IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಮಾಹಿತಿ ತಂತ್ರಜ್ಞಾನ & ಎಲೆಕ್ಟ್ರಾನಿಕ್ಸ್ ಸಹಕಾರ ಕುರಿತ ಭಾರತ- ಶ್ರೀಲಂಕಾ ಒಪ್ಪಂದಕ್ಕೆ ಒಪ್ಪಿಗೆ

ಮಾಹಿತಿ ತಂತ್ರಜ್ಞಾನ & ಎಲೆಕ್ಟ್ರಾನಿಕ್ಸ್ ಸಹಕಾರ ಕುರಿತ ಭಾರತ- ಶ್ರೀಲಂಕಾ ಒಪ್ಪಂದಕ್ಕೆ ಒಪ್ಪಿಗೆ

ಮಾಹಿತಿ ತಂತ್ರಜ್ಞಾನ & ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಹೆಚ್ಚಿಸುವ ಕುರಿತು ಭಾರತ ಹಾಗೂ ಶ್ರೀಲಂಕಾ ಮಾಡಿಕೊಂಡಿರುವ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಒಪ್ಪಂದಕ್ಕೆ 2018 ಜನವರಿಯಲ್ಲಿ ಸಹಿ ಮಾಡಲಾಗಿತ್ತು. ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಖಾತೆ ಸಚಿವ ರವಿಶಂಕರ್ ಪ್ರಸಾದ್ ಅವರು ಶ್ರೀಲಂಕಾಗೆ ಭೇಟಿ ನೀಡಿದ ಅವಧಿಯಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಪ್ರಮುಖ ಅಂಶಗಳು

ಒಪ್ಪಂದವು - ಆಡಳಿತ, - ಸಾರ್ವಜನಿಕ ಸೇವಾ ವಿತರಣೆ, ಎಂ-ಆಡಳಿತ, ಸೈಬರ್ ಭದ್ರತೆ, ಸಾಫ್ಟ್ವೇರ್ ತಂತ್ರಜ್ಞಾನ ಪಾರ್ಕ್ಗಳು, ಸ್ಟಾರ್ಟ್ ಅಪ್ ಪೂರಕ ವಾತಾವರಣ ನಿರ್ಮಾಣ ಮತ್ತಿತರ ಕ್ಷೇತ್ರಗಳಲ್ಲಿ ನಿಕಟವಾದ ಸಹಕಾರವನ್ನು ಉತ್ತೇಜಿಸಲು ನೆರವಾಗಲಿದೆ. ಇದು ಐಟಿಸಿ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸಲು ಬಿ2ಬಿ ಮತ್ತು ಜಿ2ಜಿ ಕ್ಷೇತ್ರಗಳಲ್ಲಿ ಅನುವು ಮಾಡಿಕೊಡಲಿದೆ. ಇದನ್ನು ಮಾಹಿತಿ ತಂತ್ರಜ್ಞಾನ ಹಾಗೂ ಇಲೆಕ್ಟ್ರಾನಿಕ್ಸ್ ಕುರಿತ ಕಾರ್ಯಪಡೆಯನ್ನು ರೂಪಿಸುವ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ. ಕಾರ್ಯಪಡೆಯಲ್ಲಿ ಎರಡೂ ದೇಶಗಳ ಪ್ರತಿನಿಧಿಗಳು ಸದಸ್ಯರಾಗಿ ಇರುತ್ತಾರೆ.

ಹಿನ್ನೆಲೆ

ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಐಸಿಟಿಯ ಪ್ರಮುಖ ಮತ್ತು ರೂಪುಗೊಳ್ಳುತ್ತಿರುವ ಕ್ಷೇತ್ರಗಳಲ್ಲಿ ಅಂತರರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸುವ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ದ್ವಿಪಕ್ಷೀಯ ಹಾಗೂ ಪ್ರಾದೇಶಿಕ ಸಹಕಾರ ಚೌಕಟ್ಟಿನ ಮೂಲಕ ಇದನ್ನು ಸಾಧಿಸುತ್ತವೆ. ಕಾರ್ಯಸೂಚಿಯಡಿ, ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಇತರ ದೇಶಗಳ ಸಂಘ ಸಂಸ್ಥೆಗಳ ಜತೆ ಒಪ್ಪಂದ ಹಾಗೂ ಒಡಂಬಡಿಕೆಗಳನ್ನು ಮಾಡಿಕೊಂಡು ಸಹಕಾರವನ್ನು ಉತ್ತೇಜಿಸಲು ಮತ್ತು ಮಾಹಿತಿ ವಿನಿಮಯಕ್ಕೆ ಅನುವು ಮಾಡಿಕೊಡುತ್ತದೆ.

Comment