IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ದೆಹಲಿ: ಟಿಬಿ ಕೊನೆ ಶೃಂಗಸಭೆ

ದೆಹಲಿ: ಟಿಬಿ ಕೊನೆ ಶೃಂಗಸಭೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕ್ಷಯರೋಗ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ ನೀಡಿದರು. ದೆಹಲಿಯಲ್ಲಿ ಆಯೋಜಿಸಿರುವ ಟಿಬಿ ಕೊನೆ ಶೃಂಗಸಭೆ ಉದ್ಘಾಟಿಸಿದ ಬಳಿಕ ವಿಶಿಷ್ಟ ಅಭಿಯಾನಕ್ಕೆ ಮೋದಿಯವರು ಚಾಲನೆ ನೀಡಿದರು.

ಶೃಂಗಸಭೆಯನ್ನು ಕೇಂದ್ರ ಆರೋಗ್ಯ ಸಚಿವಾಲಯ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್), ಆಗ್ನೇಯ ಏಷ್ಯಾ ಪ್ರಾದೇಶಿಕ ಕಚೇರಿ ಮತ್ತು ಸ್ಟಾಪ್ ಟಿಬಿ ಪಾರ್ಟ್ನರ್ಶಿಪ್ ಜಂಟಿ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಇದು 2018ರಲ್ಲಿ ವಿಶ್ವಸಂಸ್ಥೆಯಲ್ಲಿ ನಡೆಯುವ ಉನ್ನತ ಮಟ್ಟದ ಕ್ಷಯರೋಗ ಕುರಿತ ಸಭೆಗೆ ವೇದಿಕೆ ನಿರ್ಮಿಸಿಕೊಟ್ಟಿದೆ. ಸಭೆಯಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್ಜಿಎನ್) ಮೊಟ್ಟಮೊದಲ ಬಾರಿಗೆ ಕ್ಷಯ ರೋಗದ ಬಗ್ಗೆ ಚರ್ಚಿಸಲಾಗುತ್ತದೆ. ಎಲ್ಲ ದೇಶಗಳ ಮುಖಂಡರು ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಕ್ಷಯರೋಗದ ಸ್ಥಿತಿಗತಿ ಬಗ್ಗೆ ಚರ್ಚಿಸುವರು.

ಕ್ಷಯಮುಕ್ತ ಭಾರತ ಅಭಿಯಾನ

  • ಅಭಿಯಾನದ ಮುಖ್ಯ ಉದ್ದೇಶವೆಂದರೆ, ರಾಷ್ಟ್ರೀಯ ಆಯಕಟ್ಟಿನ ಯೋಜನೆ (ಎನ್ಎಸ್ಪಿ)ಯನ್ನು ಕ್ಷಯ ರೋಗ ನಿರ್ಮೂಲನೆಗಾಗಿ ವೈವಿಧ್ಯಮಯ ಚಟುವಟಿಕೆಗಳ ಮೂಲಕ ಮಿಷನ್ ರೀತಿಯಲ್ಲಿ ಜಾರಿಗೊಳಿಸುವುದು. ಇದಕ್ಕೆ ಮುಂದಿನ ಮೂರು ವರ್ಷಗಳಲ್ಲಿ 12 ಸಾವಿರ ಕೋಟಿ ರೂಪಾಯಿ ಅನುದಾನ ನೀಡಲಾಗುತ್ತದೆ.
  • ಇದು ಕ್ಷಯರೋಗವನ್ನು ನಿರ್ಮೂಲನೆ ಮಾಡಲು ಗಡುವನ್ನು ನಿಗದಿಪಡಿಸಿದ್ದು, ದೇಶದಿಂದ 2025 ಒಳಗಾಗಿ ನಿರ್ಮೂಲನೆ ಮಾಡಲು ಉದ್ದೇಶಿಸಿದೆ. ಇದು ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಉಲ್ಲೇಖಿಸಿದ ಗಡುವು ಆಗಿರುವ 2030ಕ್ಕಿಂತ ಐದು ವರ್ಷ ಮುಂಚಿತವಾಗಿಯೇ ದೇಶದಿಂದ ಕ್ಷಯರೋಗವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹಾಕಿಕೊಂಡಿದೆ.
  • ರಾಷ್ಟ್ರೀಯ ಆಯಕಟ್ಟಿನ ಯೋಜನೆಯ ಮುಖ್ಯವಾದ ಉದ್ದೇಶವೆಂದರೆ, ಅಭಿಯಾನದಡಿ ಪ್ರತಿಯೊಬ್ಬ ಕ್ಷಯರೋಗಿ ಕೂಡಾ ಗುಣಮಟ್ಟದ ರೋಗ ಪತ್ತೆ, ಚಿಕಿತ್ಸೆ ಮತ್ತು ಬೆಂಬಲ ಪಡೆಯಲು ಅಗತ್ಯ ಸೌಲಭ್ಯವನ್ನು ಒದಗಿಸಿಕೊಡುವುದು.
  • ಇದು ಬಹುಹಂತದ ದೃಷ್ಟಿಕೋನವನ್ನು ಅಳವಡಿಸಿಕೊಂಡಿದ್ದು, ಇದು ಖಾಸಗಿ ಆರೋಗ್ಯ ಸೇವೆ ಒದಗಿಸುವವರ ಬಳಿಗೆ ಕ್ಷಯರೋಗದ ಚಿಕಿತ್ಸೆ ಪಡೆಯಲು ಬರುವ ರೋಗಿಗಳನ್ನು ಕೂಡಾ ತಲುಪಲು ಹೆಚ್ಚಿನ ಒತ್ತು ನೀಡಲಿದೆ. ಇದರ ಜತೆಗೆ ಅಧಿಕ ಅಪಾಯ ಸಧ್ಯತೆಯ ಜನಸಂಖ್ಯೆಯಲ್ಲಿನ ಚಿಕಿತ್ಸೆ ಪಡೆಯದ ಕ್ಷಯರೋಗಿಗಳನ್ನು ತಲುಪಲು ಕೂಡಾ ಕಾರ್ಯಯೋಜನೆ ಹಾಕಿಕೊಂಡಿದೆ.
  • ಇಡೀ ಯೋಜನೆಯಲ್ಲಿ ರೋಗಿ ಕೇಂದ್ರಿತ ದೃಷ್ಟಿಕೋನವನ್ನು ಅಳವಡಿಸಿಕೊಂಡು, ರೋಗಿಗಳು ಚಿಕಿತ್ಸೆಗಾಗಿ ತಾವಾಗಿಯೇ ಮುಂದೆ ಬಾರದಿದ್ದರೂ, ಅವರಿಗೆ  ಚಿಕಿತ್ಸಾ ಸೌಲಭ್ಯ ಒದಗಿಸಲು ನಿರ್ಧರಿಸಿದೆ. ಇದರ ಜತೆಗೆ ಕ್ಷಯರೋಗಕ್ಕೆ ತುತ್ತಾಗುವ ಅಪಾಯ ಸಾಧ್ಯತೆಯ ಜನಸಂಖ್ಯಾ ಗುಂಪಿಗೆ ಚಿಕಿತ್ಸೆ ಒದಗಿಸಲು ಸಶಕ್ತ ಸಂಸ್ಥೆಗಳ ಜಾಲ ಮತ್ತು ಮಾನವ ಸಂಪನ್ಮೂಲವನ್ನು ಲಭ್ಯವಾಗುವಂತೆ ಮಾಡುವ ಮೂಲಕ ಅನುಷ್ಠಾನ ವ್ಯವಸ್ಥೆಯನ್ನು ಮುಖ್ಯವಾಹಿನಿಗೆ ತರಲು ಉದ್ದೇಶಿಸಿದೆ.

Comment