IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಯೂರಿಯಾ ಸಬ್ಸಿಡಿ ಯೋಜನೆ ಮುಂದುವರಿಕೆಗೆ ಸಿಸಿಇಎ ಒಪ್ಪಿಗೆ

ಯೂರಿಯಾ ಸಬ್ಸಿಡಿ ಯೋಜನೆ ಮುಂದುವರಿಕೆಗೆ ಸಿಸಿಇಎ ಒಪ್ಪಿಗೆ

ಕೇಂದ್ರ ಸಚಿವ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿ (ಸಿಸಿಇಎ) ಯೂರಿಯಾ ಸಬ್ಸಿಡಿ ಯೋಜನೆಯನ್ನು ಮುಂದುವವರಿಸಲು ಒಪ್ಪಿಗೆ ನೀಡಿದೆ. ಸಮಿತಿಯ ಒಪ್ಪಿಗೆಯಿಂದಾಗಿ ಯೋಜನೆ 2017ರಿಂದ 2020 ವರೆಗೆ ಮುಂದುವರಿಯಲಿದೆ. ಇದರ ಜತೆಗೆ ರಸಗೊಬ್ಬರ ಸಬ್ಸಿಡಿಯ ವಿತರಣೆಗೆ ನೇರ ಪ್ರಯೋಜನ ವರ್ಗಾವಣೆ ಯೋಜನೆ ಮುಂದುವರಿಯಲಿದೆ. ಕುರಿತು ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯದ ರಸಗೊಬ್ಬರ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಸಮಿತಿ ಒಪ್ಪಿಗೆ ನೀಡಿದೆ.

ಪ್ರಮುಖ ಅಂಶಗಳು

ಯೂರಿಯಾ ಸಬ್ಸಿಡಿ ಯೋಜನೆಯನ್ನು ಮುಂದುವರಿಸಿರುವುದರಿಂದ, ಯೂರಿಯಾ ಉತ್ಪಾದಕರಿಗೆ ಸಬ್ಸಿಡಿ ಮೊತ್ತವನ್ನು ಸಕಾಲಿಕವಾಗಿ ಪಾವತಿಸಲು ಸಾಧ್ಯವಾಗಲಿದೆ. ಇದರಿಂದಾಗಿ ರೈತರಿಗೆ ಶಾಸನಾತ್ಮಕ ನಿಯಂತ್ರಿತ ಬೆಲೆಯಲ್ಲಿ ಸೂಕ್ತ ಕಾಲಕ್ಕೆ ಯೂರಿಯಾ ಲಭ್ಯವಾಗಲಿದೆ. ರಸಗೊಬ್ಬರ ವಲಯದಲ್ಲಿ ಡಿಬಿಟಿ ಅನುಷ್ಠಾನಗೊಳಿಸುವುದರಿಂದ ರಸಗೊಬ್ಬರ ಕೃಷಿಯೇತರ ಬಳಕೆಗೆ ವಿಮುಖವಾಗುವುದನ್ನು ತಡೆಯಲು ಸಾಧ್ಯವಾಗಲಿದೆ ಹಾಗೂ ವಿವಿಧ ಹಂತಗಳ ಸೋರಿಕೆ ತಡೆಗೆ ಇದು ಪರಿಣಾಮಕಾರಿ ವಿಧಾನವಾಗಲಿದೆ.

ರಸಗೊಬ್ಬರ ವಲಯದಲ್ಲಿ ಡಿಬಿಟಿ

ರಸಗೊಬ್ಬರ ಇಲಾಖೆಯು ಡಿಇಟಿ ಯೋಜನೆಯನ್ನು ರಸಗೊಬ್ಬರ ವಲಯದಲ್ಲಿ ರಾಷ್ಟ್ರವ್ಯಾಪಿ ಜಾರಿಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ. ಡಿಬಿಟಿ ಯೋಜನೆ ಜಾರಿಗೆ ಬಂದ ಬಳಿಕ ಶೇಕಡ 100ರಷ್ಟು ಹಣವನ್ನು ರಸಗೊಬ್ಬರ ಕಂಪನಿಗಳಿಗೆ ರೈತರು ಯೂರಿಯಾ ಖರೀದಿಸುವಾಗ ವರ್ಗಾವಣೆಯಾಗಲಿದೆ. ರೈತರಿಗೆ ಸಬ್ಸಿಡಿ ದರದಲ್ಲಿ ಇದನ್ನು ಮಾರಾಟ ಮಾಡುವಾಗ ಸಬ್ಸಿಡಿ ಮೊತ್ತ ನೇರವಾಗಿ ಕಂಪನಿಗಳಿಗೆ ಪಾವತಿಯಾಗುತ್ತದೆ. ರಸಗೊಬ್ಬರ ವಲಯದಲ್ಲಿ ಸಬ್ಸಿಡಿಯ ಡಿಬಿಟಿ ಯೋಜನೆಯು ಇತರ ಯೋಜನೆಗಳಿಗೆ ಆರಂಭಿಸಿರುವ ಸಾಮಾನ್ಯ ಡಿಬಿಟಿ ಯೋಜನೆಗಿಂತ ತುಸು ಭಿನ್ನವಾಗಿದೆ. ಡಿಬಿಟಿ ಯೋಜನೆಯಡಿ, ಸಬ್ಸಿಡಿಯನ್ನು ನೇರವಾಗಿ ರೈತರಿಗೆ ವಿತರಿಸುವ ಬದಲು ರಸಗೊಬ್ಬರ ಕಂಪನಿಗಳಿಗೆ ವಿತರಿಸಲಾಗುತ್ತದೆ. ಚಿಲ್ಲರೆ ಮಾರಾಟಗಾರರು ರೈತರಿಗೆ ಯೂರಿಯಾ ಮಾರಾಟ ಮಾಡುವ ಅವಧಿಯಲ್ಲಿ ಕಂಪನಿಗಳಿಗೆ ಸಬ್ಸಿಡಿ ಮೊತ್ತ ನೇರವಾಗಿ ವರ್ಗಾವಣೆಯಾಗುತ್ತದೆ. ಸಬ್ಸಿಸಿಡಯನ್ನು ವೆಬ್ ಆಧರಿತ ಆನ್ಲೈನ್ ಸಮಗ್ರ ರಸಗೊಬ್ಬರ ನಿರ್ವಹಣೆ ವ್ಯವಸ್ಥೆ (ಐಎಫ್ಎಂಎಸ್) ಮೂಲಕ ರಸಗೊಬ್ಬರ ಕಂಪನಿಗಳು ಸೃಷ್ಟಿಸುವ ಕ್ಲೇಮ್ಗಳನ್ನು ಸಲ್ಲಿಸಿದ ಬಳಿಕ ಸಬ್ಸಿಡಿ ಕಂಪನಿಗಳಿಗೆ ಬಿಡುಗಡೆಯಾಗುತ್ತದೆ.

ಯೂರಿಯಾ ಸಬ್ಸಿಡಿ ಯೋಜನೆ

ಯೂರಿಯಾ ಸಬ್ಸಿಡಿಯು ಕೇಂದ್ರ ವಲಯದ ಯೋಜನೆಯ ಭಾಗವಾಗಿದ್ದು, ಕೇಂದ್ರ ಸರ್ಕಾರ ಇದಕ್ಕೆ ಸಂಪೂರ್ಣ ಆರ್ಥಿಕ ನೆರವು ಒದಗಿಸುತ್ತದೆ. ಇದಕ್ಕಾಗಿಯೇ ಬಜೆಟ್ ಅನುದಾನ ನಿಗದಿಪಡಿಸಲಾಗಿರುತ್ತದೆ. ಇದು ಆಮದು ಮಾಡಿಕೊಂಡ ಯೂರಿಯಾ ಪೂರೈಕೆಗೂ ಅನ್ವಯಿಸುತ್ತದೆ. ದೇಶದಲ್ಲಿ ಯೂರಿಯಾ ಬೇಡಿಕೆ ಮತ್ತು ದೇಶೀಯ ಯೂರಿಯಾ ಉತ್ಪಾದನೆ ಪ್ರಮಾಣದ ಅಂತರದ ಆಧಾರದಲ್ಲಿ ಆಮದು ಸಬ್ಸಿಡಿ ನೀಡಲಾಗುತ್ತದೆ. ಇದರಲ್ಲಿ ದೇಶದ ನಡುವೆ ಯೂರಿಯಾ ಸಾಗಾಟಕ್ಕೆ ತಗುಲುವ ಸಾಗಾಣಿಕೆ ವೆಚ್ಚದ ಸಬ್ಸಿಡಿ ಕೂಡಾ ಸೇರುತ್ತದೆ.

ಹಿನ್ನೆಲೆ

ರಾಸಾಯನಿಕ ಹಾಗೂ ರಸಗೊಬ್ಬರಗಳ ಬಳಕೆಯು ಭಾರತ ಆಹಾರಧಾನ್ಯ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಇದು ದೇಶದ ಕೃಷಿ ಕ್ಷೇತ್ರದ ಪ್ರಗತಿಗೆ ಪ್ರಮುಖವಾದ ಸಾಧನವಾಗಿದೆ. ಸುಸ್ಥಿರವಾದ ಕೃಷಿ ಪ್ರಗತಿಗೆ ಮತ್ತು ಸಮತೋಲಿತ ಪೌಷ್ಟಿಕಾಂಶದ ಅನ್ವಯಿಕೆಗಾಗಿ ರೈತರಿಗೆ ಶಾಸನಾತ್ಮಕ ನಿಯಂತ್ರಿತ ಬೆಲೆಯಲ್ಲಿ ಯೂರಿಯಾ ಲಭ್ಯವಾಗುವಂತೆ ವ್ಯವಸ್ಥೆ ಇದೆ.

ರಸಗೊಬ್ಬರ ಸಬ್ಸಿಡಿಯು ಪ್ರಮುಖವಾಗಿ, ಕೃಷಿ ದ್ವಾರಕ್ಕೆ ವಿತರಣೆ ಮಾಡಲಾದ ರಸಗೊಬ್ಬರದ ವೆಚ್ಚ ಮತ್ತು ರೈತರು ಪಾವತಿಸುವ ಗರಿಷ್ಠ ಮಾರಾಟ ಬೆಲೆಯ ನಡುವಿನ ವ್ಯತ್ಯಾಸವಾಗಿರುತ್ತದೆ. ಇದನ್ನು ಕೇಂದ್ರ ಸರ್ಕಾರ ರಸಗೊಬ್ಬರಗಳ ಉತ್ಪಾದಕರು/ ಆಮದುದಾರರಿಗೆ ನೀಡುತ್ತದೆ. ಪ್ರಸ್ತುತ 31 ಯೂರಿಯಾ ಉತ್ಪಾದನಾ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, 28 ಯೂರಿಯಾ ಉತ್ಪಾದನಾ ಘಟಕಗಳು ನೈಸರ್ಗಿಕ ಅನಿಲವನ್ನು ಫೀಡ್ಸ್ಟಾಕ್/ ಇಂಧನವಾಗಿ ಆಗಿ ಬಳಸುತ್ತಿದ್ದು, ಉಳಿದ ಮೂರು ಘಟಕಗಳು ನ್ಯಾಪ್ತಾವನ್ನು ಫೀಡ್ಸ್ಟಾಕ್ ಆಗಿ ಬಳಸುತ್ತಿವೆ.

Comment