IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಭಾರತ- ಇರಾನ್: ದ್ವಿಗುಣ ತೆರಿಗೆ ತಪ್ಪಿಸುವ ಒಪ್ಪಂದಕ್ಕೆ ಅಸ್ತು

ಭಾರತ- ಇರಾನ್: ದ್ವಿಗುಣ ತೆರಿಗೆ ತಪ್ಪಿಸುವ ಒಪ್ಪಂದಕ್ಕೆ ಅಸ್ತು

ದ್ವಿಗುಣ ತೆರಗೆಯನ್ನು ತಪ್ಪಿಸುವ ಮತ್ತು ವಿತ್ತೀಯ ತಪ್ಪಿಸುವಿಕೆಯನ್ನು ತಡೆಯುವ ಸಂಬಂಧ ಭಾರತ ಹಾಗೂ ಇರಾನ್ ಮಾಡಿಕೊಂಡಿರುವ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದು ಭಾರತ ಹಾಗೂ ಇರಾನ್ಗಳಲ್ಲಿ ತೆರಿಗೆ ಕಳ್ಳತನವನ್ನು ತಡೆಯುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಒಪ್ಪಂದವು ಭಾರತ ಇತರ ದೇಶಗಳ ಜತೆ ಮಾಡಿಕೊಂಡ ಬಗೆಯ ಒಪ್ಪಂದಕ್ಕೆ ಅನುಗುಣವಾಗಿರುತ್ತದೆ.

ಪ್ರಮುಖ ಅಂಶಗಳು

ಒಪ್ಪಂದವು ಉಭಯ ದೇಶಗಳ ನಡುವೆ ಹೂಡಿಕೆ, ತಂತ್ರಜ್ಞಾನ ಮತ್ತು ಉದ್ಯೋಗಿಗಳ ಸುಲಲಿತ ವರ್ಗಾವಣೆಗೆ ಉತ್ತೇಜನ ನೀಡಲಿದೆ. ಜತೆಗೆ ದ್ವಿಗುಣ ತೆರಿಗೆಯನ್ನು ತಪ್ಪಿಸುವ ಉದ್ದೇಶ ಹೊಂದಿದೆ. ಇದು ಉಭಯ ದೇಶಗಳ ನಡುವೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡುತ್ತದೆ ಹಾಗೂ ಇತ್ತೀಚಿನ ಅಂತರರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಒಪ್ಪಂದ ಮಾಡಿಕೊಂಡ ದೇಶಗಳು ಮಾಹಿತಿ ವಿನಿಮಯ ಮಾಡಿಕೊಳ್ಳುತ್ತವೆ. ಇದು ತೆರಿಗೆ ವಿಚಾರದಲ್ಲಿ ಪಾರದರ್ಶಕತೆಯನ್ನು ಸುಧಾರಿಸುವುದು ಮಾತ್ರವಲ್ಲದೇ, ತೆರಿಗೆ ಕಳ್ಳತನವನ್ನು ಮತ್ತು ತೆರಿಗೆ ತಪ್ಪಿಸುವಿಕೆಯನ್ನು ತಡೆಯುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ಇದು ಜಿ-20 ಒಸಿಇಡಿ ಮೂಲ ಸವಕಳಿ ಮತ್ತು ಲಾಭ ವರ್ಗಾವಣೆ (ಬಿಇಪಿಎಸ್) ಯೋಜನೆಯ ಕನಿಷ್ಠ ಮಾನದಂಡಗಳಿಗೆ ಸಂಬಂಧಿಸಿದ ಒಪ್ಪಂದದ ಅಂಶಗಳಿಗೆ ಅನುಗುಣವಾಗಿರುತ್ತದೆ. ಇದರಲ್ಲಿ ಭಾರತ ಕೂಡಾ ಸಮಾನ ಹಿನ್ನೆಲೆಯ ಪಾಲುದಾರ ದೇಶವಾಗಿದೆ.

ಹಿನ್ನೆಲೆ

ಭಾರತದ ಆದಾಯ ತೆರಿಗೆ ಕಾಯ್ದೆ- 1961 ಸೆಕ್ಷನ್ 90 ಅನ್ವಯ ಕೇಂದ್ರ ಸರ್ಕಾರ, ಇತರ ದೇಶಗಳ ಜತೆ ಅಥವಾ ನಿರ್ದಿಷ್ಟಪಡಿಸಿದ ಪ್ರಾಂತ್ಯಗಳ ಜತೆ ಒಪ್ಪಂದ ಮಾಡಿಕೊಳ್ಳಲು ಅವಕಾಶವಿದ್ದು, ದ್ವಿಗುಣ ತೆರಿಗೆ ತಪ್ಪಿಸುವುದು ಮತ್ತು ತೆರಿಗೆ ಕಳ್ಳತನ ಮತ್ತು ತೆರಿಗೆ ತಪ್ಪಿಸುವಿಕೆ ಬಗೆಗಿನ ಮಾಹಿತಿಗಳನ್ನು ಒಪ್ಪಂದ ಮಾಡಿಕೊಂಡ ದೇಶದ ಜತೆ ವಿನಿಮಯ ಮಾಡಿಕೊಳ್ಳಬಹುದಾಗಿದೆ.

Comment