Free IAS workshop by Topper On 17th June at 9.30am and New KAS prelims batch starts from 15th July 2018 - For registratin Contact: 9686664983/9845512052. Admission Open for Universal School of Admission (B.A & B.com with IAS/KAS Integrated Coaching) Contact - 9686664985/080-46568844

ಗ್ರಾಚ್ಯುಯಿಟಿ (ತಿದ್ದುಪಡಿ) ಮಸೂದೆ- 2017ಕ್ಕೆ ಲೋಕಸಭೆ ಅನುಮೋದನೆ

ಗ್ರಾಚ್ಯುಯಿಟಿ (ತಿದ್ದುಪಡಿ) ಮಸೂದೆ- 2017ಕ್ಕೆ ಲೋಕಸಭೆ ಅನುಮೋದನೆ ನೀಡಿದೆ. ಇದು ಸರ್ಕಾರಕ್ಕೆ ಹೆರಿಗೆ ರಜೆಯನ್ನು ನಿಗದಿಪಡಿಸುವ ಮತ್ತು ತೆರಿಗೆ ಮುಕ್ತ ಗ್ರಾಚ್ಯುಯಿಟಿ ಮೊತ್ತವನ್ನು ಆಡಳಿತಾತ್ಮಕ ಆದೇಶದೊಂದಿಗೆ ಒದಗಿಸುವ ಅಧಿಕಾರವನ್ನು ನೀಡುತ್ತದೆ. ಮಸೂದೆಯು ಹಾಲಿ ಜಾರಿಯಲ್ಲಿರುವ ಗ್ರಾಚ್ಯುಯಿಟಿ ಪಾವತಿ ಕಾಯ್ದೆ- 1972ಕ್ಕೆ ತಿದ್ದುಪಡಿ ತರಲಿದೆ.

ಗ್ರಾಚ್ಯುಯಿಟಿ ಪಾವತಿ ಕಾಯ್ದೆ- 1972

ಗ್ರಾಚ್ಯುಯಿಟಿ ಪಾವತಿ ಕಾಯ್ದೆ- 1972, ಯಾವುದೇ ಸಂಘ ಸಂಸ್ಥೆ, ಫ್ಯಾಕ್ಟರಿ, ಗಣಿಗಾರಿಕೆ, ತೈಲಕ್ಷೇತ್ರ, ಪ್ಲಾಂಟೇಷನ್, ಬಂದರು, ರೈಲ್ವೆ, ಕಂಪನಿ ಅಥವಾ ಮಳಿಗೆಗಳು 10 ಅಥವಾ ಅದಕ್ಕಿಂತ ಹೆಚ್ಚಿನ ಕಾರ್ಮಿಕರನ್ನು ಹೊಂದಿದ್ದರೆ,

ಅಂಥ ಸಿಬ್ಬಂದಿಗೆ ಗ್ರಾಚ್ಯುಯಿಟಿ ಪಾವತಿಗೆ ಇದು ಅವಕಾಶ ಮಾಡಿಕೊಡುತ್ತದೆ. ಕಾಯ್ದೆಯಡಿ, ಕನಿಷ್ಠ ಐದು ವರ್ಷಗಳ ಸೇವೆ ಸಲ್ಲಿಸಿದ ಉದ್ಯೋಗಿಗಳಿಗೆ ಉದ್ಯೋಗದಿಂದ ಕಿತ್ತುಹಾಕುವ ವೇಳೆಯಲ್ಲಿ ಗ್ರಾಚ್ಯುಯಿಟಿ ನೀಡುವುದು ಕಡ್ಡಾಯ.

ಮಸೂದೆಯ ಪ್ರಮುಖ ಅಂಶಗಳು

ನೂತನ ಮಸೂದೆಯು ಕೇಂದ್ರ ಸರ್ಕಾರಕ್ಕೆ ಹೆರಿಗೆ ರಜೆಯನ್ನು ಅಧಿಸೂಚನೆ ಮೂಲಕ ನಿಗದಿಪಡಿಸಲು ಅವಕಾಶ ಮಾಡಿಕೊಡುತ್ತದೆ. ಇಂಥ ಹೆರಿಗೆ ರಜೆ ಪಡೆಯುವ ಉದ್ಯೋಗಿಯ ಸೇವೆ ಮುಂದುವರಿಯಲು ಮತ್ತು ಅವಧಿಗೆ ಕೂಡಾ ಗ್ರಾಚ್ಯುಯಿಟಿ ಮುಂದುವರಿಯಲು ಅವಕಾಶ ಮಾಡಿಕೊಡುತ್ತದೆ.

ಕಾಯ್ದೆಯ ಅನ್ವಯ ಸೇವೆಯನ್ನು ಮುಂದುವರಿಸಲು ಲೆಕ್ಕಹಾಕಲಾಗುವ ಗರಿಷ್ಠ ಹೆರಿಗೆ ರಜೆಯು, ಹೆರಿಗೆ ಸೌಲಭ್ಯಗಳ ಕಾಯ್ದೆ- 1961 ಅನ್ವಯ ಲೆಕ್ಕಹಾಕಲಾದ ಹೆರಿಗೆ ರಜೆಯ ಪ್ರಮಾಣಕ್ಕೆ ಅನುಗುಣವಾಗಿರುತ್ತದೆ. ಹೆರಿಗೆ ಸೌಲಭ್ಯಗಳ ಕಾಯ್ದೆ- 1961ರಲ್ಲಿ ಉಲ್ಲೇಖವಿರುವ 12 ವಾರಗಳ ಎಂಬ ಅಂಶವನ್ನು ಮಸೂದೆ ಕಿತ್ತುಹಾಕಲಿದ್ದು, ಗರಿಷ್ಠ ಹೆರಿಗೆ ರಜೆಯ ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಕಾಯ್ದೆಯ ಅನ್ವಯ, ಗರಿಷ್ಠ ಹೆರಿಗೆ ರಜೆ 12 ವರ್ಷ ಇದ್ದುದನ್ನು ಹೆರಿಗೆ ಸೌಲಭ್ಯಗಳ (ತಿದ್ದುಪಡಿ) ಕಾಯ್ದೆ- 2017 ಜಾರಿಗೆ ತಂದು 26 ವಾರಗಳಿಗೆ ಪರಿಷ್ಕರಿಸಲಾಗಿದೆ.

ಮಸೂದೆಯು ಹಾಲಿ ಇರುವ 10 ಲಕ್ಷ ರೂಪಾಯಿ ಗರಿಷ್ಠ ಗ್ರಾಚ್ಯುಯಿಟಿ ಮಿತಿಯನ್ನು ಕೂಡಾ ರದ್ದುಪಡಿಸಿದೆ. ಗರಿಷ್ಠ ಮಿತಿಯನ್ನು ಸರ್ಕಾರದ ಅಧಿಸೂಚನೆಗೆ ಅನುಗುಣವಾಗಿ ನಿಗದಿಪಡಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ

Comment