IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಶ್ರೇಷ್ಠ ಪೊಲೀಸ್ ತನಿಖೆಗಾಗಿ ಗೃಹಸಚಿವರ ಪದಕ

ಶ್ರೇಷ್ಠ ಪೊಲೀಸ್ ತನಿಖೆಗಾಗಿ ಗೃಹಸಚಿವರ ಪದಕ

ಪೊಲೀಸ್ ತನಿಖೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಪೊಲೀಸರಿಗೆ ಗೃಹಸಚಿವರ ಪದಕ ನೀಡುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅಪರಾಧಗಳ ತನಿಖೆ ಕ್ಷೇತ್ರದಲ್ಲಿ ಅತ್ಯುನ್ನತ ವೃತ್ತಿಪರ ಗುಣಮಟ್ಟವನ್ನು ಕಾಪಾಡುವ ಸಲುವಾಗಿ ಪ್ರಶಸ್ತಿ ಆರಂಭಿಸಲಾಗಿದೆ. ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಮತ್ತು ಕೇಂದ್ರೀಯ ತನಿಖಾ ಏಜೆನ್ಸಿಗಳ ಪೊಲೀಸರಿಗೆ ಇದು ಮೀಸಲಾಗಿರುತ್ತದೆ.

ಪ್ರಮುಖ ಅಂಶಗಳು

ಸಬ್ ಇನ್ಸ್ಪೆಕ್ಟರ್ ರ್ಯಾಂಕಿಂಗ್ನಿಂದ ಪೊಲೀಸ್ ಅಧೀಕ್ಷಕ ಹುದ್ದೆವರೆಗಿನ ಅಧಿಕಾರಿಗಳು ಗೌರವಕ್ಕೆ ಅರ್ಹತೆ ಹೊಂದಿರುತ್ತಾರೆ. ಪದಕ ವಿಜೇತರ ಹೆಸರುಗಳನ್ನು ಪ್ರತಿ ವರ್ಷದ ಆಗಸ್ಟ್ 15ರಂದು ಘೋಷಿಸಲಾಗುತ್ತದೆ. ಪ್ರಶಸ್ತಿ ವಿಜೇತ ಪೊಲೀಸ್ ಅಧಿಕಾರಿಗಳು ಗೃಹಸಚಿವರ ಸಹಿ ಇರುವ ಪ್ರಮಾಣಪತ್ರಗಳನ್ನು ಪಡೆಯುತ್ತಾರೆ ಮತ್ತು ಪದಕವನ್ನು ಪಡೆಯುತ್ತಾರೆ. ಇವರ ಹೆಸರುಗಳನ್ನು ಗಜೆಟ್ ಆಫ್ ಇಂಡಿಯಾದಲ್ಲಿ ಪ್ರಕಟಿಸಲಾಗುತ್ತದೆ.

ಬ್ಯೂರೊ ಆಫ್ ಪೊಲೀಸ್ ರೀಸರ್ಚ್ ಅಂಡ್ ಡೆವಲಪ್ಮೆಂಟ್, ಇದಕ್ಕೆ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರೀಯ ತನಿಖಾ ಸಂಸ್ಥೆಯಿಂದ ನಾಮನಿರ್ದೇಶನಗಳನ್ನು ಆಹ್ವಾನಿಸುತ್ತದೆ. ಎಡಿಜಿಪಿ ರ್ಯಾಂಕ್ ಅಧಿಕಾರಿಯ ರಾಜ್ಯಮಟ್ಟದ ಸಮಿತಿ ಹೆಸರುಗಳನ್ನು ಶಿಫಾರಸ್ಸು ಮಾಡುತ್ತದೆ. ಹೀಗೆ ಶಿಫಾರಸ್ಸು ಮಾಡಲಾದ ಹೆಸರುಗಳನ್ನು ಬ್ಯೂರೊ ಆಫ್ ಪೊಲೀಸ್ ರೀಸರ್ಚ್ ಅಂಡ್ ಡೆವಲಪ್ಮೆಂಟ್ (ಬಿಪಿಆರ್&ಡಿ) ಸ್ಕ್ರೀನಿಂಗ್ ಕಮಿಟಿ ಪರಿಷ್ಕರಿಸುತ್ತದೆ ಹಾಗೂ ಗೃಹಸಚಿವಾಲಯದ ಉನ್ನತಮಟ್ಟದ ಮಂಜೂರಾತಿ ಸಮಿತಿ ಇದನ್ನು ಅನುಮೋದಿಸುತ್ತದೆ.

ಕಳೆದ ಮೂರು ವರ್ಷಗಳ ಸರಾಸರಿ ಅಪರಾಧ ಮಾಹಿತಿಗಳ ಆಧಾರದಲ್ಲಿ ಒಟ್ಟು 162 ಪದಕಗಳನ್ನು ಪ್ರತಿ ವರ್ಷ ನೀಡಲಾಗುತ್ತದೆ. ಇವುಗಳಲ್ಲಿ 137 ಪದಕಗಳು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೊಲೀಸರಿಗೆ ಮೀಸಲಿದ್ದರೆ, ಉಳಿದ 25 ಪದಕಗಳು ಕೇಂದ್ರೀಯ ತನಿಖಾ ಸಂಸ್ಥೆಗಳಾದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ಕೇಂದ್ರೀಯ ತನಿಖಾ ಬ್ಯೋರೊ (ಸಿಬಿಐ) ಮತ್ತು ಮಾದಕವಸ್ತು ನಿಯಂತ್ರಣ ಬ್ಯೂರೊ (ಎನ್ಸಿಬಿ) ಅಧಿಕಾರಿಗಳಿಗೆ ಇರುತ್ತದೆ. ಇದರಲ್ಲಿ ಮಹಿಳಾ ತನಿಖಾಧಿಕಾರಿಗಳಿಗೆ ಪ್ರತ್ಯೇಕ ಕೋಟಾ ಇರುತ್ತದೆ.

ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ನಡುವೆ ಪದಕಗಳ ಹಂಚಿಕೆಯು, ಅವರು ದಾಖಲಿಸಿದ ಸರಾಸರಿ ಐಪಿಸಿ ಅಪರಾಧಗಳು ಹಾಗೂ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ 2013, 2014 & 2015ರಲ್ಲಿ ಪ್ರಕಟಿಸಿದ ಅಂಕಿ ಅಂಶಗಳನ್ನು ಆಧರಿಸಿರುತ್ತದೆ. ಪದಕಗಳ ಹಂಚಿಕೆಯನ್ನು ಮೂರು ವರ್ಷಗಳ ಬಳಿಕ ಸರಾಸರಿ ಅಪರಾಧ ಅಂಕಿ ಅಂಶಗಳ ಆಧಾರದಲ್ಲಿ ಪರಿಷ್ಕರಿಸಲಾಗುತ್ತದೆ.

Comment