IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

2018ರ ಜನವರಿಯಲ್ಲಿ ಐಐಪಿ ಶೇಕಡ 7.5ಕ್ಕೆ ಹೆಚ್ಚಳ

2018ರ ಜನವರಿಯಲ್ಲಿ ಐಐಪಿ ಶೇಕಡ 7.5ಕ್ಕೆ ಹೆಚ್ಚಳ

ಕೇಂದ್ರದ ಅಂಕಿ ಸಂಖ್ಯೆಗಳ ಕಚೇರಿ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ಕೈಗಾರಿಕಾ ಉತ್ಪಾದನಾ ಸೂಚ್ಯಂಕ 2018 ಜನವರಿಯಲ್ಲಿ ಶೇಕಡ 7.5ಕ್ಕೆ ಹೆಚ್ಚಿದೆ. ಇದಕ್ಕೆ ಮುಖ್ಯ ಕಾರಣ ಗಣಿಗಾರಿಕೆ ಹಾಗೂ ವಿದ್ಯುತ್ ಕ್ಷೇತ್ರದಲ್ಲಿ ಆಗಿರುವ ಸಾಧನೆ. ಹೆಚ್ಚಳವು ಕೈಗಾರಿಕಾ ಕ್ಷೇತ್ರದ ಪುನಶ್ಚೇತನದ ಆರಂಭಿಕ ಸೂಚನೆಗಳನ್ನು ನೀಡುತ್ತದೆ.

ಫ್ಯಾಕ್ಟರಿ ಉತ್ಪಾದನೆ 2017 ಡಿಸೆಂಬರ್ನಲ್ಲಿ ಶೇಕಡ 7.1 ಆಗಿತ್ತು. ಇದಕ್ಕೂ ಮುನ್ನ 2017 ನವೆಂಬರ್ನಲ್ಲಿ 25 ತಿಂಗಳ ಗರಿಷ್ಠ ಅಂದರೆ ಶೇಕಡ 8.4ಕ್ಕೆ ಏರಿತ್ತು. ಏಪ್ರಿಲ್ನಿಂದ ಜನವರಿವರೆಗೆ ಕ್ರೋಢೀಕೃತ ಐಪಿಪಿ ಪ್ರಗತಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 4.1ರಷ್ಟು ಅಧಿಕವಾಗಿದೆ.

ಪ್ರಮುಖ ಅಂಶಗಳು

  • ಉತ್ಪಾದನಾ ಕ್ಷೇತ್ರದ ಉತ್ಪನ್ನ 2018 ಜನವರಿಯಲ್ಲಿ ಶೇಕಡ 8.7ಕ್ಕೆ ಹೆಚ್ಚಿದೆ. ಪ್ರಮಾಣ 2017 ಡಿಸೆಂಬರ್ನಲ್ಲಿ 8.5 ಆಗಿತ್ತು. ಇದಕ್ಕೆ ಮುಖ್ಯ ಕಾರಣ ಗ್ರಾಹಕ ವಸ್ತುಗಳ ಉತ್ಪಾದನೆಯಲ್ಲಿ ಹೆಚ್ಚಳ ಹಾಗೂ ಬಂಡವಾಳ ಸರಕುಗಳ ಉತ್ಪಾದನೆ ಎರಡಂಕಿ ಪ್ರಗತಿಯನ್ನು ಕಂಡಿರುವುದು.
  • ಗಣಿಗಾರಿಕೆ ವಲಯದ ಉತ್ಪಾದನೆ ಶೇಕಡ 0.1ರಷ್ಟು ಹೆಚ್ಚಳ ಕಂಡಿದ್ದು, 2017 ಡಿಸೆಂಬರ್ನಲ್ಲಿ ಪ್ರಮಾಣ 1.2 ಶೇಕಡ ಆಗಿತ್ತು.
  • ಉತ್ಪಾದನೆಯಾದ ವಿದ್ಯುತ್ ಪ್ರಮಾಣ 2018 ಜನವರಿಯಲ್ಲಿ ಶೇಕಡ 7.6ರಷ್ಟು ಹೆಚ್ಚಿದೆ. ಪ್ರಗತಿ ಪ್ರಮಾಣ 2017 ಡಿಸೆಂಬರ್ನಲ್ಲಿ ಶೇಕಡ 4.4 ಆಗಿತ್ತು.
  • ಬಂಡವಾಳ ಸರಕುಗಳ ಉತ್ಪಾದನೆ 2018 ಜನವರಿಯಲ್ಲಿ ಶೇಕಡ 14.6 ಆಗಿದ್ದರೆ, ಹಿಂದಿನ ತಿಂಗಳಿನಲ್ಲಿ ಇದು ಶೇಕಡ 16.4 ಆಗಿತ್ತು.
  • ಗ್ರಾಹಕ ವಸ್ತು ಉತ್ಪಾದನೆ 2018 ಜನವರಿಯಲ್ಲಿ 8ರಷ್ಟು ಹೆಚ್ಚಳವಾಗಿದೆ. 2017 ಡಿಸೆಂಬರ್ನಲ್ಲಿ ಪ್ರಮಾಣ ಕೇವಲ ಶೇಕಡ 0.9ರಷ್ಟು ಆಗಿತ್ತು.
  • ಗ್ರಾಹಕ ಬಳಕೆಯ ದಿನೋಪಯೋಗಿ ವಸ್ತುಗಳ ಉತ್ಪಾದನೆ ಅವಧಿಯಲ್ಲಿ ಶೇಕಡ 10.5ರಷ್ಟು ಹೆಚ್ಚಿದೆ. ಹಿಂದಿನ ತಿಂಗಳು ಇದು ಶೇಕಡ 16.5 ಆಗಿತ್ತು.

ಐಪಿಪಿ

ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಪಿಪಿ) ಎನ್ನುವುದು, ನಿರ್ದಿಷ್ಟ ವರ್ಷವನ್ನು ಮೂಲವಾಗಿ ಇರಿಸಿಕೊಂಡು, ನಿಗದಿತ ಅವಧಿಯಲ್ಲಿ ಆಗುವ ಕೈಗಾರಿಕಾ ಉತ್ಪಾದನೆಯನ್ನು ಅಳೆಯುವ ಅಲ್ಪಾವಧಿ ವಿಧಾನವಾಗಿದೆ. ಇದನ್ನು ಅಂಕಿ ಸಂಖ್ಯೆಗಳ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದಡಿ ಕಾರ್ಯನಿರ್ವಹಿಸುವ ಅಂಕಿ ಅಂಶಗಳ ಕಚೇರಿ ಮಾಸಿಕವಾಗಿ ಕ್ರೋಢೀಕರಿಸಿ ಪ್ರಕಟಿಸುತ್ತದೆ.

ಪ್ರಸ್ತುತ ಸಿಎಸ್, ಹಿಂದೆ ಇದ್ದ 2004-05 ಮೂಲವರ್ಷದ ಬದಲಾಗಿ 2011-12ಕ್ಕೆ ಪರಿಷ್ಕರಿಸಲಾಗಿದೆ. 2017 ಮೇ ತಿಂಗಳಲ್ಲಿ ಪರಿಷ್ಕರಣೆ ಮಾಡಲಾಗಿದೆ. ಆರ್ಥಿಕತೆಯ ರಾಚನಿಕ ಬದಲಾವಣೆಯನ್ನು ಪರಿಗಣಿಸುವ ಸಲುವಾಗಿ ಹಾಗೂ ಸೂಚಕಗಳ ಗುಣಮಟ್ಟ ಹಾಗೂ ಪ್ರಾತಿನಿಧ್ಯವನ್ನು ಸುಧಾರಿಸುವ ದೃಷ್ಟಿಯಿಂದ ಬದಲಾವಣೆ ಮಾಡಲಾಗಿದೆ. ಪರಿಷ್ಕø ಐಪಿಪಿ, ಕೈಗಾರಿಕಾ ವಲಯದ ಬದಲಾವಣೆಗಳನ್ನು ಪ್ರತಿಫಲಿಸುವ ಜತೆಗೆ, ಇತರ ದೊಡ್ಡ ಪ್ರಮಾಣದ ಸೂಚಕಗಳಾದ ಸಗಟು ಬೆಲೆ ಸೂಚ್ಯಂಕ ಹಾಗೂ ಜಿಡಿಪಿ ಬದಲಾವಣೆಗಳ ಜತೆ ಸಮನ್ವಯಗೊಳಿಸುತ್ತದೆ.

ಐಪಿಪಿ ಮುಖ್ಯವಾಗಿ 407 ಉತ್ಪನ್ನಗಳ ಗುಂಪುಗಳನ್ನು ಒಳಗೊಳ್ಳುತ್ತದೆ. ವಲಯವಾರು ಮೂರು ವರ್ಗಗಳಿದ್ದು, ಇದರಲ್ಲಿ ಉತ್ಪಾದನಾ ವಲಯದಲ್ಲಿ 405 ವಸ್ತುಗಳು, ಗಣಿಗಾರಿಕಾ ಘಟಕದಲ್ಲಿ ಒಂದು ಹಾಗೂ ವಿದ್ಯುತ್ ಘಟಕದಲ್ಲಿ ಒಂದು ಉತ್ಪನ್ನ ಸೇರುತ್ತದೆ. ಮೂರು ವಲಯಗಳಿಗೆ ನೀಡುವ ಒತ್ತು ಕ್ರಮವಾಗಿ ಶೇಕಡ 77.63, ಶೇಕಡ 14.37 ಹಾಗೂ ಶೇಕಡ 7.9 ಆಗಿರುತ್ತದೆ. ಪರಿಷ್ಕø ಎಂಟು ಪ್ರಮುಖ ಕೈಗಾರಿಕೆಗಳ ಒಟ್ಟಾರೆ ಒತ್ತು ಅಂಶ ಶೇಕಡ 40.27 ಆಗಿರುತ್ತದೆ.

Comment