IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಮರೀಷಿಯಸ್‍ನಲ್ಲಿ ವಿಶ್ವ ಹಿಂದಿ ಕಾರ್ಯಾಲಯ ಉದ್ಘಾಟನೆ

ಮರೀಷಿಯಸ್‍ನಲ್ಲಿ ವಿಶ್ವ ಹಿಂದಿ ಕಾರ್ಯಾಲಯ ಉದ್ಘಾಟನೆ

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವಿಶ್ವ ಹಿಂದಿ ಕಾರ್ಯಾಲಯ ಕಟ್ಟಡವನ್ನು ಮರೀಷಿಯಸ್ ಪೋರ್ಟ್ ಲೂಯಿಸ್ನಲ್ಲಿ ಉದ್ಘಾಟಿಸಿದರು. ಇವರು ಇದೇ ಸಂದರ್ಭದಲ್ಲಿ ಕಾರ್ಯಾಲಯದ ಲೋಗೊ ಬಿಡುಗಡೆ ಮಾಡಿದರು. ಇದರ ಜತೆಗೆ ಆರಂಭಿಕ ಡಿಜಿಟಲ್ ಕಲಿಕಾ ಯೋಜನೆಗೂ ಸಂದರ್ಭದಲ್ಲಿ ಚಾಲನೆ ನೀಡಿದ ರಾಷ್ಟ್ರಪತಿಗಳು, ಸಾಮಾಜಿಕ ಗೃಹನಿರ್ಮಾಣ ಯೋಜನೆಗೆ ಅಡಿಗಲ್ಲು ಹಾಕಿದರು. ಇದೇ ಸಂದರ್ಭದಲ್ಲಿ ರಾಷ್ಟ್ರಪತಿಗಳು ಭಾರತೀಯ ನೆರವಿನಲ್ಲಿ ನಿರ್ಮಾಣವಾಗುವ ಇಎನ್ ಆಸ್ಪತ್ರೆಗೂ ಶಿಲಾನ್ಯಾಸ ಮಾಡಿದರು.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮರೀಷಿಯಸ್ ಮತ್ತು ಮಡಗಾಸ್ಕರ್ ಹೀಗೆ ಎರಡು ದೇಶಗಳ ತಮ್ಮ ಪ್ರವಾಸದ ಮೊದಲ ಹಂತದಲ್ಲಿ ಮರೀಷಿಯಸ್ಗೆ ಭೇಟಿ ನೀಡಿದ್ದಾರೆ. ಬಳಿಕ ರಾಷ್ಟ್ರಪತಿಗಳು ಮಡಗಾಸ್ಕರ್ಗೆ ಭೇಟಿ ನೀಡಲಿದ್ದಾರೆ. ಭೇಟಿಯೊಂದಿಗೆ ಆಫ್ರಿಕನ್ ದ್ವೀಪದೇಶಕ್ಕೆ ಭೇಟಿ ನೀಡಿದ ಭಾರತದ ಪ್ರಪ್ರಥಮ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ವಿಶ್ವ ಹಿಂದಿ ಕಾರ್ಯಾಲಯ

* ವಿಶ್ವ ಹಿಂದಿ ಕಾರ್ಯಾಲಯದ ಸಂಪೂರ್ಣ ಖರ್ಚು ವೆಚ್ಚಗಳನ್ನು ಭಾರತ ಸರ್ಕಾರ ನಿಭಾಯಿಸುತ್ತದೆ. ಇದಕ್ಕಾಗಿ ವಾರ್ಷಿಕ 33 ಕೋಟಿ ರೂಪಾಯಿ ಅನುದಾನ ನೀಡುತ್ತದೆ. ಯೋಜನೆಗೆ ಭೂಮಿಯನ್ನು ಮರೀಷಿಯಸ್ ಸರ್ಕಾರ ಒದಗಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2015ರಲ್ಲಿ ಮರೀಷಿಯಸ್ಗೆ ಭೇಟಿ ನೀಡಿದ್ದಾಗ, ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು.

* ಕಾರ್ಯಾಲಯದ ಪ್ರಮುಖ ಉದ್ದೇಶವೆಂದರೆ, ಹಿಂದಿಭಾಷೆಯನ್ನು ಜನಸಾಮಾನ್ಯರ ಭಾಷೆಯಾಗಿ ಪ್ರಸ್ತುತಪಡಿಸುವುದು. ವಿಶ್ವದ ಮುಂದೆ ಇದನ್ನು ಜನಭಾಷೆಯಾಗಿ ಬಿಂಬಿಸುವ ನಿಟ್ಟಿನಲ್ಲಿ ಕಾರ್ಯಾಲಯ ಕಾರ್ಯ ನಿರ್ವಹಿಸಲಿದೆ. ಭಾರತ ಹಾಗೂ ಮರೀಷಿಯಸ್ ಸಂಸ್ಕøತಿ ಮತ್ತು ಸಮಾಜ ನಿರ್ಮಾಣದಲ್ಲಿ ಹಿಂದಿ ಭಾಷೆ ಪ್ರಮುಖ ಪಾತ್ರವನ್ನು ವಹಿಸಿದೆ. ಮರೀಷಿಯಸ್ನಲ್ಲಿರುವ ಭಾರತೀಯ ಮೂಲದ ಜನರು ಭಾಗದಲ್ಲಿ ಹಿಂದಿ ಪಸರಿಸುವಲ್ಲಿ ಗಣನೀಯ ಕೊಡುಗೆ ನೀಡಿದ್ದಾರೆ.

Comment