IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಭಾರತ- ಇಂಗ್ಲೆಂಡ್ ಜಂಟಿ ತಂಡಕ್ಕೆ ಅಂತರ್ಜಲ ಸಂಶೋಧನಾ ಯೋಜನೆ

ಭಾರತ- ಇಂಗ್ಲೆಂಡ್ ಜಂಟಿ ತಂಡಕ್ಕೆ ಅಂತರ್ಜಲ ಸಂಶೋಧನಾ ಯೋಜನೆ

ಭಾರತ- ಇಂಗ್ಲೆಂಡ್ ಜಂಟಿ ತಂಡವು ನ್ಯೂಟನ್- ಭಾಭಾ ಅಂತರ್ಜಲ ಅರ್ಸೆನಿಕ್ ಸಂಶೋಧನಾ ಯೋಜನೆಗೆ ನಿಧಿಯನ್ನು ಗೆದ್ದಿದೆ. ಜಂಟಿ ತಂಡ ಗಂಗಾ ನದಿ ಕಣಿವೆ ಪ್ರದೇಶದಲ್ಲಿ ಅಂತರ್ಜಲ ಅರ್ಸೆನಿಕ್ ಸಂಶೋಧನೆಯನ್ನು ಕೈಗೊಳ್ಳಲಿದೆ. ಯೋಜನೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕೈಗೆತ್ತಿಕೊಂಡಿದ್ದು, ಇಂಗ್ಲೆಂಡಿನ ನೈಸರ್ಗಿಕ ಪರಿಸರ ಸಂಶೋಧನಾ ಮಂಡಳಿ (ಎನ್ಇಆರ್ಸಿ) ಇದಕ್ಕೆ ಸಹಭಾಗಿತ್ವ ನೀಡಿದೆ. ಇದು ವಿಷಕಾರಿ ಅಂಶಗಳಿಂದ ಹಾನಿಗೀಡಾಗಿರುವ ಗಂಗಾನದಿ ಕಣಿವೆ ಪ್ರದೇಶ ಎದುರಿಸುತ್ತಿರುವ ಜಲಸಂಬಂಧಿ ಸವಾಲುಗಳಿಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಸಂಶೋಧನೆ ಕೈಗೊಳ್ಳಲಿದೆ.

ಪ್ರಮುಖ ಅಂಶಗಳು

  • ಭಾರತೀಯ ತಂಡವು ಖರಗಪುರ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈಡ್ರಾಲಜಿ, ಐಐಟಿ ರೂರ್ಕಿ ಮತ್ತು ಪಾಟ್ನಾದ ಮಹಾವೀರ ಕ್ಯಾನ್ಸರ್ ಸಂಸ್ಥಾನ ಮತ್ತು ಸಂಶೋಧನಾ ಕೇಂದ್ರದ ಪ್ರತಿನಿಧಿಗಳನ್ನು ಒಳಗೊಂಡಿದೆ.
  • ಸಂಶೋಧನೆ ಕೈಗೊಳ್ಳುವ ಇಂಗ್ಲೆಂಡಿನ ತಂಡದಲ್ಲಿ ಪ್ರಮುಖವಾಗಿ ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯ, ಸಲ್ಫೋರ್ಡ್ ವಿಶ್ವವಿದ್ಯಾನಿಲಯ, ಬ್ರಿಟಿಷ್ ಭೌಗೋಳಿಕ ಸರ್ವೆ ಮತ್ತು ಬ್ರಿಮಿಂಗ್ಟನ್ ವಿಶ್ವವಿದ್ಯಾನಿಲಯದ ಪ್ರತಿನಿಧಿಗಳು ಇರುತ್ತಾರೆ.
  • ಯೋಜನೆಯ ಮುಖ್ಯವಾದ ಉದ್ದೇಶವೆಂದರೆ, ಅರ್ಸೆನಿಕ್ ವಿಷಪ್ರಾಶನದ ಸಮಸ್ಯೆಯ ಮೌಲ್ಯಮಾಪನ ಮಾಡುವುದು ಮತ್ತು ಮುಂದಿನ 25- 30 ವರ್ಷಗಳಲ್ಲಿ ಇದು ತೀವ್ರಗೊಳ್ಳಬಹುದಾದ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು, ಅಂತರ್ಜಲ ನಿರ್ವಹಣೆ ಕ್ರಮಗಳ ಮೇಲೆ ಇದು ಬೀರಬಹುದಾದ ಪರಿಣಾಮದ ಬಗ್ಗೆ ಅಧ್ಯಯನ ನಡೆಸಲಿದೆ. ಬಳಿಕ ಇದಕ್ಕೆ ಅನುಗುಣವಾದ ಜಲ ತಡೆ ತಂತ್ರಜ್ಞಾನವನ್ನು ಸಲಹೆ ಮಾಡಲಿದೆ. ಮೂರು ಸ್ಥಳಗಳಲ್ಲಿ ಅಧ್ಯಯನ ಕೈಗೊಳ್ಳಲಿದ್ದು, ಉತ್ತರ ಪ್ರದೇಶದ ಬಿಜನೋರ್ ಮತ್ತು ವಾರಾಣಾಸಿ ಹಾಗೂ ಪಶ್ಚಿಮ ಬಂಗಾಳದ ನಾದಿಯಾದಲ್ಲಿ ಅಧ್ಯಯನ ನಡೆಸಲಾಗುತ್ತದೆ.

ನ್ಯೂಟನ್-ಭಾಭಾ ನಿಧಿ

ಇದನ್ನು ಬ್ರಿಟನ್ ಕೌನ್ಸಿಲ್ ನೀಡುತ್ತದೆ. ಇದು ಭಾರತ ಹಾಗೂ ಇಂಗ್ಲೆಂಡಿನ ವೈಜ್ಞಾನಿಕ ಸಂಶೋಧನೆ ಮತ್ತು ಅನುಶೋಧನೆ ವಲಯವನ್ನು ಒಟ್ಟಿಗೆ ತರುವ ಉದ್ದೇಶವನ್ನು ಹೊಂದಿದೆ. ಇದು ಭಾರತದ ಆರ್ಥಿಕ ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಕ್ಷೇತ್ರದಲ್ಲಿ ಎದುರಾಗಿರುವ ಸವಾಲುಗಳಿಗೆ ಜಂಟಿ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಶ್ರಮಿಸಲಿದೆ.

ಆರ್ಸೆನಿಕ್ ಮಾಲಿನ್ಯ

  • ಆರ್ಸೆನಿಕ್ ಎನ್ನುವುದು ಭೂಮಿಯ ಪದರದಲ್ಲಿ ಇರುವ ಸಹಜವಾದ ಅಂಶವಾಗಿದೆ. ಇದು ಇಡೀ ವಾತಾವರಣದಲ್ಲಿ ವಿಸ್ತøತವಾಗಿ ವಿತರಣೆಯಾಗಿರುತ್ತದೆ. ಮುಖ್ಯವಾಗಿ ಗಾಳಿ, ನೀರು ಮತ್ತು ಭೂಮಿಯಲ್ಲಿ ಕೂಡಾ ಆರ್ಸೆನಿಕ್ ಅಂಶ ಕಂಡುಬರುತ್ತದೆ. ಇದರ ಅಜೈವಿಕ ರೂಪದಲ್ಲಿ ಇದು ತೀರಾ ವಿಷಕಾರಿಯಾಗಿದೆ. ಆರ್ಸೆನಿಕ್ ಮಾಲಿನ್ಯಯುಕ್ತ ನೀರನ್ನು ಕುಡಿಯುವ ಉದ್ದೇಶಕ್ಕೆ, ನೀರಾವರಿಗೆ, ಆಹಾರ ಬೆಳೆಗಳಿಗೆ ಮತ್ತು ಆಹಾರ ಸಿದ್ಧಪಡಿಸಲು ಬಳಸುವುದು, ಸಾರ್ವಜನಿಕ ಆರೋಗ್ಯಕ್ಕೆ ಅತಿದೊಡ್ಡ ಅಪಾಯ ಎನಿಸಿದೆ.
  • ಧೀರ್ಘಾವಧಿಯಲ್ಲಿ ಆರ್ಸೆನಿಕ್ಗೆ ತೆರೆದುಕೊಳ್ಳುವುದು ಅಂದರೆ ಕುಡಿಯುವ ನೀರು ಮತ್ತು ಆಹಾರದ ಮೂಲಕ ಆರ್ಸೆನಿಕ್ ಸೇವನೆಯು ತೀವ್ರ ಪ್ರಮಾಣದ ಆರ್ಸೆನಿಕ್ ವಿಷಪ್ರಾಶನಕ್ಕೆ ಕಾರಣವಾಗುತ್ತದೆ. ಇದು ಕ್ಯಾನ್ಸರ್, ಚರ್ಮದ ತುರಿಕೆ, ಅಭಿವೃದ್ಧಿಯ ಮೇಲೆ ಅಡ್ಡ ಪರಿಣಾಮ, ಹೃದ್ರೋಗ, ನರವಿಷಯುಕ್ತವಾಗುವುದು ಮತ್ತು ಮಧುಮೇಹಕ್ಕೆ ಕಾರಣವಾಗಬಹುದು.
  • ಆರ್ಸೆನಿಕ್ ಮಾಲಿನ್ಯವು ಗಂಗಾನದಿಯ ಮುಖಜಭೂಮಿ ಮತ್ತು ಜಲಾನಯನ ಪ್ರದೇಶಗಳಲ್ಲಿ ಅತಿದೊಡ್ಡ ಸಮಸ್ಯೆಯಾಗಿದೆ. ತೀರಾ ಆಳವಾದ ಕೊಳವೆಬಾವಿಗಳನ್ನು ಕುಡಿಯುವ ನೀರಿನ ಮತ್ತು ನೀರಾವರಿ ಉದ್ದೇಶಕ್ಕೆ ಬಳಸುವುದು ಇದಕ್ಕೆ ಮುಖ್ಯ ಕಾರಣ. ಕೊಳವೆಬಾವಿಗಳಲ್ಲಿನ ಅಂತರ್ಜಲ ಅತ್ಯಧಿಕ ಪ್ರಬಲತೆಯ ಆರ್ಸೆನಿಕ್ ಅಂಶವನ್ನು ಹೊಂದಿದ್ದು, ಆಳಕ್ಕೆ ಹೋದಷ್ಟೂ ವಿಷಕಾರಿ ಆರ್ಸೆನಿಕ್ ಅಂಶದ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ.
  • ಆರ್ಸೆನಿಕ್ ಅಂಶ ಕುಡಿಯುವ ನೀರಿನಲ್ಲಿ ಸೇರಿರುವ ಕಾರಣದಿಂದ ಉದ್ಭವಿಸುವ ಆರೋಗ್ಯ ಸಮಸ್ಯೆಗಳು, ಇದರಿಂದ ಮುಂದೆ ಆಗಬಹುದಾದ ಗಂಭೀರ ಪರಿಸ್ಥಿತಿಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿ, ಸೂಕ್ತ ಪರಿಹಾರ ಕ್ರಮಗಳನ್ನು ಸೂಚಿಸುವ ನಿಟ್ಟಿನಲ್ಲೂ ತಂಡ ಕಾರ್ಯ ನಿರ್ವಹಿಸಲಿದೆ.

Comment