IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಭಾರತದ ರಫ್ತು ಸಬ್ಸಿಡಿ ಯೋಜನೆ ಬಗ್ಗೆ ಅಮೆರಿಕ ದಾವೆ

ಭಾರತದ ರಫ್ತು ಸಬ್ಸಿಡಿ ಯೋಜನೆ ಬಗ್ಗೆ ಅಮೆರಿಕ ದಾವೆ

ಅಮೆರಿಕದ ವ್ಯಾಪಾರ ಪ್ರತಿನಿಧಿಗಳು ಭಾರತದ ರಫ್ತು ಸಬ್ಸಿಡಿ ನೀತಿಯ ಬಗ್ಗೆ ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಓ)ಯಲ್ಲಿ ದಾವೆ ಹೂಡಿದ್ದಾರೆ. ಕ್ರಮಗಳು ತನ್ನ ಉತ್ಪಾದನಾ ವಲಯಕ್ಕೆ ಹಾನಿಕಾರಕವಾಗಿದ್ದು, ಉದ್ಯೋಗಿಗಳಿಗೂ ಮಾರಕವಾಗಿದೆ. ಏಕೆಂದರೆ ಇದು ಉತ್ಪಾದನಾ ವಲಯದಲ್ಲಿ ಅಸಮಾನತೆಗೆ ಕಾರಣವಾಗುತ್ತದೆ ಎನ್ನುವ ವಾದವನ್ನು ಅಮೆರಿಕ ವಿಶ್ವ ವ್ಯಾಪಾರ ಸಂಸ್ಥೆಯ ಮುಂದೆ ಮಂಡಿಸಿದೆ.

ಪ್ರಮುಖ ಅಂಶಗಳು

ಅಮೆರಿಕದ ವ್ಯಾಪಾರ ಪ್ರತಿನಿಧಿಗಳ ಪ್ರಕಾರ, ಕನಿಷ್ಠ ಆರು ಭಾರತೀಯ ಯೋಜನೆಗಳು ಭಾರತೀಯ ರಪ್ತುದಾರರಿಗೆ ಹಣಕಾಸು ಪ್ರಯೋಜನವನ್ನು ಸಬ್ಸಿಡಿ ರೂಪದಲ್ಲಿ ನೀಡುತ್ತವೆ. ಇದರಿಂದ ಭಾರತೀಯ ರಫ್ತುದಾರರು ತಮ್ಮ ಸರಕುಗಳನ್ನು ಹೆಚ್ಚು ಅಗ್ಗವಾಗಿ ಮಾರಾಟ ಮಾಡಲು ಸಾಧ್ಯವಾಗುತ್ತದೆ. ಇದು ಅಮರಿಕದ ಉದ್ಯೋಗಿಗಳಿಗೆ ಮತ್ತು ಉತ್ಪಾದಕರಿಗೆ ಮಾರಕವಾಗಿ ಪರಿಣಮಿಸಿದೆ. ಯೋಜನೆಗಳೆಂದರೆ ಮರ್ಚೆಂಡೈಸ್ ಎಕ್ಸ್ಪೋರ್ಟ್ ಫ್ರಮ್ ಇಂಡಿಯಾ ಸ್ಕೀಮ್ (ಎಂಇಐಎಸ್), ರಫ್ತು ನಿರ್ದೇಶಿತ ಘಟಕಗಳ ಯೋಜನೆ ಮತ್ತು ವಲಯ ನಿರ್ದಿಷ್ಟ ಯೋಜನೆಗಳು, ಇದರಲ್ಲಿ ಮುಖ್ಯವಾಗಿ ಎಲೆಕ್ಟ್ರಾನಿಕ್ಸ್ ಹಾರ್ಡ್ವೇರ್ ಟೆಕ್ನಾಲಜಿ ಪಾರ್ಕ್ ಯೋಜನೆ, ವಿಶೇಷ ವಿತ್ತ ವಲಯಗಳು, ರಫ್ತು ಉತ್ತೇಜನ ಬಂಡವಾಳ ಸರಕು ಯೋಜನೆ (ಇಪಿಸಿಜಿಎಸ್) ಮತ್ತು ರಫ್ತುದಾರರಿಗೆ ಸುಂಕ ಮುಕ್ತ ರಫ್ತು ಯೋಜನೆ ಸೇರಿವೆ.

ಯೋಜನೆಗಳ ಮೂಲಕ ಭಾರತವು ಕೆಲ ಸುಂಕಗಳು, ತೆರಿಗೆಗಳು ಮತ್ತು ಶುಲ್ಕಗಳಿಂದ ರಫ್ತುದಾರರಿಗೆ ವಿನಾಯ್ತಿ ನಿಡಿದ್ದು, ಇದು ಅಸಂಖ್ಯಾತ ರಫ್ತುದಾರರಿಗೆ ಲಾಭವಾಗುತ್ತಿದೆ. ಇದರಲ್ಲಿ ಮುಖ್ಯವಾಗಿ ಉಕ್ಕು ಉತ್ಪನ್ನಗಳ ಉತ್ಪಾದಕರು, ಔಷಧಗಳು, ರಾಸಾಯನಿಕಗಳು, ಮಾಹಿತಿ ತಂತ್ರಜ್ಞಾನ ಉತ್ಪನ್ನಗಳು, ಜವಳಿ ಮತ್ತು ಸಿದ್ಧ ಉಡುಪು ಸೇರುತ್ತವೆ.

ಮೊದಲು ವಿಶ್ವವ್ಯಾಪಾರ ಸಂಸ್ಥೆಯ ಅಭಿವೃದ್ಧಿಶೀಲ ದೇಶಗಳಿಗಾಗಿ ಇರುವ ಸೀಮಿತ ವಿನಾಯ್ತಿಗಳ ನಿಯಮಾವಳಿಯಡಿ ಭಾರತ ಇತ್ತು. ಇದರ ಅನ್ವಯ, ನಿರ್ದಿಷ್ಟ ದೇಶಗಳು ನಿರ್ದಿಷ್ಟ ಆರ್ಥಿಕ ಮೈಲುಗಲ್ಲನ್ನು ಸಾಧಿಸುವ ವರೆಗೆ ರಫ್ತು ಸಬ್ಸಿಡಿಗಳನ್ನು ನೀಡಲು ಅವಕಾಶವಿದೆ. ಆದರೆ ಭಾರತ ಈಗಾಗಲೇ 2015ರಲ್ಲಿ ಮಟ್ಟವನ್ನು ಮೀರಿದೆ. ಭಾರತದ ವಿನಾಯ್ತಿ ಅವಧಿ ಅನೂರ್ಜಿತವಾಗಿದೆ. ಆದರೆ ಭಾರತ ರಫ್ತು ಸಬ್ಸಿಡಿಗಳನ್ನು ಇದುವರೆಗೆ ಹಿಂದಕ್ಕೆ ಪಡೆದಿಲ್ಲ. ಇದರ ಬದಲು ಸಬ್ಸಿಡಿಯ ಗಾತ್ರ ಮತ್ತು ವ್ಯಾಪ್ತಿಯನ್ನು ಹೆಚ್ಚಿಸಿದೆ ಎಂದು ಅಮೆರಿಕ ವಾದಿಸಿದೆ.

ಹಿನ್ನೆಲೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಹಲವು ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊಂಡಿದ್ದು, ವ್ಯಾಪಾರ ಕೊರತೆಯನ್ನು ವಾರ್ಷಿಕ 800 ಶತಕೋಟಿ ಡಾಲರ್ಗೆ ಇಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಇದಕ್ಕಾಗಿ ಅಮೆರಿಕನ್ ಆಡಳಿತವು ವ್ಯಾಪಾರ ಪಾಲುದಾರರನ್ನು ಹೊಣೆಗಾರರನ್ನಾಗಿ ಮಾಡಿದ್ದು, ಅಮೆರಿಕದ ಹಕ್ಕುಗಳನ್ನು ಕಟ್ಟುನಿಟ್ಟಾಗಿ ಚಲಾಯಿಸುತ್ತಿದೆ ಹಾಗೂ ವಿವಿಧ ವ್ಯಾಪಾರ ಒಪ್ಪಂದಗಳ ಅನ್ವಯ ನ್ಯಾಯಸಮ್ಮತ ಮತ್ತು ಪರಸ್ಪರ ಲಾಭದ ವ್ಯಾಪಾರದ ಮೂಲಕ ಗುರಿ ಸಾಧಿಸಲು ವಿಶ್ವ ವ್ಯಾಪಾರ ಸಂಸ್ಥೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಇದಕ್ಕೂ ಮುನ್ನ 2018 ಮಾರ್ಚ್ ತಿಂಗಳಲ್ಲಿ ಟ್ರಂಪ್ ಆಡಳಿತವು ಭಾರತದಿಂದ ಆಮದಾಗುವ ಉಕ್ಕು ಮತ್ತು ಅಲ್ಯೂಮೀನಿಯಂ ಮೇಲೆ ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ, ಶೇಕಡ 25 ಹಾಗೂ 10ರಷ್ಟು ಸುಂಕವನ್ನು ವಿಧಿಸಿತ್ತು.

Comment