Our website is under process, we will get back soon. Sorry for the inconvenience!!!!!!

ಲಕ್ಷ್ಯ ಎಂಬ ವಿಶೇಷ ಯೋಜನೆ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹೆರಿಗೆ ಕೊಠಡಿ ಮತ್ತು ಹೆರಿಗೆ ಶಸ್ತ್ರಚಿಕಿತ್ಸಾ ಘಟಕದ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಲಕ್ಷ್ಯ ಎಂಬ ವಿಶೇಷ ಯೋಜನೆಯನ್ನು ರೂಪಿಸಿದೆ. ಇದನ್ನು ಮೇಲ್ನೋಟಕ್ಕೆ ಕಾಣುವ ಗುರಿ ಸಾಧಿಸುವ ನಿಟ್ಟಿನಲ್ಲಿ ಕ್ಷಿಪ್ರಗತಿಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.

ಪ್ರಮುಖ ಅಂಶಗಳು

ಗರ್ಭಿಣಿ ಮಹಿಳೆಯರಿಗೆ ಹೆರಿಗೆ ಕೊಠಡಿ ಮತ್ತು ಹೆರಿಗೆ ಶಸ್ತ್ರಚಿಕಿತ್ಸಾ ಘಟಕದಲ್ಲಿ ಗುಣಮಟ್ಟದ ಚಿಕಿತ್ಸೆ ದೊರಕುವಂತೆ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಅಂತೆಯೇ ಸ್ತ್ರೀರೋಗದ ತೀವ್ರ ನಿಗಾ ಘಟಕದ ಗುಣಮಟ್ಟವನ್ನು ಮತ್ತು ಅತ್ಯಧಿಕ ಅವಲಂಬನೆಯ ಘಟಕಗಳ ಗುಣಮಟ್ಟವನ್ನು ಸುಧಾರಿಸಲೂ ಉದ್ದೇಶಿಸಲಾಗಿದೆ. ವಿಶಿಷ್ಟ ಯೋಜನೆಯನ್ನು ಎಲ್ಲ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ, ಜಿಲ್ಲಾ ಆಸ್ಪತ್ರೆಗಳಲ್ಲಿ ಫಸ್ಟ್ ರೆಫರಲ್ ಯುನಿಟ್ಗಳಲ್ಲಿ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅನುಷ್ಠಾನಕ್ಕೆ ತರಲಾಗುತ್ತದೆ.

ಯೋಜನೆಯಡಿ, ಬಹು ಆಯಾಮದ ಕಾರ್ಯತಂತ್ರವನ್ನು ಅಳವಡಿಸಿಕೊಂಡು ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸುವುದು, ಅಗತ್ಯ ಸಾಧನಗಳ ಲಭ್ಯತೆಯನ್ನು ಖಾತ್ರಿಪಡಿಸುವುದು, ಸಾಕಷ್ಟು ಮಾನವ ಸಂಪನ್ಮೂಲ ಒದಗಿಸುವುದು, ಆರೋಗ್ಯ ಕಾರ್ಯಕರ್ತೆಯರ ಸಾಮಥ್ರ್ಯ ವೃದ್ಧಿ ಮತ್ತು ಹೆರಿಗೆ ಕೊಠಡಿಯಲ್ಲಿ ವಿವಿಧ ಪ್ರಕ್ರಿಯೆಗಳ ಗುಣಮಟ್ಟವನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ.

ಮಹತ್ವ

  • ಇದು ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಹೆರಿಗೆಯಾಗುವ ಎಲ್ಲ ಗರ್ಭಿಣಿ ಮಹಿಳೆಯರಿಗೆ ಮತ್ತು ನವಜಾತ ಶಿಶುಗಳಿಗೆ ಪ್ರಯೋಜನಕಾರಿಯಾಗಲಿದೆ.
  • ಇದು ಹೆರಿಗೆ ಸಾವಿನ ಮತ್ತು ನವಜಾತ ಶಿಶುಗಳ ಸಾವಿನ ಸಾಧ್ಯತೆ ಮತ್ತು ಸಾವಿನ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.
  • ಇದು ಹೆರಿಗೆ ಸಂದರ್ಭದಲ್ಲಿ ಗುಣಮಟ್ಟದ ಆರೈಕೆಯನ್ನು ಖಾತ್ರಿಪಡಿಸುತ್ತದೆ ಹಾಗು ಹೆರಿಗೆಯಾದ ತಕ್ಷಣದ ಅವಧಿಯಲ್ಲಿ ಕೂಡಾ ಗುಣಮಟ್ಟದ ಸೇವೆ ಲಭ್ಯವಾಗುವಂತೆ ಮಾಡುತ್ತದೆ. ಮೂಲಕ ಫಲಾನುಭವಿಗಳ ತೃಪ್ತಿಯನ್ನು ಹೆಚ್ಚಿಸಲಿದೆ.
  • ಇದು ಸರ್ಕಾರಿ ಆರೋಗ್ಯ ಸೌಲಭ್ಯಗಳನ್ನು ಬಯಸುವ ಎಲ್ಲ ಗರ್ಭಿಣಿ ಮಹಿಳೆಯರ ಗೌರವಯುತ ಹೆರಿಗೆ ಆರೈಕೆಯನ್ನು ಖಚಿತಪಡಿಸುತ್ತದೆ.

ಲಕ್ಷ್ಯ ಪ್ರಮಾಣಪತ್ರ

ನ್ಯಾಷನಲ್ ಕ್ವಾಲಿಟಿ ಅಶ್ಶೂರೆನ್ಸ್ ಸ್ಟ್ಯಾಂಡಡ್ರ್ಸ್ (ರಾಷ್ಟ್ರೀಯ ಗುಣಮಟ್ಟ ಖಾತ್ರಿ ಮಾನದಂಡ) ಸಂಸ್ಥೆಯು ಹೆರಿಗೆ ಕೊಠಡಿ ಮತ್ತು ಹೆರಿಗೆ ಶಸ್ತ್ರಚಿಕಿತ್ಸಾ ಘಟಕದ ಗುಣಮಟ್ಟ ಸುಧಾರಣೆಯ ಮೇಲೆ ನಿಗಾ ವಹಿಸಲಿದೆ. ಶೇಕಡ 70ರಷ್ಟು ಅಂಕವನ್ನು ಸಾಧಿಸುವ ಪ್ರತಿಯೊಂದು ಸೌಲಭ್ಯಗಳಿಗೆ ಎನ್ಕ್ಯೂಎಎಸ್ ಸಂಸ್ಥೆ ಲಕ್ಷ್ಯ ಪ್ರಮಾಣಪತ್ರವನ್ನು ನೀಡಲಿದೆ.

ಶೇಕಡ 90, ಶೇಕಡ 80 ಮತ್ತು ಶೇಕಡ 70ಕ್ಕಿಂತ ಅಧಿಕ ಅಂಕಗಳನ್ನು ಗಳಿಸುವ ಸೌಲಭ್ಯಗಳಿಗೆ ಪ್ಲಾಟಿನಂ, ಚಿನ್ನ ಹಾಗೂ ಬೆಳ್ಳಿಯ ಫಲಕಗಳನ್ನು ಕ್ರಮವಾಗಿ ನೀಡಲಾಗುತ್ತದೆ. ಎನ್ಕ್ಯೂಎಎಸ್ ಪ್ರಮಾಣಪತ್ರವನ್ನು ಗಳಿಸುವ ಸೌಲಭ್ಯಗಳಿಗೆ ವ್ಯಾಖ್ಯಾನಿತ ಗುಣಮಟ್ಟ ಸೂಚಕಗಳು ಮತ್ತು ಶೇಕಡ 80ಕ್ಕಿಂತ ಅಧಿಕ ಫಲಾನುಭವಿಗಳ ತೃಪ್ತಿದಾಯಕ ಸೇವೆಗಳಿಗೆ ಹಣಕಾಸು ಉತ್ತೇಜಕಗಳನ್ನು ಕೂಡಾ ಒದಗಿಸಲಾಗುವುದು.

Comment