲ.

ಇದು ಯಾವುದೇ ವ್ಯಕ್ತಿಯ ಗುತ್ತಿಗೆಯನ್ನು ಸಮರ್ಪಕವಾಗಿ ಜಾರಿಗೊಳಿಸದಿದ್ದಲ್ಲಿ, ಮುಖ್ಯವಾಗಿ ಎರಡು ಪರಿಹಾರ ಕ್ರಮಗಳನ್ನು ಸೂಚಿಸುತ್ತದೆ. ಮೊದಲನೆಯದಾಗಿ, ನಿಗದಿತ ಒಪ್ಪಂದವನ್ನು ಸೂಕ್ತವಾಗಿ ಜಾರಿಗೊಳಿಸಲು ಆದೇಶ ನೀಡುವಂತೆ ನ್ಯಾಯಾಲಯದ ಮೊರೆ ಹೋಗುವುದು ಹಾಗೂ, ಕ್ಷಮತೆಯ ಬದಲಾಗಿ ವಿತ್ತೀಯ ಪರಿಹಾರವನ್ನು ಕೋರುವುದು.

Comment