IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಒಡಿಶಾ- ಛತ್ತೀಸ್‍ಗಢ ಜಲವ್ಯಾಜ್ಯ ನಿರ್ಣಯಕ್ಕೆ ಮಹಾನದಿ ನ್ಯಾಯಮಂಡಳಿ ರಚನೆ

ಒಡಿಶಾ- ಛತ್ತೀಸ್‍ಗಢ ಜಲವ್ಯಾಜ್ಯ ನಿರ್ಣಯಕ್ಕೆ ಮಹಾನದಿ ನ್ಯಾಯಮಂಡಳಿ ರಚನೆ

ಸುಧೀರ್ಘ ಕಾಲದಿಂದ ಒಡಿಶಾ ಮತ್ತು ಛತ್ತೀಸ್ಗಢ ರಾಜ್ಯಗಳ ನಡುವೆ ಇರುವ ಜಲ ವ್ಯಾಜ್ಯವನ್ನು ಪರಿಹರಿಸುವ ಬಗ್ಗೆ ತನಿಖೆ ಕೈಗೊಳ್ಳಲು ನ್ಯಾಯಮಂಡಳಿಯನ್ನು ಕೇಂದ್ರ ಸರ್ಕಾರ ರಚಿಸಿದೆ. ಮಹಾನದಿ ನದಿಯ ನೀರು ಹಂಚಿಕೆಗೆ ಸಂಬಂಧಿಸಿದಂತೆ ಉಭಯ ರಾಜ್ಯಗಳ ನಡುವೆ ವ್ಯಾಜ್ಯ ಇದೆ. ಜಲ ಸಂಪನ್ಮೂಲ, ನದಿ ಅಭವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಸಚಿವಾಲಯ ನ್ಯಾಯಮಂಡಳಿ ರಚಿಸಿದೆ.

ಅಂತರ ರಾಜ್ಯ ನದಿ ವ್ಯಾಜ್ಯ (ಐಎಸ್ಆರ್ಡಬ್ಲ್ಯುಡಿ) ಕಾಯ್ದೆ- 1956 ಅನ್ವಯ ನ್ಯಾಯಮಂಡಳಿಯನ್ನು ರಚಿಸಲಾಗುತ್ತದೆ. 2018 ಜನವರಿಯಲ್ಲಿ ಸುಪ್ರೀಂಕೋರ್ಟ್ ನೀಡಿದ ಆದೇಶಕ್ಕೆ ಅನುಗುಣವಾಗಿ ಒಡಿಶಾ ಮಾಡಿಕೊಂಡ ಮನವಿಯ ಮೇರೆಗೆ ನ್ಯಾಯಮಂಡಳಿ ರಚಿಸಲಾಗಿದೆ ಉಭಯ ರಾಜ್ಯಗಳ ನಡುವಿನ ಜಲಹಂಚಿಕೆ ವಿವಾದವನ್ನು ಪರಸ್ಪರ ಒಪ್ಪಂದ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ನ್ಯಾಯಮಂಡಳಿ ರಚಿಸುವಂತೆ ಒಡಿಶಾ ಪದೇ ಪದೇ ಮನವಿ ಮಾಡುತ್ತಾ ಬಂದಿತ್ತು.

ಪ್ರಮುಖ ಅಂಶಗಳು

ಮಹಾನದಿ ನದಿ ಪಾತ್ರದ ರಾಜ್ಯಗಳ ನಡುವೆ ನೀರಿನ ಹಂಚಿಕೆಯನ್ನು ನಿರ್ಧರಿಸಿ ನ್ಯಾಯಮಂಡಳಿ ತೀರ್ಪು ನೀಡುತ್ತದೆ. ಇಡೀ ಮಹಾನದಿ ನದಿಪಾತ್ರದಲ್ಲಿ ಲಭ್ಯವಿರುವ ಒಟ್ಟಾರೆ ನೀರಿನ ಪ್ರಮಾಣ, ಆಯಾ ರಾಜ್ಯಗಳ ಕೊಡುಗೆ, ಪ್ರತಿ ರಾಜ್ಯಗಳಿಂದ ಜಲ ಸಂಪನ್ಮೂಲಗಳ ಪ್ರಸ್ತುತ ಬಳಕೆ ಮತ್ತು ಭವಿಷ್ಯದ ಅಭಿವೃದ್ಧಿ ಸಾಧ್ಯತೆಗಳನ್ನು ಲೆಕ್ಕ ಹಾಕಿ ನದಿ ನೀರಿನ ಹಂಚಿಕೆ ಸೂತ್ರವನ್ನು ನ್ಯಾಯಮಂಡಳಿ ನೀಡುತ್ತದೆ.

ಸಂಯೋಜನೆ: ಅಂತರ ರಾಜ್ಯ ನದಿ ವ್ಯಾಜ್ಯ (ಐಎಸ್ಆರ್ಡಬ್ಲ್ಯುಡಿ) ಕಾಯ್ದೆ- 1956 ಅನ್ವಯ ನ್ಯಾಯಮಂಡಳಿಯಲ್ಲಿ ಮೂವರು ಸದಸ್ಯರಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿಗಳು ಸುಪ್ರೀಂಕೋರ್ಟ್ ನ್ಯಾಯಮೂರ್ತಿ .ಎಂ.ಖನ್ವೀಲ್ಕರ್ ಅವರನ್ನು ನ್ಯಾಯಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಇತರ ಇಬ್ಬರು ಸದಸ್ಯರೆಂದರೆ ಪಟ್ನಾ ಹೈಕೋರ್ಟ್ ನ್ಯಾಯಮೂರ್ತಿ ರವಿರಂಜನ್ ಹಾಗೂ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಇಂದ್ವೆರ್ಮೀತ್ ಕೌರ್ ಕೊಚಾರ್. ಜಲ ಸಂಬಂಧಿ ಸೂಕ್ಷ್ಮ ವಿಷಯಗಳನ್ನು ನಿರ್ವಹಿಸುವ ಸಲುವಾಗಿ ಇಬ್ಬರು ಜಲ ಸಂಪನ್ಮೂಲ ತಜ್ಞರ ಸೇವೆಯನ್ನು ಒದಗಿಸಲಾಗುತ್ತದೆ.

ಅವಧಿ: ನ್ಯಾಯಮಂಡಳಿಯ ಕೇಂದ್ರ ಕಚೇರಿ ನವದೆಹಲಿಯಲ್ಲಿರುತ್ತದೆ. ಅಂತರ ರಾಜ್ಯ ನದಿ ವ್ಯಾಜ್ಯ (ಐಎಸ್ಆರ್ಡಬ್ಲ್ಯುಡಿ) ಕಾಯ್ದೆ- 1956 ಅನ್ವಯ ನ್ಯಾಯಮಂಡಳಿ ತನ್ನ ವರದಿಯನ್ನು ಮೂರು ವರ್ಷಗಳ ಒಳಗಾಗಿ ನೀಡಬೇಕಾಗುತ್ತದೆ. ಅನಿವಾರ್ಯ ಸಂದರ್ಭದಲ್ಲಿ ಇದನ್ನು ಮತ್ತೆ ಎರಡು ವರ್ಷಗಳ ಕಾಲ ವಿಸ್ತರಿಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಹಿನ್ನೆಲೆ

1980 ದಶಕದ ಮಧ್ಯಭಾಗದಿಂದಲೂ ಒಡಿಶಾ ಹಾಗೂ ಛತ್ತೀಸ್ಗಢ ಮಹಾನದಿ ನದಿಯ ನೀರು ಹಂಚಿಕೆ ವಿಚಾರದಲ್ಲಿ ವ್ಯಾಜ್ಯ ಹೊಂದಿವೆ. ಮಹಾನದಿಯ ಮೇಲ್ಭಾಗದಲ್ಲಿ ಛತ್ತೀಸ್ಗಢ ಅಣೆಕಟ್ಟುಗಳನ್ನು ಕಟ್ಟುತ್ತಿದೆ ಎನ್ನುವುದು ಒಡಿಶಾ ಸರ್ಕಾರದ ಆರೋಪ. ಮೂಲಕ ನದಿ ನೀರನ್ನೇ ಅವಲಂಬಿಸಿರುವ ಒಡಿಶಾದ ರೈತರಿಗೆ ಹಕ್ಕು ನಿರಾಕರಿಸಿದಂತಾಗುತ್ತದ ಎಂದು ಒಡಿಶಾ ವಾದಿಸುತ್ತಾ ಬಂದಿದೆ. ಆದರೆ ಛತ್ತೀಸ್ಗಢ ನ್ಯಾಯಮಂಡಳಿ ರಚನೆಗೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿತ್ತು. 2000ನೇ ಇಸ್ವಿಯಲ್ಲಿ ಪ್ರತ್ಯೇಕ ರಾಜ್ಯ ನಿರ್ಮಾಣವಾಗುವ ಮುನ್ನ ಮಧ್ಯಪ್ರದೇಶ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ತನಗೂ ಒಪ್ಪಂದಕ್ಕೂ ಸಂಬಂಧ ಇಲ್ಲ ಎನ್ನುವ ವಾದವನ್ನು ಛತ್ತೀಸ್ಗಢ ರಾಜ್ಯ ಮಂಡಿಸುತ್ತಾ ಬಂದಿತ್ತು.

ಮಹಾನದಿ

ಮಹಾನದಿಯು ಪೂರ್ವ ಕೇಂದ್ರ ಭಾರತದ ಪ್ರಮುಖ ನದಿಯಾಗಿದೆ. ಇದು 141600 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಿಯುತ್ತದೆ. ಒಟ್ಟು 858 ಕಿಲೋಮೀಟರ್ ಉದ್ದವಿದೆ. ಇದು ಛತ್ತೀಸ್ಗಢ ಮತ್ತು ಒಡಿಶಾ ರಾಜ್ಯಗಳ ಮೂಲಕ ಹರಿಯುತ್ತದೆ. ಇದು ಛತ್ತೀಸ್ಗಢದ ಬೆಟ್ಟಪ್ರದೇಶದಲ್ಲಿ ಹುಟ್ಟಿ, ಹಲವು ಉಪನದಿಗಳು ಹಾಗೂ ತೊರೆಗಳನ್ನು ಸೇರಿಸಿಕೊಂಡು ಬಂಗಾಳಕೊಲ್ಲಿಯನ್ನು ಸೇರುತ್ತದೆ. ಇದರ ಎಡದಂಡೆಯ ಉಪನದಿಗಳೆಂದರೆ ಶಿವನಾಥ್, ಮಂದ್, ಐಬ್ ಮತ್ತು ಹೆಸ್ಡಿಯೊ. ಬಲದಂಡೆಯಲ್ಲಿ ಓಂಗ್, ಪಾರಿ ನದಿ, ಜೋಂಕ್ ಮತ್ತು ತೆಲನ್ ಉಪನದಿಗಳು ಮಹಾನದಿಯನ್ನು ಸೇರುತ್ತವೆ.

Comment